ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ7 ಶೃಂಗಸಭೆ 2021 ಆರಂಭ

|
Google Oneindia Kannada News

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದಲ್ಲಿ ಜಿ7 ಶೃಂಗಸಭೆ ಶುರುವಾಗಿದೆ.

ಪ್ರಸ್ತುತ ಇಂಗ್ಲೆಂಡ್ ಜಿ.7 ರ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಮತ್ತು ಭಾರತ, ಆಸ್ಟ್ರೇಲಿಯಾ, ಕೊರಿಯಾ ಗಣತಂತ್ರ ಮತ್ತು ದಕ್ಷಿಣ ಆಫ್ರಿಕಾಗಳನ್ನು ಜಿ.7 ಶೃಂಗಕ್ಕೆ ಅತಿಥಿ ರಾಷ್ಟ್ರಗಳನ್ನಾಗಿ ಆಹ್ವಾನಿಸಿದೆ. ಹೈಬ್ರಿಡ್ ಮಾದರಿಯಲ್ಲಿ ಸಭೆ ನಡೆಯಲಿದೆ.

ಜೋ ಬೈಡನ್ ಅಮೆರಿಕ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ವಿದೇಶ ಪ್ರವಾಸ ಮಾಡುತ್ತಿದ್ದಾರೆ, ಎಂಟು ದಿನಗಳ ಕಾಲ ಯುರೋಪ್ ಪ್ರವಾಸ ನಡೆಸಲಿದ್ದಾರೆ.

Police officers walk along the seafront in St Ives, ahead of the G7 summit in Cornwall

ಮೂರು ದಿನಗಳ ಕಾಲ ಜಿ7 ಶೃಂಗಸಭೆ ನಡೆಯಲಿದ್ದು, ವಿಶ್ವ ನಾಯಕರು ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ರಾಷ್ಟ್ರಗಳಿಗೆ ಲಸಿಕೆಯ 100 ಕೋಟಿ ಡೋಸ್‌ಗಳನ್ನು ಒದಗಿಸುವುದಾಗಿ ವಾಗ್ದಾನ ಮಾಡಲಿದ್ದಾರೆ.

ಈ ಪೈಕಿ ಲಸಿಕೆಯ ಅರ್ಧದಷ್ಟು ಡೋಸ್‌ಗಳನ್ನು ಅಮೆರಿಕ ಒದಗಿಸಲಿದ್ದರೆ, ಬ್ರಿಟನ್ 10 ಕೋಟಿ ಡೋಸ್‌ಗಳನ್ನು ಒದಗಿಸಲಿವೆ ಎಂದು ಮೂಲಗಳು ಹೇಳಿವೆ.
ಕೆನಡಾ, ಫ್ರಾನ್ಸ್, ಜರ್ಮನಿ ಹಾಗೂ ಜಪಾನ್ ನಾಯಕರು ಕೂಡ ಪಾಲ್ಗೊಳ್ಳಲಿದ್ದು, ಕೋವಿಡ್ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಅವರು ಮಾಡುವ ಘೋಷಣೆಗೆ ಈ ಶೃಂಗಸಭೆ ಸಾಕ್ಷಿಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಿ.7 ಸಭೆಯಲ್ಲಿ ಪ್ರಧಾನ ಮಂತ್ರಿ ಪಾಲ್ಗೊಳ್ಳುತ್ತಿರುವುದು ಇದು ಎರಡನೇ ಬಾರಿ. 2019 ರಲ್ಲಿ ಫ್ರೆಂಚ್ ಅಧ್ಯಕ್ಷತೆಯಲ್ಲಿ ನಡೆದ ಜಿ.7 ರ ಬಿರ್ರಿಟ್ಜ್ ಸಮಿತಿಯಲ್ಲಿ "ಸದ್ಭಾವನಾ ಪಾಲುದಾರ" ನಾಗಿ ಪಾಲ್ಗೊಳ್ಳಲು ಭಾರತಕ್ಕೆ ಆಹ್ವಾನ ನೀಡಲಾಗಿತ್ತು ಮತ್ತು ಪ್ರಧಾನ ಮಂತ್ರಿ ಅವರು "ವಾತಾವರಣ, ಜೀವ ವೈವಿಧ್ಯ ಮತ್ತು ಸಾಗರಗಳು" ಹಾಗು "ಡಿಜಿಟಲ್ ಪರಿವರ್ತನೆ" ಅಧಿವೇಶನಗಳಲ್ಲಿ ಭಾಗವಹಿಸಿದ್ದರು.

English summary
Leaders have started to arrive in the UK for a three-day meeting. They're expected to commit to sharing 1 billion COVID vaccine doses with poorer countries. Follow DW for the latest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X