ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಟಿನ್ ಅಮೆರಿಕ ರಾಷ್ಟ್ರಗಳ ಜೈಲಲ್ಲಿ ಕೊರೊನಾ ಕರಿನೆರಳು

|
Google Oneindia Kannada News

ಸೆಲ್ವಡಾರ್, ಏಪ್ರಿಲ್ 28: ಜಗತ್ತಿನಲ್ಲಿ ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿರುವ ಜನ ವಿಧಿಯೇ ಇಲ್ಲದೇ ಮನೆಯೊಳಗೆ ಸೇರಿಕೊಂಡಿದ್ದಾರೆ. ಜಗತ್ತಿನ ಮೂಲೆ ಮೂಲೆಗೂ ಕೊರೊನಾ ತಲುಪಿಯಾಗಿದೆ.

ಕೊರೊನಾಕ್ಕೆ ಹೆದರಿಕೊಂಡು ಮನೆಯಲ್ಲಿರುವವರು ಏನೋ ಸ್ವಲ್ಪ ಮಟ್ಟಿಗೆ ನಿಶ್ಚಿಂತೆಯಿಂದ ಇದ್ದಾರೆ. ಆದರೆ, ಜೈಲುಗಳಲ್ಲಿರುವ ಕೈದಿಗಳು ಮಾತ್ರ ಉಸಿರು ಬಿಗಿ ಹಿಡಿದು ಕಾಲ ಕಳೆಯುತ್ತಿದ್ದಾರೆ. ಏಕೆಂದರೆ ಕೊರೊನಾ ತಡೆಗಟ್ಟುವ ಪ್ರಮುಖ ಅಸ್ತ್ರವಾದ ಸಾಮಾಜಿಕ ಅಂತರವನ್ನು ಜೈಲುಗಳಲ್ಲಿ ಕಾಪಾಡಿಕೊಳ್ಳುವುದು ಕನಸಿನ ಮಾತೇ ಸರಿ.

ಕೊರೊನಾ ಕೇಸ್: ಚೀನಾವನ್ನು ಹಿಂದಿಕ್ಕಿದ ಮತ್ತೊಂದು ಪವರ್‌ಪುಲ್ ದೇಶಕೊರೊನಾ ಕೇಸ್: ಚೀನಾವನ್ನು ಹಿಂದಿಕ್ಕಿದ ಮತ್ತೊಂದು ಪವರ್‌ಪುಲ್ ದೇಶ

ಅದರಲ್ಲು ಲ್ಯಾಟಿನ್ ಅಮೆರಿಕ ರಾಷ್ಟ್ರಗಳಲ್ಲಿನ (ದಕ್ಷಿಣ ಅಮೆರಿಕ) ಜೈಲುಗಳು ವಿಪರೀತ ಕೈದಿಗಳಿಂದ ತುಂಬಿ ತುಳುಕುತ್ತವೆ. ಅಲ್ಲಿಯೂ ಕೂಡ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಜೈಲಿನಲ್ಲಿರುವ ಕೈದಿಗಳು ಕೊರೊನಾ ಭಯದಿಂದ ತತ್ತರಿಸಿ ಹೋಗಿದ್ದಾರೆ. ಪರಸ್ಥಿತಿ ಹೀಗಿರುವಾಗ ಇಐ ಸೆಲ್ವಡಾರ್ ರಾಷ್ಟ್ರದಲ್ಲೊಂದು ಅವಾಂತರ ಸೃಷ್ಟಿಯಾಗಿ ಜಗತ್ತಿನ ಗಮನ ಸೆಳೆದಿದೆ.

ಗ್ಯಾಂಗ್‌ವಾರ್ ನಲ್ಲಿ 20 ಜನರ ಕೊಲೆ

ಗ್ಯಾಂಗ್‌ವಾರ್ ನಲ್ಲಿ 20 ಜನರ ಕೊಲೆ

ಸೆಲ್ವಡಾರ್ ನಲ್ಲಿಯೂ ಕೊರೊನಾ ಹಾವಳಿ ಮೆರೆಯುತ್ತಿರುವುದರಿಂದ ಲಾಕ್‌ಡೌನ್ ಘೋಷಿಸಲಾಗಿದೆ. ಲಾಕ್‌ಡೌನ್ ವಿರುದ್ಧ ದಂಗೆ ಎದ್ದು ಕಳೆದ ಶುಕ್ರವಾರ ಸೆಲ್ವಡಾರ್‌ನಲ್ಲಿ 20 ಜನರನ್ನು ಹತ್ಯೆಗೈಯಲಾಗಿದೆ. ಇಐ ಸೆಲ್ವಡಾರ್ ಜೈಲಿನಲ್ಲಿರುವ ಗ್ಯಾಂಗಸ್ಟರ್‌ಗಳು ಈ ಕೊಲೆಗಳನ್ನು ಮಾಡಿಸಿದ್ದಾರೆ ಎಂದು ಅಲ್ಲಿನ ಸರ್ಕಾರ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕೈದಿಗಳನ್ನು ಸಣ್ಣ ಸಣ್ಣ ಕೋಣೆಗೆ ತೂರಲಾಗಿದೆ

