ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್, ಕೊರೊನಾದಿಂದ ಆರ್ಥಿಕತೆಗೆ ಪೆಟ್ಟು: ಆತ್ಮಹತ್ಯೆ ಮಾಡಿಕೊಂಡ ಜರ್ಮನಿ ಹಣಕಾಸು ಸಚಿವ

|
Google Oneindia Kannada News

ಪ್ಯಾರಿಸ್, ಮಾರ್ಚ್ 29: ಆಘಾತಕಾರಿ ವಿದ್ಯಮಾನವೊಂದರಲ್ಲಿ ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಸಚಿವ ಥಾಮಸ್ ಶೆಫೆರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊರೊನಾ ವೈರಸ್ ದಾಳಿಯಿಂದ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದೆಗೆಡುತ್ತಿರುವುದರಿಂದ, ತೀವ್ರ ಚಿಂತೆಗೀಡಾಗಿ ಥಾಮಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ರಾಜ್ಯದ ಮುಖ್ಯಸ್ಥ ವೋಲ್ಕರ್ ಬಫೆರ್ ಹೇಳಿದ್ದಾರೆ.

ಕೊರೊನಾ ಕುರಿತ ಸರ್ವ ಪಕ್ಷಗಳ ಸಭೆ - ತೆಗೆದುಕೊಂಡ ನಿರ್ಣಯಗಳುಕೊರೊನಾ ಕುರಿತ ಸರ್ವ ಪಕ್ಷಗಳ ಸಭೆ - ತೆಗೆದುಕೊಂಡ ನಿರ್ಣಯಗಳು

54ವರ್ಷದ ಥಾಮಸ್ ಅವರ ದೇಹ ಶನಿವಾರ (ಮಾ 28) ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

German State Hesse Finance Minister Kills Himself As Coronavirus Hits Economy

"ಘಟನೆಯನ್ನು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಮತ್ತು ಇದು ನಮ್ಮನ್ನು ತೀವ್ರ ಚಿಂತೆಗೀಡು ಮಾಡಿದೆ" ಎಂದು ವೋಲ್ಕರ್ ಬಫೆರ್ ವಿಷಾದ ವ್ಯಕ್ತ ಪಡಿಸಿದ್ದಾರೆ.

ಜರ್ಮನಿಯ ವಾಣಿಜ್ಯ ನಗರ ಫ್ರಾಂಕ್ ಫರ್ಟ್ ಹೆಸ್ಸೆ ರಾಜ್ಯದಲ್ಲಿದ್ದು, ಡಚ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಸೇರಿದಂತೆ, ಹಲವು ಸಂಸ್ಥೆಗಳು ಈ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿವೆ.

'ಕೊರೊನಾ ದಾಳಿಯ ನಂತರ ಹೆಸ್ಸೆ ರಾಜ್ಯದ ಆರ್ಥಿಕ ಪರಿಸ್ಥಿತಿ ಏರುಪೇರಾಗಬಾರದೆಂದು ಥಾಮಸ್ ಹಗಲುರಾತ್ರಿ ಕೆಲಸ ಮಾಡುತ್ತಿದ್ದರು" ಎಂದು ವೋಲ್ಕರ್ ನೆನೆಪಿಸಿಕೊಂಡಿದ್ದಾರೆ.

English summary
German State Hesse Finance Minister Kills Himself As Coronavirus Hits Economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X