ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗಡಿಯಲ್ಲಿ ಚೀನಾ ಸೇನಾ ಮುಖ್ಯಸ್ಥ ವಾಂಗ್ ಹೈಜಿಯಾಂಗ್ ನೇಮಕ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 7: ಭಾರತ ಮತ್ತು ಚೀನಾ ಗಡಿಯಲ್ಲಿರುವ ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ಹೊಸ ಕಮಾಂಡರ್ ಆಗಿ ಜನರಲ್ ವಾಂಗ್ ಹೈಜಿಯಾಂಗ್ ರನ್ನು ನೇಮಿಸಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶಿಸಿದ್ದಾರೆ ಎಂದು ಅಧಿಕೃತ ಮಾಧ್ಯಮಗಳು ವರದಿ ಮಾಡಿದೆ.

ಚೀನಾ ಕಮ್ಯುನಿಷ್ಟ್ ಸರ್ಕಾರದ ಮುಖ್ಯಸ್ಥರು ಮತ್ತು ಸೆಂಟ್ರಲ್ ಮಿಲಿಟರಿ ಕಮಿಷನ್ ಮುಖ್ಯಸ್ಥರೂ ಆಗಿರುವ ಕ್ಸಿ ಜಿನ್‌ಪಿಂಗ್ ಅವರು ವಾಂಗ್ ಸೇರಿದಂತೆ ಐವರು ಸೇನಾ ಅಧಿಕಾರಿಗಳನ್ನು ಜನರಲ್ ಶ್ರೇಣಿಗೆ ಬಡ್ತಿ ನೀಡಿ ಆದೇಶಿಸಿದ್ದಾರೆ. ಚೀನಾದ ಸಕ್ರಿಯ ಸೇನಾ ಸೇವೆಯಲ್ಲಿ ಜನರಲ್ ಎನ್ನುವುದು ಅತ್ಯಂತ ಉನ್ನತ ಶ್ರೇಣಿಯಾಗಿದೆ ಎಂದು ರಾಜ್ಯದ ಚೀನಾಮಿಲ್ ವೆಬ್ ಸೈಟ್ ವರದಿ ಮಾಡಿದೆ. ಮಿಲಿಟರಿ ಶ್ರೇಣಿಗೆ ಅಧಿಕಾರಿಗಳಿಗೆ ಬಡ್ತಿ ನೀಡಿರುವ ಬಗ್ಗೆ ಆದೇಶ ಪ್ರತಿಯನ್ನು ಕ್ಸಿ ಜಿನ್ ಪಿಂಗ್ ಆನ್ ಲೈನ್ ಮೂಲಕ ರವಾನಿಸಿದ್ದಾರೆ.

'ಅಫ್ಘಾನಿಸ್ತಾನ ವಿಚಾರದಲ್ಲಿ ಜಗತ್ತು ಒಗ್ಗೂಡಲಿ’ ಇದಪ್ಪಾ ಪುಟಿನ್ ಮಾತು ಅಂದ್ರೆ..!'ಅಫ್ಘಾನಿಸ್ತಾನ ವಿಚಾರದಲ್ಲಿ ಜಗತ್ತು ಒಗ್ಗೂಡಲಿ’ ಇದಪ್ಪಾ ಪುಟಿನ್ ಮಾತು ಅಂದ್ರೆ..!

ಸೆಂಟ್ರಲ್ ಮಿನಿಟರಿ ಕಮಿಷನ್ ಎನ್ನುವುದು ಪೀಪಲ್ಸ್ ಲಿಬರೇಷನ್ ಆರ್ಮಿಯ ಕೇಂದ್ರ ಸ್ಥಾನವಾಗಿರಲಿದೆ. ವಾಂಗ್ ಹೈಜಿಯಾಂಗ್ ಅವರು ಭಾರತ ಚೀನಾ ಪೂರ್ವದ ಲಡಾಖ್ ಗಡಿಯಲ್ಲಿನ ಸಂಘರ್ಷ ನಡೆದ ನಂತರದಲ್ಲಿ ನೇಮಕಗೊಂಡ ನಾಲ್ಕನೇ ಸೇನಾ ಕಮಾಂಡರ್ ಆಗಿದ್ದಾರೆ.

Gen Wang Haijiang is chinas New Army Commander to Head Troops Along Indian Border

ಗಲ್ವಾನ್ ಕಣಿವೆಯಲ್ಲಿ ನಿರಾತಂಕ:

