ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನಿ ಪಾಲಿನ ಉಕ್ಕಿನ ಮಹಿಳೆ ಏಂಜೆಲಾ ಮಾರ್ಕೆಲ್ ನಿವೃತ್ತಿ

|
Google Oneindia Kannada News

ಜರ್ಮನಿ ಪಾಲಿನ ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದಿದ್ದ ಏಂಜೆಲಾ ಮಾರ್ಕೆಲ್ ರಾಜಕೀಯ ನಿವೃತ್ತಿ ಪಡೆಯುತ್ತಿರುವ ಬೆನ್ನಲ್ಲೇ, ಮಾರ್ಕೆಲ್ ಪಕ್ಷ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಸುಮಾರು 2 ದಶಕಗಳ ಕಾಲ 'ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಆಫ್ ಜರ್ಮನಿ' ನಾಯಕಿಯಾಗಿದ್ದ ಮಾರ್ಕೆಲ್ ಜಗತ್ತಿನ ಗಮನ ಸೆಳೆದಿದ್ದರು. ಅಲ್ಲದೆ ಜರ್ಮನಿ ಅಭಿವೃದ್ಧಿಯಲ್ಲಿ ಏಂಜೆಲಾ ಮಾರ್ಕೆಲ್ ಪಾಲು ದೊಡ್ಡದಿದೆ.

2000ನೇ ವರ್ಷದಿಂದ ಜರ್ಮನಿಯಲ್ಲಿ ಶುರುವಾದ ಮಾರ್ಕೆಲ್ ಯುಗ ಈಗ ಅಂತ್ಯವಾಗಿದೆ. ಈಗಾಗಲೇ ಮಾರ್ಕೆಲ್ ಘೋಷಿಸಿರುವಂತೆ ಮುಂದಿನ ಜರ್ಮನಿಯ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಭಾಗವಹಿಸುತ್ತಿಲ್ಲ. ಇದೇ ಕಾರಣಕ್ಕೆ ಹೊಸ ನಾಯಕನ ಆಯ್ಕೆ ಅನಿವಾರ್ಯವಾಗಿತ್ತು.

ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?

ಹೀಗಾಗಿ ಮಾರ್ಕೆಲ್ ಅವರ ಪಕ್ಷ 'ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಆಫ್ ಜರ್ಮನಿ' ಹೊಸ ನಾಯಕನ ಆಯ್ಕೆಮಾಡಿದೆ. 59 ವರ್ಷದ ಅರ್ಮಿನ್ ಲಾಸ್ಚೆಟ್ ಹೊಸ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದೇ ವರ್ಷದ ಅಂತ್ಯದಲ್ಲಿ ಜರ್ಮನಿಯ ಸಂಸತ್‌ಗೆ ಚುನಾವಣೆ ನಡೆಯಲಿದ್ದು, ಹೊಸ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.

