• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Video: ಗಲ್ವಾನ್ ಘರ್ಷಣೆ ಕುರಿತು ಚೀನಾದಿಂದ ವಿಡಿಯೋ ಬಿಡುಗಡೆ

|
Google Oneindia Kannada News

ನವದೆಹಲಿ, ಫೆಬ್ರವರಿ.19: ಭಾರತ-ಚೀನಾ ಗಡಿಯ ಲಡಾಖ್ ಪೂರ್ವಭಾಗದ ಗಾಲ್ವಾನ್ ನದಿ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ ನಾಲ್ವರು ಯೋಧರು ಮೃತಪಟ್ಟಿರುವ ಬಗ್ಗೆ ಚೀನಾ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿದೆ.

ಕಳೆದ ಮೇ ಮತ್ತು ಜೂನ್ ತಿಂಗಳಿನಲ್ಲಿ ಗಲ್ವಾನ್ ಗಡಿ ಪ್ರದೇಶದಲ್ಲಿ ಭಾರತ-ಚೀನಾ ಯೋಧರು ಮುಖಾಮುಖಾಯಾಗಿದ್ದು, ಈ ವೇಳೆ ನಡೆದ ಸಂಘರ್ಷಗೆ ಸಂಬಂಧಿಸಿದಂತೆ ಚೀನಾ ಮಾಧ್ಯಮಗಳು ಬಿಡುಗಡೆ ಮಾಡಿವೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗಲ್ವಾನ್ ಕಣಿವೆ ಸಂಘರ್ಷ: ತನ್ನ ಸೈನಿಕರ ಸಾವನ್ನು ಕೊನೆಗೂ ಒಪ್ಪಿಕೊಂಡ ಚೀನಾಗಲ್ವಾನ್ ಕಣಿವೆ ಸಂಘರ್ಷ: ತನ್ನ ಸೈನಿಕರ ಸಾವನ್ನು ಕೊನೆಗೂ ಒಪ್ಪಿಕೊಂಡ ಚೀನಾ

ಭಾರತ ಮತ್ತು ಚೀನಾದ ಯೋಝರು ಪರಸ್ಪರ ಎದುರಾಗಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂದು ನಡೆದ ಸಂಘರ್ಷದಲ್ಲಿ ಚೀನಾದ 30 ಯೋಧರು ಸಾವನ್ನಪ್ಪಿದ್ದಾರೆ ಎಂದು ಭಾರತವು ನಂಬಿದ್ದು, ಭಾರತದ 20 ಯೋಧರು ಹುತಾತ್ಮರಾಗಿದ್ದರು.


ವಿಡಿಯೋದಲ್ಲಿ ನದಿ ದಾಟುವ ದೃಶ್ಯ ಸ್ಪಷ್ಟ:

ಚೀನಾದ ಮಾಧ್ಯಮಗಳು ಬಿಡುಗಡೆ ಮಾಡಿವೆ ಎನ್ನಲಾಗಿರುವ ವಿಡಿಯೋದಲ್ಲಿ ಎರಡು ಕಡೆಯ ಸೇನಾಪಡೆಯ ಯೋಧರು ನದಿಯೊಂದನ್ನು ದಾಟುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೇ ಒಬ್ಬರನ್ನೊಬ್ಬರು ಪರಸ್ಪರ ತಳ್ಳಾಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಘರ್ಷಣೆಯಲ್ಲಿ ನಾಲ್ವರು ಚೀನಾದ ಯೋಧರು ಮೃತಪಟ್ಟಿದ್ದು, ಅವರನ್ನು ಪರಿಚಯಿಸುವ ಬಗ್ಗೆ ಚೀನಾದ ಮಾಧ್ಯಮಗಳು ವಿಡಿಯೋವೊಂದನ್ನು ಪ್ರಸಾರ ಮಾಡಿವೆ.

ಚೀನಾ ಭಾರತ ಸೇನಾಪಡೆಗಳ ನಡುವೆ ಸಂಘರ್ಷ:

ಭಾರತದ 20 ಯೋಧರು ಹುತಾತ್ಮ, 76 ಸೈನಿಕರಿಗೆ ಗಾಯ

ಕಳೆದ ಮೇ.5ರಂದು ಮೊದಲ ಬಾರಿಗೆ ಭಾರತ-ಚೀನಾ ಸೇನೆಗಳು ಲಡಾಖ್ ಗಡಿ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದವು. ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿದ್ದರು.

English summary
Galwan Clash: China Media Released The Video About Incident And PLA Soldiers Death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X