ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಒಬಾಮಾ ಹೇಳಿದ್ದೇಕೆ?

By Mahesh
|
Google Oneindia Kannada News

ವಾಷಿಂಗ್ಟನ್, ಫೆ.6: ಭಾರತದಿಂದ ಅಮೆರಿಕಕ್ಕೆ ತೆರಳಿದ ಕೆಲಕಾಲದಲ್ಲೇ ಬರಾಕ್ ಒಬಾಮಾ ಅವರು ಭಾರತದ ಧಾರ್ಮಿಕ ಅಸಹಿಷ್ಣುತೆ ಬಗೆ ಚಕಾರ ಎತ್ತಿದ್ದಾರೆ. ಭಾರತದ ಇತ್ತೀಚಿನ ಪರಿಸ್ಥಿತಿ ನೋಡಿದ್ದರೆ ಸ್ವತಃ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರೇ ಆಘಾತಗೊಳ್ಳುತ್ತಿದ್ದರು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.

ಒಬಾಮಾ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ, ನವದೆಹಲಿಯಲ್ಲಿ ಭಾಷಣದಲ್ಲಿ ಭಾರತದ ಏಕತೆ, ವೈವಿಧ್ಯತೆ, ಧರ್ಮ ಸಹಿಷ್ಣುತೆಗಳ ಬಗ್ಗೆ ಮಾತನಾಡಿದ್ದನ್ನು ಶ್ವೇತಭವನ ಅಲ್ಲಗಳೆದ ಬೆನ್ನಲ್ಲೆ ಒಬಾಮ ಈ ಹೇಳಿಕೆ ನೀಡಿದ್ದಾರೆ.

ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡು ನಾನು ಮತ್ತು ಮಿಶೆಲ್ ಹಿಂದಿರುಗಿದೆವು. ಆದರೆ, ಅದೇ ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ, ಎಲ್ಲ ವಿಧವಾದ ಧಾರ್ಮಿಕ, ನಂಬಿಕೆಯ ಅಸಹಿಷ್ಣುತೆಯ ಚಟುವಟಿಕೆಗಳು ನಡೆದಿವೆ.

Gandhiji could not tolerate religious intolerance in India: Obama

ತಮ್ಮ ನಂಬಿಕೆ, ಪರಂಪರೆಗಳ ಹಿನ್ನೆಲೆಯಲ್ಲೇ ವಿವಿಧ ಗುಂಪುಗಳು ಪರಸ್ಪರ ಅಸಹನೆಯಿಂದ ವರ್ತಿಸುತ್ತಿದ್ದಾರೆ. ನಿಜಕ್ಕೂ ದೇಶದ ವಿಮೋಚನೆಗಾಗಿ ಹೋರಾಡಿದ ಮಹಾತ್ಮಗಾಂಧಿ ಅವರಿಗೆ ಈ ಘಟನೆಗಳು ಶಾಕ್ ನೀಡಿರಬಹುದು ಎಂದು ಒಬಾಮಾ ಇಂದು ಬೆಳಿಗ್ಗೆ ನಡೆದ ಉನ್ನತ ಮಟ್ಟದ ಪ್ರಾರ್ಥನೆ ಮತ್ತು ಬೆಳಗಿನ ಉಪಾಹಾರದ ವೇಳೆ ಹೇಳಿದ್ದಾರೆ.

ಆದರೆ, ಅವರು ಯಾವುದೇ ಒಂದು ನಿರ್ದಿಷ್ಟ ಧರ್ಮ, ಜಾತಿ ಬಗ್ಗೆ ಹೆಸರಿಸಿಲ್ಲ. ಇತಿಹಾಸದುದ್ದಕ್ಕೂ ನಾವು ವಿವಿಧ ಧರ್ಮಗಳವರು ಇನ್ನೊಂದು ಧರ್ಮ ಅಥವಾ ಜಾತಿಯವರ ಮೇಲೆ ಹಿಂಸಾಚಾರ ನಡೆಸಿರುವುದನ್ನು ನಾವು ಕಾಣುತ್ತೇವೆ. ನಮ್ಮ ದೇಶದಲ್ಲೂ ವರ್ಗ ವರ್ಣ ಕುರಿತ ಘರ್ಷಣೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ನಮ್ಮಲ್ಲಿ ಅಂಥದ್ದೊಂದು ಪ್ರವೃತ್ತಿ ಅಡಗಿರುವುದು ಎಂದು ಒಬಾಮಾ ವಿವರಣೆ ನೀಡಿದ್ದಾರೆ.

English summary
Just a few weeks past the India visit, US president Barack Obama invoked India's example to make a plea for religious intolerance, saying that Mahatma Gandhi would have been shocked to see the amount of religious intolerance in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X