ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆಯ ಎರಡು ಡೋಸ್ ಪಡೆದವರಿಗೆ ಸೋಂಕು ತಗುಲುವ ಸಾಧ್ಯತೆ ಎಷ್ಟು ತಗ್ಗಿದೆ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಲಂಡನ್, ಆಗಸ್ಟ್‌ 04: ಕೊರೊನಾ ಲಸಿಕೆ ಪಡೆದವರಿಗೂ ಸೋಂಕು ತಗುಲುತ್ತಿರುವ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿವೆ. ಕೊರೊನಾ ಮೂರನೇ ಅಲೆ ಅಡಿಯಿಡುತ್ತಿರುವ ಈ ಸಂದರ್ಭದಲ್ಲಿ ಲಸಿಕೆ ಪಡೆಯುವುದು ಅವಶ್ಯಕವೂ ಆಗಿದೆ. ಹೀಗಾಗಿ ಲಸಿಕೆ ಪಡೆದವರಲ್ಲಿ ಸೋಂಕು ತಗುಲುವ ಪ್ರಮಾಣ ಎಷ್ಟಿದೆ ಎಂಬ ಕುರಿತು ಚರ್ಚೆಗಳು ಹುಟ್ಟಿಕೊಂಡಿವೆ.

ಈ ಬಗ್ಗೆ ಲಂಡನ್‌ನಲ್ಲಿ ಹೊಸದೊಂದು ಅಧ್ಯಯನ ನಡೆದಿದ್ದು, ಸಂಪೂರ್ಣ ಎರಡು ಡೋಸ್‌ ಲಸಿಕೆ ಪಡೆದವರು ಸೋಂಕಿಗೆ ತುತ್ತಾಗುವ ಪ್ರಮಾಣ ಅತ್ಯಲ್ಪ ಎಂಬುದನ್ನು ತಿಳಿಸಿದೆ. ಅದರಲ್ಲೂ, ವಿಶ್ವವನ್ನೇ ಆವರಿಸುತ್ತಿರುವ ಡೆಲ್ಟಾ ರೂಪಾಂತರದಿಂದ ಸೋಂಕಿಗೆ ಒಳಗಾಗುವ ಸಾಧ್ಯತೆ ಅತಿ ಕಡಿಮೆ ಎಂದು ತಿಳಿಸಿದೆ.

ಸಿಹಿಸುದ್ದಿ: ಮಕ್ಕಳಿಗೆ ಕೊರೊನಾವೈರಸ್ ತಗುಲಿದರೆ 6 ದಿನದಲ್ಲೇ ಗುಣಮುಖ! ಸಿಹಿಸುದ್ದಿ: ಮಕ್ಕಳಿಗೆ ಕೊರೊನಾವೈರಸ್ ತಗುಲಿದರೆ 6 ದಿನದಲ್ಲೇ ಗುಣಮುಖ!

ಇಂಪಿರಿಯಲ್ ಕಾಲೇಜ್ ಲಂಡನ್ ಸಂಶೋಧಕರ ತಂಡ, ಕೊರೊನಾ ಲಸಿಕೆ ಪಡೆದವರಲ್ಲಿ ಸೋಂಕಿನ ಪ್ರಮಾಣದ ಕುರಿತಂತೆ ಅಧ್ಯಯನ ಕೈಗೊಂಡಿದೆ. ಲಸಿಕೆ ಪಡೆದವರಲ್ಲಿ ಸೋಂಕು ತಗುಲುವ ಸಾಧ್ಯತೆಯು ಅರ್ಧದಷ್ಟು ಕಡಿಮೆ ಇದೆ ಎಂಬ ಸಮಾಧಾನಕರ ಸಂಗತಿಯನ್ನು ತಿಳಿಸಿದೆ. ಆದರೆ ಇದು ವಯಸ್ಸಿನ ಮೇಲೂ ಅವಲಂಬಿತವಾಗಿರಬಹುದು ಎಂದು ಹೇಳಿದೆ. ಮುಂದೆ ಓದಿ...