ಭಾರತ ಮತ್ತು ಚೀನಾದ ಗಲ್ವಾನ್ ಕಣಿವೆಯಿಂದ ಉಭಯ ಸೇನಾ ಪಡೆಗಳು ಒಂದು ಹೆಜ್ಜೆ ಹಿಂದೆ ಸರಿದಿರುವುದರಿಂದ ಆತಂಕ ಕಡಿಮೆಯಾಗಿದೆ. ಆದರೆ ಪ್ಯಾಂಗಾಂಗ್ ತ್ಸೋ ಮತ್ತು ಗೊಗ್ರಾ ಹಾಗೂ ಪೂರ್ವ ಲಡಾಖ್ ಭಾಗದ ಹಾಟ್ ಸ್ಪ್ರಿಂಗ್ಸ್ ಮತ್ತು ದೆಪ್ಸಾಂಗ್ ಪ್ರದೇಶಗಳಿಂದ ಸೇನೆ ನಿಷ್ಕ್ರೀಯ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಚೀನಾದ ಪಾಶ್ಚಿಮಾತ್ಯ ಥಿಯೇಟರ್ ಕಮಾಂಡ್ ಕ್ಸಿನ್ ಜಿಯಾಂಗ್ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶಗಳನ್ನು ನೋಡಿಕೊಳ್ಳಲಾಗುತ್ತದೆ. ಇದು ಭಾರತದ ಜೊತೆಗೆ ಪೀಪಲ್ಸ್ ಲಿಬರೇಷನ್ ಆರ್ಮಿ ಗಡಿಯನ್ನು ಹಂಚಿಕೊಂಡಿರುವ ಅತಿದೊಡ್ಡ ಭೌಗೋಳಿಕ ಪ್ರದೇಶವಾಗಿದೆ.

ಬಡ್ತಿ ಪಡೆದ ಜನರಲ್ ಶ್ರೇಣಿ ಅಧಿಕಾರಿಗಳು:

ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ವಾಂಗ್ ಹೈಜಿಯಾಂಗ್, ಪೀಪಲ್ಸ್ ಲಿಬರೇಷನ್ ಆರ್ಮಿ ಸೆಂಟ್ರಲ್ ಥಿಯೇಟರ್ ಕಮಾಂಡ್ ಲಿನ್ ಕ್ಸಿಯಾಂಗ್ಯಾಂಗ್, ಪೀಪಲ್ಸ್ ಲಿಬರೇಷನ್ ಆರ್ಮಿ ನೌಕಾಪಡೆಯ ಕಮಾಂಡರ್ ಮತ್ತು ಪೀಪಲ್ಸ್ ಲಿಬರೇಷನ್ ಆರ್ಮಿ ವಾಯುಪಡೆಯ ಕಮಾಂಡರ್ ಚಾಂಗ್ ಡಿಂಗ್‌ಕಿಯು ಮತ್ತು ಪೀಪಲ್ಸ್ ಲಿಬರೇಷನ್ ಆರ್ಮಿ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ ಕ್ಸು ಕ್ವೆಕ್ಯಾಂಗ್ ಬಡ್ತಿ ಪಡೆದುಕೊಂಡಿದ್ದಾರೆ.

ಜುಲೈನಲ್ಲಿ ಪಿಎಲ್‌ಎನ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ಮುಖ್ಯಸ್ಥರಾಗಿ ಜೆನ್ ಕ್ಸು ಕಿಲಿಂಗ್‌ರನ್ನು ಬಡ್ತಿ ನೀಡಿದ್ದರು. ಅವರ ಹೊಸ ಪಾತ್ರ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವರ್ಷ ಮೇನಲ್ಲಿ ಜೆನ್ ಕ್ಸು ಲಡಾಖ್ ಉದ್ವಿಗ್ನತೆ ಆರಂಭವಾದ ನಂತರ ವೆಸ್ಟರ್ನ್ ಕಮಾಂಡ್ ಮುಖ್ಯಸ್ಥರಾಗಿದ್ದ ಮೂರನೇ ಜನರಲ್ ಆಗಿದ್ದರು. ಹಿಂದಿನ ಜನರಲ್ ಜಾಂಗ್ ಕ್ಸುಡಾಂಗ್ ಅವರನ್ನು PLA ನಿಂದ ನಿವೃತ್ತರಾದ 65 ವರ್ಷದ ಜನರಲ್ ಜುವೊ ಜೊಂಗ್ಕಿ ಬದಲಿಗೆ ಕಳೆದ ವರ್ಷ ಡಿಸೆಂಬರ್ 19 ರಂದು ನೇಮಿಸಲಾಗಿತ್ತು.

ಈಗ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ಮುಖ್ಯಸ್ಥರಾಗಿರುವ 58 ವರ್ಷದ ಜೆನ್ ವಾಂಗ್, ಈ ಮೊದಲು ಡಿಸೆಂಬರ್ 2019 ರಿಂದ ಟಿಬೆಟ್ ಮಿಲಿಟರಿ ಪಡೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಲಡಾಖ್ ಪ್ರದೇಶದ ಮೇಲ್ವಿಚಾರಣೆಯಾದ ಡೆಪ್ಯೂಟಿ ಕಮಾಂಡರ್ ದಕ್ಷಿಣ ಕ್ಸಿಂಜಿಯಾಂಗ್ ಮಿಲಿಟರಿ ಜಿಲ್ಲೆ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.

English summary
China Appoints Gen Wang Haijiang its New Army Commander to Head Troops Along Indian Border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X