ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಂತಿಮ ಪ್ರಯೋಗಕ್ಕೂ ಮುನ್ನವೇ ರಷ್ಯಾದ ಕೊರೊನಾ ಲಸಿಕೆಗೆ ಅನುಮೋದನೆ'

|
Google Oneindia Kannada News

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಮೇಲೆ ಸಾಕಷ್ಟು ಪ್ರಯೋಗಗಳನ್ನು ನಡೆಸಿಲ್ಲ ಎಂದು ಜರ್ಮನಿಯ ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಹೇಳಿದ್ದಾರೆ.

ಜನರಿಗೆ ಲಸಿಕೆ ನೀಡಲು ಪ್ರಾರಂಭಿಸುವುದಕ್ಕಿಂತ ಮೊದಲು ಅದು ಸುರಕ್ಷಿತ ಉತ್ಪನ್ನವೇ ಎಂದು ಪರೀಕ್ಷಿಸುವ ಅಗತ್ಯವಿದೆ.ಎರಡು ತಿಂಗಳಿಗಿಂತ ಕಡಿಮೆ ಮಾನವ ಪರೀಕ್ಷೆಯ ನಂತರ ಸಿಒವಿಐಡಿ -19 ಲಸಿಕೆಗೆ ನಿಯಂತ್ರಕ ಅನುಮೋದನೆ ನೀಡಿದ ಮೊದಲ ದೇಶ ರಷ್ಯಾ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದರು.

ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ ಆಯ್ತು: ಯಾರ ಮೇಲೆ ಮೊದಲ ಪ್ರಯೋಗ?ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ ಆಯ್ತು: ಯಾರ ಮೇಲೆ ಮೊದಲ ಪ್ರಯೋಗ?

ಅಂತಿಮ ಪ್ರಯೋಗಗಳು ಪೂರ್ಣಗೊಳ್ಳುವ ಮೊದಲು ಅನುಮೋದನೆ ನೀಡುವ ಮಾಸ್ಕೋದ ನಿರ್ಧಾರವು ಕೆಲವು ತಜ್ಞರಲ್ಲಿ ಕಳವಳವನ್ನು ಉಂಟುಮಾಡಿದೆ. ಇನ್ನೂ ಮೂರನೇ ಹಂತದ ಪ್ರಯೋಗ ಬಾಕಿ ಇದೆ.

ಕೋಟ್ಯಂತರ ಜನರಿಗೆ ಲಸಿಕೆ ನೀಡುವುದು ಅಪಾಯಕಾರಿ

ಕೋಟ್ಯಂತರ ಜನರಿಗೆ ಲಸಿಕೆ ನೀಡುವುದು ಅಪಾಯಕಾರಿ

ಕೋಟ್ಯಂತರ ಜನರಿಗೆ ಲಸಿಕೆ ಹಾಕಲು ಪ್ರಾರಂಭಿಸುವುದು ಅಪಾಯಕಾರಿ ಏಕೆಂದರೆ ಲಸಿಕೆ ತಪ್ಪಾದರೆ ಅದು ಜನರ ನಂಬಿಕೆ ಅಷ್ಟೇ ಅಲ್ಲದೆ ಜೀವಕ್ಕೂ ಕೂಡ ಅಪಾಯಕಾರಿ.

ಹೆಚ್ಚು ಪರೀಕ್ಷೆಗೆ ಒಳಪಡಿಸಿಲ್ಲ

ಹೆಚ್ಚು ಪರೀಕ್ಷೆಗೆ ಒಳಪಡಿಸಿಲ್ಲ

ಲಸಿಕೆ ದೊರೆಯುತ್ತಿದೆ ಎಂಬುದು ಖುಷಿಯ ವಿಚಾರವೇ ಸರಿ, ರಷ್ಯಾದವರು ಲಸಿಕೆಯನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಸರಿಯಾದ ಅಧ್ಯಯನಗಳು ಮತ್ತು ಪರೀಕ್ಷೆಗಳನ್ನು ನಡೆಸುವುದು ಮತ್ತು ಜನರ ವಿಶ್ವಾಸವನ್ನು ಗಳಿಸುವುದು ಕೂಡ ಮುಖ್ಯವಾಗಿರುತ್ತೆ.

ಹೇಗಾದರೂ ಸರಿಯೇ ಮೊದಲಿಗರಾಗಬೇಕು ಎನ್ನುವ ಧಾವಂತ ಬಿಡಿ

ಹೇಗಾದರೂ ಸರಿಯೇ ಮೊದಲಿಗರಾಗಬೇಕು ಎನ್ನುವ ಧಾವಂತ ಬಿಡಿ

ಹೇಗಾದರೂ ಮಾಡಿ ಮೊದಲಿಗರಾಗಬೇಕು ಎನ್ನುವ ಧಾವಂತವನ್ನು ಬಿಡಿ, ಸುರಕ್ಷಿತ ಲಸಿಕೆ ಹೊಂದುವ ಬಗ್ಗೆ ಹೆಚ್ಚು ಗಮನಕೊಡಿ. ಕೇವಲ ಶೇ.10ರಷ್ಟು ಕ್ಲಿನಿಕಲ್ ಪ್ರಯೋಗಗಳು ಯಶಸ್ವಿಯಾಗಿವೆ. ಸೆಪ್ಟೆಂಬರ್‌ನಲ್ಲಿ ಎಲ್ಲರಿಗೂ ಲಸಿಕೆ ದೊರೆಯಲಿದೆ, ಅಕ್ಟೋಬರ್‌ನಲ್ಲಿ ಶಿಕ್ಷಕರ ಹಾಗೂ ವೈದ್ಯರಿಗೆ ಮೊದಲು ಲಸಿಕೆ ನೀಡಲಾಗುತ್ತದೆ.

ಯಾವ್ಯಾವ ದೇಶಗಳಲ್ಲಿ ಲಸಿಕೆ ಉತ್ಪಾದನೆ

ಯಾವ್ಯಾವ ದೇಶಗಳಲ್ಲಿ ಲಸಿಕೆ ಉತ್ಪಾದನೆ

ಇನ್ನು ಭಾರತ ಮತ್ತು ಬ್ರೆಜಿಲ್ ಸೇರಿದಂತೆ ವಿಶ್ವದ 20 ರಾಷ್ಟ್ರಗಳು ರಷ್ಯಾದ ಈ ಲಸಿಕೆಯನ್ನು ತಮ್ಮ ದೇಶಗಳಲ್ಲಿ ಉತ್ಪಾದಿಸಲು ಮುಂದೆ ಬಂದಿವೆ ಎಂದು ರಷ್ಯಾ ಹೇಳಿದೆ. ಆದರೆ ಅಮೆರಿಕ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ರಷ್ಯಾದ ಸಲಿಕೆ ಬಗ್ಗೆ ಅಪಸ್ವರ ಎತ್ತಿದ್ದು, ಅದರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಆದರೆ ಏನೇ ಇರಲಿ ರಷ್ಯಾದ ಈ ಲಸಿಕೆ ಯಶಸ್ವಿಯಾಗಲಿ ಎನ್ನುವುದೇ ವಿಶ್ವದ ಜನರ ಹಾರೈಕೆಯಾಗಿದೆ.

English summary
BERLIN German Health Minister Jens Spahn on Wednesday said Russia’s COVID-19 vaccine had not been sufficiently tested, adding the aim was to have a safe product rather than just being first to start vaccinating people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X