ಯುರೋಪ್‌ ಅಭಿವೃದ್ಧಿಯ ಅಡಿಪಾಯ

ಯುರೋಪ್‌ ಅಭಿವೃದ್ಧಿಯ ಅಡಿಪಾಯ

ಏಂಜೆಲಾ ಮಾರ್ಕೆಲ್ ದುಡಿದಿದ್ದು ಕೇವಲ ಜರ್ಮನಿ ಅಭಿವೃದ್ಧಿಗೆ ಮಾತ್ರವಲ್ಲ, ಯುರೋಪ್ ಒಗ್ಗಟ್ಟಿಗೂ ಅವರು ಹಾಕಿಕೊಟ್ಟ ಅಡಿಪಾಯ ದೊಡ್ಡದಿದೆ. ಆಧುನಿಕ ಜಗತ್ತಿನಲ್ಲಿ ಯುರೋಪ್ ಹೇಗೆ ಜಾಗತಿಕವಾಗಿ ಬೆಳೆಯಬೇಕು ಎಂಬುದನ್ನು ಮುಂದೆ ನಿಂತು ತೋರಿಸಿಕೊಟ್ಟವರು ಮಾರ್ಕೆಲ್. ಅಲ್ಲದೆ ಕೊರೊನಾ ಸ್ಥಿತಿ ಕೈಮೀರಿ ಹೋದಾಗ ಜರ್ಮನಿ ಯುರೋಪ್‌ನ ಇತರ ರಾಷ್ಟ್ರಗಳಿಗೂ ಮಾದರಿ ಆಗಿತ್ತು. ಅದಕ್ಕೆಲ್ಲಾ ಕಾರಣ ಇದೇ ಮಾರ್ಕೆಲ್ ನಾಯಕತ್ವ. ಆದರೆ ಅವರೇ ಈಗ ಅಧಿಕಾರ ತೊರೆಯುತ್ತಿರುವುದು ಸಹಜವಾಗಿ ಜರ್ಮನಿ ಜನರಿಗೆ ನೋವುಂಟು ಮಾಡಿದೆ.

ಚೀನಿ ಗ್ಯಾಂಗ್‌ಗೆ ತಕ್ಕ ಉತ್ತರ..!

ಚೀನಿ ಗ್ಯಾಂಗ್‌ಗೆ ತಕ್ಕ ಉತ್ತರ..!

ಏಷ್ಯಾದ ಬಹುಪಾಲು ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಿರುವ ಚೀನಿಯರಿಗೆ ಯುರೋಪ್ ಮೇಲೆ ಏನೋ ಮೋಹ. ಹೀಗೆ ಯುರೋಪ್ ಅನ್ನ ಹಿಡಿ ಹಿಡಿಯಾಗಿ ನುಂಗಬೇಕು ಅಂತಾ ಡ್ರ್ಯಾಗನ್ ಕಾಯುತ್ತಿದೆ. ಆದರೆ ಯುರೋಪ್‌ನ ಸಂಸ್ಕೃತಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಹೀಗೆ ಚೀನಾ ಯುರೋಪ್ ಮೇಲೆ ತನ್ನ ಹಿಡಿತ ಬಿಗಿ ಮಾಡಲು ಹೋದ ಸಂದರ್ಭದಲ್ಲಿ, ಚೀನಿಯರ ಬುಡಕ್ಕೆ ಬಿಸಿನೀರು ಬಿಟ್ಟಿದ್ದು ಇದೇ ಜರ್ಮನಿ. ಮಾರ್ಕೆಲ್ ಅವರ ಬಿಗಿ ನಿಲುವುಗಳು ಚೀನಿಯರಿಗೆ ಯುರೋಪ್ ಸುಲಭದ ತುತ್ತಲ್ಲ ಎಂಬುದನ್ನ ಸಾಬೀತು ಮಾಡಿತ್ತು.

ಟರ್ಮಿನಲ್ ಕಥೆ ನೆನಪಿಸಿದ ಐಜಿಐ ವಿಮಾನ ನಿಲ್ದಾಣದಲ್ಲಿದ್ದ ಜರ್ಮನ್ಟರ್ಮಿನಲ್ ಕಥೆ ನೆನಪಿಸಿದ ಐಜಿಐ ವಿಮಾನ ನಿಲ್ದಾಣದಲ್ಲಿದ್ದ ಜರ್ಮನ್

ಅಮೆರಿಕ ಇಲ್ಲದೆ ಬೆಳೆದರು..!

ಅಮೆರಿಕ ಇಲ್ಲದೆ ಬೆಳೆದರು..!

