ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಡುತ್ತಿರುವ ಜರ್ಮನ್ ವೈದ್ಯರಿಂದ 'ನಗ್ನ' ಪ್ರತಿಭಟನೆ: ಕಾರಣವೇನು?

|
Google Oneindia Kannada News

ಜರ್ಮನ್, ಏಪ್ರಿಲ್ 28: ಕೊರೊನಾ ವೈರಸ್‌ ಇಡೀ ಜಗತ್ತನ್ನು ಕಿತ್ತು ತಿನ್ನುತ್ತಿದೆ. ವಿಶ್ವದಾದ್ಯಂತ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 30 ಲಕ್ಷಕ್ಕಿಂತ ಅಧಿಕ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಈ ಮಹಾಮಾರಿಯಿಂದ ಜನರ ಪ್ರಾಣವನ್ನು ರಕ್ಷಿಸಲು ವೈದ್ಯರು, ನರ್ಸ್‌ಗಳು ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಈ ಹೋರಾಟದಲ್ಲಿ ನೂರಾರು ವೈದ್ಯರು ಪ್ರಾಣತ್ಯಾಗ ಮಾಡಿದ್ದಾರೆ.

ಲೈಂಗಿಕ ಕ್ರಿಯೆಯಿಂದ ಕೊರೊನಾ ವೈರಸ್ ಹರಡುತ್ತಾ? ಸಂಶೋಧನೆಯಿಂದ ತಿಳಿದು ಬಂದ 'ಸತ್ಯ'ಲೈಂಗಿಕ ಕ್ರಿಯೆಯಿಂದ ಕೊರೊನಾ ವೈರಸ್ ಹರಡುತ್ತಾ? ಸಂಶೋಧನೆಯಿಂದ ತಿಳಿದು ಬಂದ 'ಸತ್ಯ'

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಜರ್ಮನ್ ವೈದ್ಯರು ವಿಶೇಷವಾಗಿ ಪ್ರತಿಭಟನೆ ಮಾಡಿದ್ದಾರೆ. ಕೊವಿಡ್ ವಿರುದ್ಧ ಬಹಳ ಸುರಕ್ಷಿತೆಯಿಂದ ಹೋರಾಡಬೇಕಾಗಿರುವ ವೈದ್ಯರು ನಗ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಈ ಪ್ರತಿಭಟನೆಗೆ ಕಾರಣವೇನು? ಮುಂದೆ ಓದಿ....

ನಗ್ನ ಪ್ರತಿಭಟನೆಗೆ ಕಾರಣವೇನು?

ನಗ್ನ ಪ್ರತಿಭಟನೆಗೆ ಕಾರಣವೇನು?

ಕೊರೊನಾ ವೈರಸ್ ವಿರುದ್ಧ ಹೋರಾಡಲು ವೈದ್ಯರಿಗೆ ಬಹಳ ಉಪಯುಕ್ತವಾಗಿರುವುದು ಪಿಪಿಇ ಕಿಟ್‌ಗಳು. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಅಂದ್ರೆ ವೈದ್ಯರಿಗೆ, ನರ್ಸ್‌ಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಅತ್ಯಗತ್ಯ. ಆದರೆ, ವೈದ್ಯರ ರಕ್ಷಣೆಗೆ ಇರುವ ಪಿಪಿಇ ಕಿಟ್‌ಗಳ ಕೊರತೆ ಇದೆ ಎಂಬ ಕಾರಣಕ್ಕಾಗಿ ಜರ್ಮನ್ ವ್ಯದ್ಯರು ನಗ್ನವಾಗಿ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುಲು ಪ್ರಯತ್ನಿಸಿದ್ದಾರೆ.

