• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುರೋಪ್‌ನಲ್ಲಿ ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆಗೆ ಒಪ್ಪಿಗೆ

|

15 ನಿಮಿಷಗಳಲ್ಲೇ ಕೊವಿಡ್ 19 ಪರೀಕ್ಷೆ ವರದಿ ನೀಡುವಂತಹ ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆಗೆ ಯುರೋಪ್‌ನಲ್ಲಿ ಒಪ್ಪಿಗೆ ದೊರೆತಿದೆ.

ಅಮೆರಿಕದ ನಂತರ ಯುರೋಪ್‌ನಲ್ಲಿ ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆಗೆ ಸಮ್ಮತಿ ದೊರೆತಿದೆ.ಈ ಕೊವಿಡ್ ಟೆಸ್ಟ್ ಯಂತ್ರವನ್ನು ಬೆಕ್ಟನ್ ಡಿಕನ್ಸನ್ ಆಂಡ್ ಕೋ ಅಭಿವೃದ್ಧಿಪಡಿಸಿದ್ದಾರೆ. ಈ ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆಯಿಂದ 15 ರಿಂದ 20 ನಿಮಿಷಗಳ ಒಳಗಾಗಿ ವರದಿ ನಿಮ್ಮ ಕೈ ಸೇರಲಿದೆ.

ಅಮೆರಿಕ ಚುನಾವಣೆಗೂ ಮುನ್ನ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗದು

ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆಗೆ ಯಾವುದೇ ಲ್ಯಾಬ್ ಅಗತ್ಯವಿಲ್ಲ, ಪೋರ್ಟೆಬಲ್ ಡಿವೈಸ್‌ನಿಂದ ಪರೀಕ್ಷೆ ಮಾಡಲಾಗುತ್ತದೆ. ಅಮೆರಿಕದಲ್ಲಿ ಜುಲೈನಿಂದಲೇ ಹೀಗೆ ಪರೀಕ್ಷೆ ಮಾಡಿಸಲಾಗುತ್ತಿದೆ.

ಈ ಪರೀಕ್ಷಾ ಕಿಟ್‌ನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಆಸ್ಪತ್ರೆ, ತುರ್ತು ಅಗತ್ಯವಿದ್ದಲ್ಲಿ, ಜನರಲ್ ಪ್ರಾಕ್ಟೀಷನರ್ಸ್ ಇದನ್ನು ಬಳಕೆ ಮಾಡಬಹುದಾಗಿದೆ. ಬೆಕ್ಟನ್ ಇದನ್ನು ಗೇಮ್ ಚೇಂಜರ್ ಅಂದರೆ ಆಟವನ್ನೇ ಬದಲಾಯಿಸುವಂಥದ್ದು ಎಂದು ಕರೆದಿದ್ದಾರೆ. ಚೀನಾದ ಬಳಿಕ ಯುರೋಪ್‌ನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು.

ಪಿಸಿಆರ್ ಪರೀಕ್ಷೆಗಿಂತ ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆ ಉತ್ತಮ ಎಂಬುದು ತಿಳಿದುಬಂದಿದೆ.

ಈ ಕಿಟ್ ಒಂದು ತಿಂಗಳಲ್ಲಿ 8 ಮಿಲಿಯನ್ ಪರೀಕ್ಷೆಯನ್ನು ಮಾಡುವ ಸಾಮರ್ಥ್ಯ ಹೊಂದಿದೆ. ಮಾರ್ಚ್ 2021ರ ವೇಳೆಗೆ ತಿಂಗಳಲ್ಲಿ 12 ಮಿಲಿಯನ್ ಪರೀಕ್ಷೆ ಮಾಡಲು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

   ನಾವು Dalitರಾಗಿರೋದು ನಮ್ ತಪ್ಪಾ | Hathras case | Oneindia Kannada

   English summary
   A new coronavirus antigen test that gives results in 15 minutes is being touted as a game-changer. The Covid-19 test developed by Becton Dickinson and Co has been cleared for use in the European market, said a report.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X