ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕಾರ

|
Google Oneindia Kannada News

ಟೋಕಿಯೋ, ಅಕ್ಟೋಬರ್ 4: ಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕರಿಸಿದ್ದಾರೆ.

ಜಪಾನಿನ ಮಾಜಿ ವಿದೇಶಾಂಗ ಸಚಿವ ಫುಮಿಯೋ ಕಿಡಿಶಾ ಅವರು ಆಡಳಿತಾರೂಢ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ, ಇದಿಗ ನೂತನ ಪ್ರಧಾನಿಯಾಗಿ ಅಧಿಕಾರ ಗದ್ದುಗೆ ಏರಿದ್ದಾರೆ.

ಜಪಾನ್‌ನ ಮುಂದಿನ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಆಯ್ಕೆಜಪಾನ್‌ನ ಮುಂದಿನ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಆಯ್ಕೆ

ಅವರ ಪೂರ್ವಾಧಿಕಾರಿ ಯೋಷಿಹಿದೆ ಸುಗಾ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಕೇವಲ ಒಂದು ವರ್ಷದ ಅಧಿಕಾರದ ಬಳಿಕ ಹುದ್ದೆಯಿಂದ ಕೆಳಗಿಳಿದಿದ್ದರು.

Fumio Kishida Elected Japan’s 100th Prime Minister, Unveils Cabinet Stacked With Abe’s Allies

ಸಂಸತ್ತಿನಲ್ಲಿ ಎಲ್ಡಿಪಿ ಹಾಗೂ ಅದರ ಮಿತ್ರಪಕ್ಷ ಬಹುಮತವನ್ನು ಹೊಂದಿದೆ. ಪ್ರಧಾನಿ ಹುದ್ದೆಗಾಗಿ ಸ್ಪರ್ಧೆಯಲ್ಲಿದ್ದ ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಸಾನೆ ಟಿಕಾಯಿಚಿ ಹಾಗೂ ಸೀಕೋ ನೊಡಾ ಅವರನ್ನು ಮೊದಲ ಸುತ್ತಿನಲ್ಲಿ ಹಿಂದಿಕ್ಕಿದ ಕಿಶಿಡಾ ಬಳಿಕ ಲಸಿಕೆ ಸಚಿವ ತಾರೊ ಕೊನೊ ಅವರನ್ನು ಹಿಮ್ಮೆಟ್ಟಿಸಿದ್ದರು.

ಜಪಾನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಫುಮಿಯೊ ಕಿಶಿಡಾ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಉದ್ಯೋಗಿಗಳ ಸಂಬಳ ಹೆಚ್ಚಿಸುವುದೇ ಪರಿಹಾರ ಎಂದು ಹೇಳಿದ್ದಾರೆ.

ಕಿಶಿಡಾ ಈ ಹಿಂದೆ ಎಲ್‌ಡಿಪಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು ಮತ್ತು 2012-17ರ ನಡುವೆ ವಿದೇಶಾಂಗ ಸಚಿವರಾಗಿದ್ದರು. ಈ ಸಮಯದಲ್ಲಿ ಅವರು ದಕ್ಷಿಣ ಕೊರಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅವರು 2016ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಹಿರೋಶಿಮಾಗೆ ಕರೆತರಲು ಸಹಾಯ ಮಾಡಿದ್ದರು.

ಈ ಹಿಂದಿನ ಪ್ರಧಾನಿ ಶಿಂಜೊ ಅಬೆ ಅವರು 'ಮೇಕ್ ಜಪಾನ್ ಗ್ರೇಟ್ ಅಗೇನ್' ಎನ್ನುವ ಅಭಿಯಾನದಡಿ ಹಲವು ಆರ್ಥಿಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪ್ರಗತಿ ಹಳ್ಳ ಹಿಡಿದಿತ್ತು.

ದೇಶದ ಎಲ್ಲಾ ಸಮಸ್ಯೆಗಳಿಗೆ ಸಂಬಳ ಏರಿಕೆಯೇ ಪರಿಹಾರ ಎಂದು ನಂಬಿರುವ ಫುಮಿಯೊ ಕಿಶಿಡಾ ತಾವು ಅಧಿಕಾರ ವಹಿಸಿಕೊಂಡ ಕೂಡಲೆ ಅದರತ್ತ ಗಮನಹರಿಸುವುದಾಗಿ ಹೇಳಿದ್ದಾರೆ.