 ಡೆಲ್ಟಾ ರೂಪಾಂತರದ ವಿರುದ್ಧ ಲಸಿಕೆಗಳು ಪರಿಣಾಮಕಾರಿ

ಡೆಲ್ಟಾ ರೂಪಾಂತರದ ವಿರುದ್ಧ ಲಸಿಕೆಗಳು ಪರಿಣಾಮಕಾರಿ

ಆಲ್ಫಾ ರೂಪಾಂತರದ ನಂತರ ಡೆಲ್ಟಾ ರೂಪಾಂತರ ಇಡೀ ವಿಶ್ವವನ್ನೇ ವ್ಯಾಪಿಸುತ್ತಿದ್ದು, ಅತಿ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಆದರೆ ಈ ರೂಪಾಂತರದ ವಿರುದ್ಧ ಕೊರೊನಾ ಲಸಿಕೆಗಳ ಪರಿಣಾಮವನ್ನು ಪರಾಮರ್ಶೆ ಮಾಡಲಾಗಿದೆ. ಕೊರೊನಾ ಸೋಂಕಿನ ವಿರುದ್ಧ ಎರಡು ಡೋಸ್‌ಗಳ ಸಂಪೂರ್ಣ ಪ್ರಮಾಣದ ಲಸಿಕೆ ಪಡೆದವರಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ 50 ರಿಂದ 60% ಕಡಿಮೆ ಇರುವುದಾಗಿ ಅಧ್ಯಯನ ತಿಳಿಸಿದೆ. ಕೊರೊನಾ ಸೋಂಕಿನ ಲಕ್ಷಣಗಳು ಇದ್ದವರಲ್ಲಿಯೂ ಲಸಿಕೆ ಪರಿಣಾಮ 59% ಏರಿಕೆಯಾಗಿರುವುದಾಗಿ ಅಧ್ಯಯನ ತಿಳಿಸಿದೆ. ಲಕ್ಷಣರಹಿತ ಸೋಂಕು ಹೊಂದಿದ್ದವರಲ್ಲಿ ಲಸಿಕೆ ಪರಿಣಾಮದ ಕುರಿತು ಅಧ್ಯಯನ ಬೆಳಕು ಚೆಲ್ಲಿದೆ.

 ಲಸಿಕೆ ಪಡೆಯದ ಯುವಜನರು ಆಸ್ಪತ್ರೆ ಸೇರುವ ಪ್ರಮಾಣ ಹೆಚ್ಚು

ಲಸಿಕೆ ಪಡೆಯದ ಯುವಜನರು ಆಸ್ಪತ್ರೆ ಸೇರುವ ಪ್ರಮಾಣ ಹೆಚ್ಚು

ಸೋಂಕಿನಿಂದ ಆಸ್ಪತ್ರೆ ಸೇರುವ ಪ್ರಮಾಣದ ಕುರಿತು ಅಧ್ಯಯನ ಮಾಹಿತಿ ನೀಡಿದ್ದು, ಎರಡು ಡೋಸ್‌ಗಳ ಲಸಿಕೆ ಪಡೆದವರು ಸೋಂಕಿನಿಂದ ಆಸ್ಪತ್ರೆ ಸೇರುವ ಪ್ರಮಾಣ ತಗ್ಗಿದೆ ಎಂದು ತಿಳಿಸಿದೆ. ಇದರೊಂದಿಗೆ, ಲಸಿಕೆ ಪಡೆಯದ ಯುವಜನರು ಮತ್ತೆ ಸೋಂಕಿನಿಂದ ಆಸ್ಪತ್ರೆ ಸೇರುವ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಹೀಗಾಗಿ ಎಲ್ಲಾ ವಯೋಮಾನದವರೂ ಕೊರೊನಾ ಲಸಿಕೆ ಪಡೆಯುವುದು ಅವಶ್ಯಕವಾಗಿದೆ ಎಂದು ಹೇಳಿದೆ.

ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್

 ಲಸಿಕೆ ಪಡೆದವರಲ್ಲಿ ಸೋಂಕು ದೀರ್ಘಕಾಲ ಕಾಡುವುದಿಲ್ಲ

ಲಸಿಕೆ ಪಡೆದವರಲ್ಲಿ ಸೋಂಕು ದೀರ್ಘಕಾಲ ಕಾಡುವುದಿಲ್ಲ

ಲಸಿಕೆ ಪಡೆಯದವರಲ್ಲಿ ಸೋಂಕಿನ ಪರಿಣಾಮ 1.21% ಇದ್ದು, ಲಸಿಕೆ ಪಡೆದವರಿಗಿಂತ ಮೂರು ಪಟ್ಟು ಹೆಚ್ಚಿನದಾಗಿದೆ. ಲಸಿಕೆ ಪಡೆದವರಲ್ಲಿ ಸೋಂಕಿನ ಪರಿಣಾಮ 0.40% ಇರುವುದಾಗಿ ಅಧ್ಯಯನ ತಿಳಿಸಿದೆ. ಲಸಿಕೆ ಪಡೆದವರಲ್ಲಿ ಸೋಂಕು ದೀರ್ಘಕಾಲ ಉಳಿದುಕೊಳ್ಳುವ ಪ್ರಮಾಣವೂ ಕಡಿಮೆಯಿರುವುದಾಗಿ ಅಧ್ಯಯನ ಸಾಬೀತುಪಡಿಸಿದೆ.

ಲಸಿಕೆ ಪಡೆದವರ ಮೇಲೆ ಸೋಂಕು ಗಂಭೀರ ಪರಿಣಾಮ ಬೀರುವುದಿಲ್ಲ. ಸೋಂಕು ತಗುಲಿದರೂ ಹೆಚ್ಚು ಕಾಲ ದೇಹದಲ್ಲಿ ಸೋಂಕು ಉಳಿಯುವುದಿಲ್ಲ. ಹೀಗಾಗಿ ಲಸಿಕೆ ಪಡೆದುಕೊಳ್ಳುವುದು ಅವಶ್ಯಕ ಎಂಬುದನ್ನು ಅಧ್ಯಯನ ಒತ್ತಿ ಹೇಳಿದೆ.

 ಯುವಜನರಲ್ಲೇ ಸೋಂಕು ಹೆಚ್ಚಾಗಿದೆ

ಯುವಜನರಲ್ಲೇ ಸೋಂಕು ಹೆಚ್ಚಾಗಿದೆ

ಲಸಿಕೆ ಪಡೆಯದ ಯುವಜನರೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ತುತ್ತಾಗುತ್ತಿರುವುದಾಗಿ ಅಧ್ಯಯನ ತಿಳಿಸಿದೆ. ಇಂಗ್ಲೆಂಡ್‌ನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಇಂಗ್ಲೆಂಡ್‌ನಲ್ಲಿ 5-24ರ ವಯೋಮಾನದ 50% ಮಂದಿಗೆ ಸೋಂಕು ತಗುಲಿರುವುದಾಗಿ ತಿಳಿಸಿದೆ. ಅಲ್ಲಿ ಯುವಜನತೆ ಪ್ರಮಾಣ ಒಟ್ಟಾರೆ ಜನಸಂಖ್ಯೆಯಲ್ಲಿ 25% ಇದ್ದು, ಇವರಲ್ಲೇ 50% ಮಂದಿಗೆ ಸೋಂಕು ತಗುಲಿರುವುದಾಗಿ ತಿಳಿಸಿದೆ.

English summary
Fully-vaccinated people have an around 50 to 60% reduced risk of infection from the Delta coronavirus variant, says news study in london,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X