ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್ ಜೈಲಿನ ಬೆಂಕಿಯಲ್ಲಿ ಬೆಂದು ಹೋದ 57 ಕೈದಿಗಳು

|
Google Oneindia Kannada News

ಸಾವೊ ಪಾಲೊ, ಜುಲೈ 30: ಬ್ರೆಜಿಲ್‌ನ ಜೈಲು ಕೋಣೆಯೊಂದರಲ್ಲಿ ವಿರೋಧಿ ಬಣವನ್ನು ಸುತ್ತುವರಿದ ಕೈದಿಗಳು ಜೈಲು ಕೋಣೆಗೆ ಬೆಂಕಿ ಹಚ್ಚಿ 57 ಮಂದಿ ಸಹಕೈದಿಗಳನ್ನು ಜೀವಂತ ದಹಿಸಿದ ಘಟನೆ ನಡೆದಿದೆ.

16 ಕೈದಿಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡ್ರಗ್ ಮಾಫಿಯಾ ದೊರೆ ಎಲ್ ಚಾಪೊಗೆ 30 ವರ್ಷ ಜೈಲುಡ್ರಗ್ ಮಾಫಿಯಾ ದೊರೆ ಎಲ್ ಚಾಪೊಗೆ 30 ವರ್ಷ ಜೈಲು

ಬೆಳಗ್ಗೆ ಸುಮಾರು 7 ಗಂಟೆ ಹೊತ್ತಿಗೆ ಅಲ್ತಮಿರಾ ಸಿಟಿಯಲ್ಲಿರುವ ಜೈಲಿನಲ್ಲಿ ಈ ಘಟನೆ ನಡೆದಿದೆ. ಕೈದಿಗಳು ಕಮಾಂಡೊ ಕ್ಲಾಸ್‌ ಎ ಸೇರಿದವರಾಗಿದ್ದು, ಕೈದಿಗಳು ಜೈಲಿಗೆ ಬೆಂಕಿ ಹಚ್ಚಿದ್ದಾರೆ.

Gang Fight Kills 57 in Brazil 16 decapitated

ಸಾಕಷ್ಟು ಮಂದಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಈ ರೀತಿ ದಾಳಿ ನಡೆಯುವ ಯಾವುದೇ ಮುನ್ಸೂಚನೆಯೂ ಪೊಲೀಸರಿಗೆ ಇರಲಿಲ್ಲ. ಮೇ ತಿಂಗಳಲ್ಲಿ ಅಮೇಜಾನಸ್‌ನಲ್ಲಿ ಕೈದಿಗಳ ಅಟ್ಯಾಕ್‌ಗೆ ಒಳಗಾಗಿ 55 ಮಂದಿ ಕೈದಿಗಳು ಮೃತಪಟ್ಟಿದ್ದರು. 2017ರಲ್ಲಿ ಲೋಕಲ್ ಗ್ಯಾಂಗ್ ದಾಳಿ ನಡೆಸಿದ ಪರಿಣಾಮ 150 ಮಂದಿ ಕೈದಿಗಳು ಜೈಲಿನಲ್ಲೇ ಸಾವನ್ನಪ್ಪಿದ್ದರು.

ಈ ಗ್ಯಾಂಗ್‌ಗಳು ಬ್ಯಾಂಕ್ ರಾಬರಿ, ಡಕಾಯಿತಿ, ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಜೈಲಿನಲ್ಲಿ ಉಂಟಾದ ದಂಗೆಯನ್ನು ಹತ್ತಿಕ್ಕುವ ಸಲುವಾಗ ಸಂಧಾನಕ್ಕೆ ಯತ್ನಿಸುತ್ತಿದ್ದ ಅಧಿಕಾರಿಗಳು, ಬೆಂಕಿಯನ್ನು ನಂದಿಸಲು ನೀರನ್ನು ಎರಚಿದರು. ಸ್ವಲ್ಪ ಹೊತ್ತಿನ ಬಳಿಕ ಹೊಗೆಯಾಡುತ್ತಿದ್ದ ಜೈಲುಕೋಣೆಯಲ್ಲಿ ಸುಟ್ಟ ದೇಹಗಳು ಪತ್ತೆಯಾದವು.

ಬ್ರೆಜಿಲ್‌ನ ಕಿಕ್ಕಿರಿದ ಜೈಲುಗಳಲ್ಲಿ ಕಾರಾಗೃಹ ಹಿಂಸಾಚಾರ ಮತ್ತು ದಂಗೆಗಳು ಸಾಮಾನ್ಯ ಸಂಗತಿಯಾಗಿ ಪರಿಣಮಿಸಿದೆ. ಅಲ್ಲಿನ ಜೈಲುಗಳನ್ನು ಕೆಲವು ಗ್ಯಾಂಗ್‌ಗಳು ಹೇಗೆ ನಿಯಂತ್ರಿಸುತ್ತದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ.

English summary
Gang Fight Kills 57 in Brazil, 16 Beheaded, latest deadly clash as Brazil's government struggles to control the country's overcrowded jails.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X