ಹೌದು, ಅಮೆರಿಕ ಇಲ್ಲದೆ ಜರ್ಮನಿ ಉಳಿವು ಸಾಧ್ಯವಿಲ್ಲ. ಏಕೆಂದರೆ ಈಗಲೂ ರಷ್ಯಾ ಜರ್ಮನಿಯ ಮೇಲೆ ಕಣ್ಣಿಟ್ಟು ಕಾಯುತ್ತಿದೆ. ಅವಕಾಶ ಸಿಕ್ಕರೆ ಒಳಗೆ ನುಗ್ಗಲು ಸ್ಕೆಚ್ ಹಾಕಿದೆ. ಆದರೆ ಟ್ರಂಪ್ ಮಾತ್ರ ಎಲ್ಲವನ್ನೂ ಉಲ್ಟಾ ಮಾಡಿಟ್ಟರು. ಸ್ನೇಹಿತ ರಾಷ್ಟ್ರ ಜರ್ಮನಿಗೆ ಕಾಟ ಕೊಟ್ಟರು. ಜರ್ಮನಿಗೆ ಅಮೆರಿಕ ಮಿಲಿಟರಿ ಸಹಾಯ ಒದಗಿಸುತ್ತಾ ಬಂದಿದೆ. ಈ ಸಂಬಂಧ ಹತ್ತಾರು ವರ್ಷಗಳಿಂದಲೂ ಇದೆ. ಆದರೆ ಟ್ರಂಪ್ ಮಾತ್ರ ಜಗಳ ತೆಗೆದಿದ್ದರು. ನಮಗೆ ಪಾವತಿ ಮಾಡಬೇಕಾದ ಮಿಲಿಟರಿ ಮೊತ್ತ ಕೊಡಿ ಎಂದು ಜರ್ಮನಿಯ ಜೊತೆ ಕಿರಿಕ್ ಮಾಡಿದ್ದರು. ಹೀಗೆ ಪರಿಸ್ಥಿತಿ ಕೈಮೀರಿ ಹೋದಾಗಲೂ ಮಾರ್ಕೆಲ್ ಎಲ್ಲವನ್ನೂ ದಿಟ್ಟತನದಿಂದ ಎದುರಿಸಿದ್ದಾರೆ.

ಯುರೋಪ್‌ನ ಪ್ರಬಲ ಆರ್ಥಿಕ ಶಕ್ತಿ

ಯುರೋಪ್‌ನ ಪ್ರಬಲ ಆರ್ಥಿಕ ಶಕ್ತಿ

ಹತ್ತಾರು ದೇಶಗಳು ಒಗ್ಗೂಡಿ ಕಟ್ಟಿರುವ ಗೂಡು ಯುರೋಪ್ ಒಕ್ಕೂಟ. ಅಂದಹಾಗೆ ಈ ಒಕ್ಕೂಟದ ಪ್ರಬಲ ಕೂಸು ಜರ್ಮನಿ. ಈಗಲೂ ಜಿಡಿಪಿ ವಿಚಾರದಲ್ಲಿ, ಯುರೋಪ್ ಲೆಕ್ಕದಲ್ಲಿ ಜರ್ಮನಿ ನಂಬರ್ 1. ಅಷ್ಟೊಂದು ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಜರ್ಮನಿ. ಅದರಲ್ಲೂ ಮಾರ್ಕೆಲ್ ನಾಯಕತ್ವ ಜರ್ಮನಿಯನ್ನ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಸಿದೆ. ಆದರೆ ಈಗ ಬದಲಾವಣೆಯ ಸಮಯ ಬಂದಿದೆ. ಅದೂ ಕೊರೊನಾ ಎಂಬ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಕಾಲದಲ್ಲಿ. ಹೀಗಾಗಿ ಸಹಜವಾಗಿ ಒಂದಿಷ್ಟು ಆತಂಕಗಳು ಇದ್ದು, ಅದನ್ನೆಲ್ಲಾ ಜರ್ಮನಿಯ ಹೊಸ ನಾಯಕ ಹೇಗೆ ಎದುರಿಸಲಿದ್ದಾನೆ ಅನ್ನೋದನ್ನ ಕಾದು ನೋಡಬೇಕಿದೆ.

ಏನಿದು ಹೈಡ್ರೋಜನ್ ಟ್ರೈನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?ಏನಿದು ಹೈಡ್ರೋಜನ್ ಟ್ರೈನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

English summary
German Chancellor Angela Merkel’s party CDU picked new leader. This action taken after Merkel’s announcement of political retirement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X