ಜಪಾನಿನ ನೂತನ ಪ್ರಧಾನಿಯಾಗಿ ನೇಮಕವಾಗಿರುವ ಕಿಶಿಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಫುಮಿಯೋ ಕಿಶಿಡಾ ಅವರಿಗೆ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಕೋವಿಡ್ ಸಾಂಕ್ರಾಮಿಕ, ಆರ್ಥಿಕ ವ್ಯವಸ್ಥೆಯ ಚೇತರಿಕೆ, ಅಮೆರಿಕದೊಂದಿಗೆ ಸಂಬಂಧ ವೃದ್ಧಿ ಮತ್ತು ಪ್ರಾದೇಶಿಕ ಭದ್ರತಾ ಅಪಾಯಗಳನ್ನು ತಡೆಯುವ ಸವಾಲುಗಳಿವೆ.

ಕೋವಿಡ್ ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ ಮತ್ತು ಉತ್ತರ ಕೊರಿಯಾದಿಂದ ಬೆದರಿಕೆಗಳನ್ನು ಎದುರಿಸುವುದು ಸೇರಿದಂತೆ ಹಲವಾರು ಕಠಿಣ ಸಮಸ್ಯೆಗಳನ್ನು ನೂತನ ಪ್ರಧಾನಿ ಎದುರಿಸಲಿದ್ದಾರೆ. ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಆರ್ಥಿಕ ಸಹಾಯದ ಪ್ಯಾಕೇಜುಗಳನ್ನು ನೂತನ ಪ್ರಧಾನಿ ಅರ್ಥ ವ್ಯವಸ್ಥೆಗೆ ನೀಡಬಹುದು ಎಂಬ ನಿರೀಕ್ಷೆ ಇದೆ.

'ಉದಾರವಾದಿ'ಗಳ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಹೊಸ ಪ್ರಧಾನಿ 'ಅಣ್ವಸ್ತ್ರಗಳನ್ನು ರದ್ದುಗೊಳಿಸುವುದನ್ನು ನನ್ನ ಜೀವನದ ದೊಡ್ಡ ಗುರಿ' ಎಂದು ಕೂಡ ಹೇಳಿಕೊಂಡಿದ್ದಾರೆ. ಆದರೆ ಒಂದೇ ಲಿಂಗಿಗಳ ನಡುವಿನ ವಿವಾಹದ ವಿಚಾರ ಬಂದರೆ ಫುಮಿಯೊ ಅಷ್ಟೆಲ್ಲ ಉದಾರವಾದಿ ಅಲ್ಲ.

ಕಿಶಿಡಾ ಈ ಹಿಂದೆ ಅವರ ಪಕ್ಷವಾದ ಎಲ್‌ಡಿಪಿಯ ನೀತಿ ನಿರೂಪಣೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. 2012-17ರಲ್ಲಿ ವಿದೇಶಾಂಗ ಮಂತ್ರಿಯಾಗಿದ್ದರು. ಈ ಸಮಯದಲ್ಲಿ ಅವರು ಜಪಾನಿನ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲದ ದೇಶಗಳಾದ ರಷ್ಯಾ ಮತ್ತು ದಕ್ಷಿಣ ಕೊರಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

2016 ರಲ್ಲಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಐತಿಹಾಸಿಕ ಭೇಟಿಯಲ್ಲಿ ಹಿರೋಶಿಮಾಕ್ಕೆ ಕರೆತರುವಲ್ಲಿ ಕಿಶಿಡಾ ಪಾತ್ರ ಪ್ರಮುಖವಾಗಿತ್ತು.

ಫುಮಿಯೋ ಕಿಶಿಡಾ ಕುಟುಂಬ ಹಲವು ವರ್ಷ ನ್ಯೂಯಾರ್ಕ್ ನಲ್ಲಿ ವಾಸಮಾಡಿದ್ದು, ಅಲ್ಲಿ ಅವರು ಶಾಲಾ ದಿನಗಳಲ್ಲಿ ವರ್ಣಭೇದ ನೀತಿ ಪಿಡುಗನ್ನು ಅನುಭವಿಸಿದ್ದರು.' ಆ ದಿನಗಳ ಅನುಭವ ನ್ಯಾಯದ ಪರ ಹೋರಾಡಲು ಶಕ್ತಿ ನೀಡುತ್ತದೆ' ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಕಿಶಿಡಾ.

English summary
Fumio Kishida was officially elected as Japan’s 100th Prime Minister on Monday after winning a majority of votes in both houses of parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X