ಕೈದಿಗಳನ್ನು ಸಣ್ಣ ಸಣ್ಣ ಕೋಣೆಗೆ ತೂರಲಾಗಿದೆ

ಸೆಲ್ವಡಾರ್ ಜೈಲಿನಲ್ಲಿರುವ 4 ಸಾವಿರಕ್ಕೂ ಹೆಚ್ಚು ಕೈದಿಗಳನ್ನು ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕತ್ತಲು ಕೋಣೆಗಳಲ್ಲಿ ಇರಿಸಲಾಗುತ್ತಿದೆ. ಸೂರ್ಯನ ಬೆಳಕು ಕೂಡ ಇವರ ಮೇಲೆ ಬಿಳ್ಳಬಾರದು ಎಂದು ತಲೆ ಬೋಳಿಸಿ ಕೈದಿಗಳನ್ನು ಸಣ್ಣ ಸಣ್ಣ ಕೋಣೆಗೆ ತೂರಲಾಗಿದೆ.

ಕೊರೊನಾ ಕಾರಣ: ಆ ದೇಶದಲ್ಲಿ ಮಲೇರಿಯಾ ಸೋಂಕಿತರು ಡಬಲ್!ಕೊರೊನಾ ಕಾರಣ: ಆ ದೇಶದಲ್ಲಿ ಮಲೇರಿಯಾ ಸೋಂಕಿತರು ಡಬಲ್!

ಮಿಲಿಯನ್‌ಗಟ್ಟಲೇ ಕೈದಿಗಳು

ಮಿಲಿಯನ್‌ಗಟ್ಟಲೇ ಕೈದಿಗಳು

ಲ್ಯಾಟಿನ್ ಅಮೆರಿಕದ ಕಾರಾಗೃಹಗಳು ಮಿಲಿಯನ್‌ಗಟ್ಟಲೇ ಕೈದಿಗಳನ್ನು ಹೊಂದಿವೆ. ಭ್ರಷ್ಟಾಚಾರ, ಬೆದರಿಕೆ ಮತ್ತು ಅಸಮರ್ಪಕ ಕಾವಲು ಸಿಬ್ಬಂದಿಗಳ ಕಾರಣದಿಂದಾಗಿ ಗ್ಯಾಂಗಸ್ಟರ್‌ಗಳು ಗಲಬೆ ದೋಂಬಿ ಎಬ್ಬಿಸುವುದು ಆಗಾಗ ಇಲ್ಲಿ ಕಂಡು ಬರುತ್ತಿದೆ. ಆದರೆ, ಕೊರೊನಾ ಸಂದರ್ಭದಲ್ಲಿ ಸೆಲ್ವಡಾರ್ ಜೈಲಿನಲ್ಲಿ ಕೈದಿಗಳ ಮೇಲೆ ಬಲ ಪ್ರಯೋಗ ಅಸ್ತ್ರಕ್ಕೆ ಮುಂದಾಗಿದೆ.

323 ಜನರಲ್ಲಿ ಕೊರೊನಾ ವೈರಸ್

323 ಜನರಲ್ಲಿ ಕೊರೊನಾ ವೈರಸ್

ಸೆಲ್ವಡಾರ್ ನಲ್ಲಿ ಇದುವರೆಗೆ 323 ಜನರಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ. ಇದರಲ್ಲಿ 8 ಜನ ಮೃತಪಟ್ಟಿದ್ದು, 89 ಜನ ಚೇತರಿಸಿಕೊಂಡಿದ್ದಾರೆ. ಈ ಪ್ರಕರಣಗಳು ಕೇವಲ ಒಂದೇ ವಾರದಲ್ಲಿ ಕಾಣಿಸಿಕೊಂಡಿರುವುದಾಗಿವೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡದ ಸೆಲ್ವಡಾರ್ ಜೈಲಿನಲ್ಲಿ ಕೈದಿಗಳ ಪರಿಸ್ಥಿತಿ ಆತಂಕ ಮೂಡಿಸಿದೆ.

English summary
Gangwar El Salvador Prison: No Social Distance In Prisons Corona Fear Increased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X