ವೈದ್ಯರಿಗೆ ಅಪಾಯ ಇದೆ

ವೈದ್ಯರಿಗೆ ಅಪಾಯ ಇದೆ

ಜರ್ಮನ್‌ನ ಒಂದು ಗುಂಪಿನ ವೈದ್ಯರು ನಗ್ನ ಪ್ರತಿಭಟನೆ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಅಪಾಯ ಇದೆ. ಈ ಹೆಮ್ಮಾರಿ ವಿರುದ್ಧ ಫೈಟ್ ಮಾಡಲು ಅಗತ್ಯ ಪಿಪಿಇ ಕಿಟ್‌ಗಳು ಇಲ್ಲ. ಈ ಬಗ್ಗೆ ಎಷ್ಟೇ ಹೇಳಿದರೂ ಯಾರೊಬ್ಬರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ವೈದ್ಯರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಜರ್ಮನಿಯ ಸ್ಪತ್ರೆಗಳಿಂದ ಸೋಂಕುನಿವಾರಕ ಮತ್ತು ಮುಖವಾಡಗಳು ಕಳ್ಳತನ ಆಗಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

ದುರ್ಬಲತೆಯ ಸಂಕೇತ ಈ ನಗ್ನತೆ

ದುರ್ಬಲತೆಯ ಸಂಕೇತ ಈ ನಗ್ನತೆ

ನಗ್ನತೆ ಎನ್ನುವುದು ನಾವು ರಕ್ಷಣೆ ಇಲ್ಲದೆ ದುರ್ಬಲವಾಗಿದ್ದೇವೆ ಎನ್ನುವುದರ ಸಂಕೇತ. ಆದ್ದರಿಂದ ಇಂತಹ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಜರ್ಮನ್‌ ಹಿರಿಯ ವೈದ್ಯರೊಬ್ಬರು ಹೇಳಿಕೊಂಡಿದ್ದಾರೆ. 'ಕೊರೊನಾದಿಂದ ಕಷ್ಟದ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಬಯಸುತ್ತೇವೆ. ಆದರೆ, ಅದಕ್ಕಾಗಿ ನಮಗೆ ಪಿಪಿಇ ಅಗತ್ಯವಿದೆ' ಎಂದು ಬೇಡಿಕೆ ಇಟ್ಟಿದ್ದಾರೆ. ಜರ್ಮನಿಗೆ ವೈರಸ್ ಬಂದ ಕ್ಷಣದಿಂದ ಜರ್ಮನ್ ವೈದ್ಯರು ಹೆಚ್ಚಿನ ಪಿಪಿಇ ಕಿಟ್‌ಗಾಗಿ ಪದೇ ಪದೇ ಮನವಿ ಮಾಡಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರ ಸೂಕ್ಷ್ಮವಾಗಿ ಪರಿಗಣಿಸಿಲ್ಲ.

ದಿಟ್ಟ ಹೋರಾಟ ನಡೆಸುತ್ತಿದೆ ಜರ್ಮನಿ

ದಿಟ್ಟ ಹೋರಾಟ ನಡೆಸುತ್ತಿದೆ ಜರ್ಮನಿ

ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಜರ್ಮನಿಯ ಸ್ಥಿತಿ ಸ್ವಲ್ಪ ಸಮಾಧಾನ ತಂದಿದೆ. 1.58 ಲಕ್ಷ ಸೋಂಕಿತರನ್ನು ಹೊಂದಿರುವ ಜರ್ಮನಿಯಲ್ಲಿ 6.126 ಜನರು ಮೃತಪಟ್ಟಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿಕೊಂಡರೆ, ಜರ್ಮನಿಯಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ ಕಡಿಮೆ ಇದೆ. ಜರ್ಮನಿಯಷ್ಟೇ ಸೋಂಕಿತರನ್ನು ಹೊಂದಿರುವ ಇಟಲಿ, ಯುಕೆ, ಫ್ರಾನ್ಸ್ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ 20 ಸಾವಿರ ಗಡಿದಾಟಿದೆ.

ಕೊರೊನಾ; ಒಂದೇ ದಿನದಲ್ಲಿ ಹೆಚ್ಚು ಸಾವು, ದಾಖಲೆ ಬರೆದ ಭಾರತಕೊರೊನಾ; ಒಂದೇ ದಿನದಲ್ಲಿ ಹೆಚ್ಚು ಸಾವು, ದಾಖಲೆ ಬರೆದ ಭಾರತ

English summary
German doctors are posting naked pictures of themselves in their practices to protest the acute lack of personal protection equipment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X