ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಗೆ, 'ನಿಮ್ಮೂರಿಗೆ ಬರಲು ಒಲ್ಲೆ' ಎಂದ ಜರ್ಮನ್ ಚಾನ್ಸಲರ್

|
Google Oneindia Kannada News

ವಾಷಿಂಗ್ಟನ್, ಮೇ 30: ಜಿ 7 ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಆಹ್ವಾನವನ್ನು ಜರ್ಮನಿಯ ಚಾನ್ಸಲರ್ ಏಂಜೆಲಾ ಮಾರ್ಕೆಲ್ ನಿರಾಕರಿಸಿದ್ದಾರೆ.

ಜೂನ್ ಕೊನೆಯ ವಾರದಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಜಿ 7 ರಾಷ್ಟ್ರಗಳ (ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್, ಅಮೆರಿಕ, ಯುರೋಪಿಯನ್ ಯುನಿಯನ್ ರಾಷ್ಟ್ರಗಳ ಕೂಟ ) ಶೃಂಗಸಭೆ ಆಯೋಜನೆಯಾಗಿದೆ. ಸಭೆಗೆ ಮಾರ್ಕೆಲ್ ಅವರನ್ನು ಟ್ರಂಪ್ ಆಹ್ವಾನಿಸಿದ್ದರು.

ಚೀನಾ-ಭಾರತ ಗಡಿ ವಿವಾದ: ಟ್ರಂಪ್ ಮಧ್ಯಸ್ಥಿಕೆ ಬೇಕಿಲ್ಲ ಎಂದ ಚೀನಾಚೀನಾ-ಭಾರತ ಗಡಿ ವಿವಾದ: ಟ್ರಂಪ್ ಮಧ್ಯಸ್ಥಿಕೆ ಬೇಕಿಲ್ಲ ಎಂದ ಚೀನಾ

ಆದರೆ, ಟ್ರಂಪ್ ಆಹ್ವಾನವನ್ನು ನಯವಾಗಿ ನಿರಾಕರಿಸಿರುವ ಏಂಜೆಲಾ ಮಾರ್ಕೆಲ್ ಅವರು, ಟ್ರಂಪ್ ಗೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಜರ್ಮನ್ ವಿದೇಶಾಂಗ ಕಾರ್ಯದರ್ಶಿ ಸ್ಟಿಪನ್, 'ಜಾಗತಿಕ ಕೊರೊನಾವೈರಸ್ ಪಿಡುಗಿನ ಈ ಸಂದರ್ಭದಲ್ಲಿ ವಾಷಿಂಗ್ಟನ್ ಪ್ರಯಾಣ ಮಾರ್ಕೆಲ್ ಅವರಿಂದ ಆಗದು. ಹಾಗಾಗಿ ಜಿ 7 ಶೃಂಗಸಭೆಯಲ್ಲಿ ಚಾನ್ಸಲರ್ ಭಾಗವಹಿಸುವುದಿಲ್ಲ' ಎಂದು ಹೇಳಿದ್ದಾರೆ.

ಲಾಕ್‌ಡೌನ್ ಮುಂದುವರೆಸುವ ಇರಾದೆ ಇಲ್ಲ

ಲಾಕ್‌ಡೌನ್ ಮುಂದುವರೆಸುವ ಇರಾದೆ ಇಲ್ಲ

ಕೊರೊನಾವೈರಸ್ ಲಾಕ್‌ಡೌನ್ ಅಮೆರಿಕದಲ್ಲಿಯೂ ಮುಂದುವರೆದಿದೆ. ಟ್ರಂಪ್ ಅವರಿಗೆ ಲಾಕ್‌ಡೌನ್ ಮುಂದುವರೆಸುವ ಇರಾದೆ ಇಲ್ಲ. ಹೀಗಾಗಿಯೇ ಅವರು ಜೂನ್ ಕೊನೆಯ ವಾರದಲ್ಲಿ ವಾಷಿಂಗ್ಟನ್ ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಕೊರೊನಾದಿಂದ ಅಮೆರಿಕಕ್ಕೆ ಏನೂ ಅಗಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮುಸುಕಿನ ಗುದ್ದಾಟ ಮುಂದುವರೆದಿದೆ.

ಮುಸುಕಿನ ಗುದ್ದಾಟ ಮುಂದುವರೆದಿದೆ.

ಡೊನಾಲ್ಡ್ ಟ್ರಂಪ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಇಂದು ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಗೆ ಆಘಾತ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿರುವ ಬೆಂಬಲವನ್ನು ಹಿಂಪಡೆದು, ಕೊರೊನಾವೈರಸ್ ಹರಡಲು ಕಾರಣವಾದ ಚೀನಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಸೋಂಕು ಹರಡುವುದನ್ನು ತಡೆಯಲು ಆಗುತ್ತಿಲ್ಲ

ಸೋಂಕು ಹರಡುವುದನ್ನು ತಡೆಯಲು ಆಗುತ್ತಿಲ್ಲ

ಅಮೆರಿಕದಲ್ಲಿ ಟ್ರಂಪ್ ಸರ್ಕಾರದ ಅನೇಕ ಪ್ರಯತ್ನಗಳ ನಡುವೆಯೂ ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಯಲು ಆಗುತ್ತಿಲ್ಲ. ಇಂದಿಗೆ 17.78 ಲಕ್ಷ ಜನರಿಗೆ ಸೋಂಕು ತಗುಲಿದ್ದು,1.4 ಲಕ್ಷ ಜನ ಮೃತಪಟ್ಟಿದ್ದಾರೆ.

ಜರ್ಮನಿಯಲ್ಲಿಯೂ ಕೊರೊನಾ ವೈರಸ್ ಹಾವಳಿ

ಜರ್ಮನಿಯಲ್ಲಿಯೂ ಕೊರೊನಾ ವೈರಸ್ ಹಾವಳಿ

ಇನ್ನು, ಜರ್ಮನಿಯಲ್ಲಿಯೂ ಕೊರೊನಾ ವೈರಸ್ ಹಾವಳಿ ವಿಪರೀತವಾಗಿದೆ. ಆದರೆ, ಮಾರಕ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ಜರ್ಮನಿಯಲ್ಲಿ 1.87 ಲಕ್ಷ ಜನ ಸೋಂಕಿಗೆ ತುತ್ತಾಗಿದ್ದಾರೆ. 1.64 ಲಕ್ಷ ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 8194 ಜನ ಮೃತಪಟ್ಟಿದ್ದಾರೆ.

English summary
German Chancellor Angela Merkel Rejects Donald Trump G7 Invitation ahead of coronavirus outbreak in US. G7 Summit held on June last week in washington.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X