ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ತೈಲ ಖಾಲಿ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ

|
Google Oneindia Kannada News

ಕೊಲಂಬೋ, ಜೂನ್ 27; ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹೊಸ ಸಮಸ್ಯೆ ಉಂಟಾಗಿದೆ. ತೈಲ ಸಂಗ್ರಹ ಖಾಲಿಯಾಗಿದೆ, ವಾಹನ ಸಂಚಾರಕ್ಕೆ ಸರ್ಕಾರ ಹೊಸ ನಿಯಮಗಳನ್ನು ಘೋಷಣೆ ಮಾಡಿದೆ.

ಶ್ರೀಲಂಕಾದ ಆಡಳಿತ ಜುಲೈ 10ರ ತನಕ ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಈ ನಿಯಮ ಜಾರಿಗೆ ಬರಲಿದೆ. ದೇಶದಲ್ಲಿನ ತೈಲ ಸಂಗ್ರಹ ಸಂಪೂರ್ಣ ಖಾಲಿಯಾಗಿದ್ದು, ದೇಶದ 22 ಮಿಲಿಯನ್ ಜನರಿಗೆ ಹೊಸ ಸಂಕಷ್ಟ ಎದುರಾಗಿದೆ.

ಇಂಧನಕ್ಕಾಗಿ ಸಾಲು ನಿಂತವರಿಗೆ ಟೀ ಮತ್ತು ಬನ್ ವಿತರಿಸಿದ ಶ್ರೀಲಂಕಾ ಮಾಜಿ ಕ್ರಿಕೆಟಿಗ ಇಂಧನಕ್ಕಾಗಿ ಸಾಲು ನಿಂತವರಿಗೆ ಟೀ ಮತ್ತು ಬನ್ ವಿತರಿಸಿದ ಶ್ರೀಲಂಕಾ ಮಾಜಿ ಕ್ರಿಕೆಟಿಗ

ಸರ್ಕಾರದ ಆದೇಶದ ಪ್ರಕಾರ ತುರ್ತು ವಾಹನಗಳ ಪಟ್ಟಿಯಲ್ಲಿ ಆರೋಗ್ಯ, ಕಾನೂನು & ಸುವ್ಯವಸ್ಥೆ, ಬಂದರು, ವಿಮಾನ ನಿಲ್ದಾಣ, ಆಹಾರ ಸರಬರಾಜು ಮತ್ತು ಕೃಷಿ ಸಂಬಂಧಿತ ವಾಹನಗಳು ಮಾತ್ರ ಸೇರಿವೆ. ಈ ವಾಹನಗಳು ಮಾತ್ರ ಸಂಚಾರ ನಡೆಸಬಹುದಾಗಿದೆ.

ಭಾರತಕ್ಕೆ ಶೀಘ್ರದಲ್ಲೇ ವಿಮಾನಯಾನ ಪುನರಾರಂಭ : ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆಭಾರತಕ್ಕೆ ಶೀಘ್ರದಲ್ಲೇ ವಿಮಾನಯಾನ ಪುನರಾರಂಭ : ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ

Sri Lanka fuel

ಸೋಮವಾರ ಮಧ್ಯರಾತ್ರಿಯಿಂದ ಜುಲೈ 10ರ ತನಕ ತುರ್ತು ವಾಹನಗಳನ್ನು ಬಿಟ್ಟು ಇತರ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ದ್ವೀಪ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ: ಶ್ರೀಲಂಕಾ ಪ್ರಧಾನಿ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ: ಶ್ರೀಲಂಕಾ ಪ್ರಧಾನಿ

ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿರುವ ಕಾರಣ ಶಾಲೆಗಳನ್ನು ಮುಚ್ಚಲಾಗಿದೆ. ಖಾಸಗಿ ಕಂಪನಿಗಳ ಸಿಬ್ಭಂದಿಗಳು ಮನೆಯಿಂದ ಕಾರ್ಯ ನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗಿದೆ.

ಇದೇ ಮೊದಲ ಬಾರಿಗೆ ದ್ವೀಪ ರಾಷ್ಟ್ರ ತೈಲ ಸಂಗ್ರಹ ಕೊರತೆ ಎದುರಿಸುತ್ತಿದೆ. ಸರ್ಕಾರಿ ಕಚೇರಿಗಳ ಸಿಬ್ಬಂದಿಗಳಿಗೆ ಸಹ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಉಪಯೋಗಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಶ್ರೀಲಂಕಾ ಕ್ರೆಡಿಟ್ ಲೈನ್ ಆಧಾರದಲ್ಲಿ ಭಾರತದಿಂದ ಹೊಸದಾಗಿ ಪೆಟ್ರೋಲ್ ಪೂರೈಕೆಗಾಗಿ ಎದುರು ನೋಡುತ್ತಿದೆ. ಮೂರು ದಿನಗಳಲ್ಲಿ ಪೆಟ್ರೋಲ್ ಲಭ್ಯವಾಗಲಿದೆ ಎಂದು ದೇಶದ ಜನರಿಗೆ ಭರವಸೆ ನೀಡಲಾಗಿತ್ತು.

ಮಿತಿ ಮೀರಿ ಬಾಕಿ ಉಳಿಸಿಕೊಂಡಿರುವ ಪರಿಣಾಮ ತೈಲ ಪೂರೈಕೆದಾರರು ಶ್ರೀಲಂಕಾಕ್ಕೆ ತೈಲ ಸರಬರಾಜು ಮಾಡಲು ಮುಂದೆ ಬರುತ್ತಿಲ್ಲ. ಆದ ಕಾರಣ ದೇಶದಲ್ಲಿ ಸಂಗ್ರಹವಿದ್ದ ಎಲ್ಲಾ ತೈಲ ಖಾಲಿಯಾಗಿದೆ.

Recommended Video

ಸಹ ಆಟಗಾರನನ್ನು‌ ನಿಂದಿಸಿದ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟು ಬೆವರಳಿಸಿದ ವಿರಾಟ್ ಕೊಹ್ಲಿ | Oneindia Kannada

ಭಾರತ ಸರ್ಕಾರ ಕ್ರೆಡಿಟ್ ಲೈನ್ ಆಧಾರದಲ್ಲಿ ಇದುವರೆಗೂ ಎರಡು ಬಾರಿ ಶ್ರೀಲಂಕಾಗೆ ತೈಲ ಸರಬರಾಜು ಮಾಡಿದೆ. ಆದರೂ ಸಹ ಶ್ರೀಲಂಕಾಗೆ ಅಗತ್ಯವಿರುಷ್ಟು ತೈಲ ಹೊಂದಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

English summary
Sri Lanka economic crisis; Sri Lanka has run out of fuel and only essential services will operate till July 10 and All non-essential services have been suspended from July 27th midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X