ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷ್ ನೆಲದಲ್ಲಿ ಟ್ರಕ್ ಚಾಲಕರಿಲ್ಲದೇ ಒಣಗುತ್ತಿರುವ ಪೆಟ್ರೋಲ್ ಬಂಕ್‌ಗಳು!

|
Google Oneindia Kannada News

ಬ್ರಿಟನ್, ಸೆಪ್ಟೆಂಬರ್ 28: ಯುನೈಟೆಡ್ ಕಿಂಗ್‌ಡಮ್ ನಗರಗಳಲ್ಲಿ ಟ್ರಕ್ಕರ್‌ಗಳ ಕೊರತೆ ಹಾಗೂ ಖರೀದಿ ಕೊರತೆಯಿಂದಾಗಿ ಪೆಟ್ರೋಲ್ ಬಂಕ್‌ಗಳು ಒಣಗುತ್ತಿವೆ. ಇಂಧನದ ಕೊರತೆಯಿಲ್ಲ ಎಂದು ಸರ್ಕಾರವು ಭರವಸೆ ನೀಡಿರುವುದರ ನಡುವೆ ಭಾನುವಾರ ದೇಶಾದ್ಯಂತ ಪಂಪ್ ಎದುರಿಗೆ ಕಾರುಗಳು ಸಾಲುಗಟ್ಟಿ ನಿಂತಿದ್ದವು. ಇದರ ಮಧ್ಯೆ ಚಿಲ್ಲರೇ ವ್ಯಾಪಾರಿಗಳು ತಮ್ಮ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಿಕೊಂಡಿದ್ದರು.

"ನಮ್ಮ ಕೆಲವು ಸದಸ್ಯರು, ಸೈಟ್‌ಗಳ ಪೋರ್ಟ್‌ ಫೋಲಿಯೊ ಹೊಂದಿರುವ ದೊಡ್ಡ ಗುಂಪುಗಳು, ನಿನ್ನೆ ಹೊತ್ತಿಗೆ ಶೇ.50ರಷ್ಟು ಒಣಗಿವೆ ಎಂದು ವರದಿಯಾಗಿದೆ. ಕೆಲವರು ನಿನ್ನೆ ಹೊತ್ತಿಗೆ ಶೇಕಡಾ 90ರಷ್ಟು ಒಣಗಿವೆ," ಎಂಬ ವರದಿ ಬಗ್ಗೆ ಚಿಲ್ಲರೆ ಪೆಟ್ರೋಲ್ ವ್ಯಾಪಾರಿಗಳ ಸಂಘದ (ಪಿಆರ್‌ಎ) ಅಧ್ಯಕ್ಷ ಬ್ರಿಯಾನ್ ಮ್ಯಾಡರ್ಸನ್ ಹೇಳಿದ್ದಾರೆ.

ಸೆ.28: ಮೂರು ವಾರಗಳ ನಂತರ ಪೆಟ್ರೋಲ್ ದರದಲ್ಲಿ ಏರಿಕೆ; ಡೀಸೆಲ್ ಸಹ ಏರಿಕೆಸೆ.28: ಮೂರು ವಾರಗಳ ನಂತರ ಪೆಟ್ರೋಲ್ ದರದಲ್ಲಿ ಏರಿಕೆ; ಡೀಸೆಲ್ ಸಹ ಏರಿಕೆ

ಸೋಮವಾರ ಒಣಗಲು ಆರಂಭ:

ಯುನೈಟೆಡ್ ಕಿಂಗ್‌ಡಮ್ ಶೇ.65ರಷ್ಟು ಮುನ್ಸೂಚನೆಗಳನ್ನು ಹೊಂದಿರುವ ಪಿಆರ್ಎ ಸ್ವತಂತ್ರ ಇಂಧನ ಚಿಲ್ಲರೆ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತದೆ. "ಸೋಮವಾರ ಬೆಳಗ್ಗೆ ಪೆಟ್ರೋಲ್ ಪಂಪ್ ಒಣಗುವುದಕ್ಕೆ ಆರಂಭವಾಗಿದ್ದು, ಇದು ತುಂಬಾ ತೀವ್ರವಾಗಿರುವುದನ್ನು ನೀವು ನೋಡಬಹುದು," ಎಂದು ಮ್ಯಾಡರ್ಸನ್ ಹೇಳಿದ್ದಾರೆ.

Fuel pumps run dry in British cities amid panic buying

ರಾಜಧಾನಿ ಲಂಡನ್‌ನ ಪಂಪ್‌ಗಳ ಎದುರಿನ ವಾಸ್ತವ ಸಂಗತಿಯನ್ನು ವರದಿ ಮಾಡಿದ ಅಲ್ ಜಜೀರಾ ಆಂಡ್ರ್ಯೂ ಸಿಮನ್ಸ್, "ಜನರು ಜೆರ್ರಿ ಡಬ್ಬಿಗಳಲ್ಲಿ ಪೆಟ್ರೋಲ್ ಅನ್ನು ತೆಗೆದುಕೊಂಡು ಹೋಗಿ ಸಂಗ್ರಹಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ನಿಯಂತ್ರಣ ಕಳೆದುಕೊಂಡಿರುವ ಸರ್ಕಾರವು ತೀವ್ರ ಗೊಂದಲಕ್ಕೆ ಸಿಲುಕಿಕೊಂಡಿದೆ," ಎಂದು ಹೇಳಿದ್ದಾರೆ.

ಸ್ಪರ್ಧಾತ್ಮಕ ಕಾನೂನುಗಳು ಸ್ಥಗಿತ:

ಬ್ರಿಟಿಷ್ ತೈಲ ಕಂಪನಿಗಳಲ್ಲಿ ದೈತ್ಯ ಎನಿಸಿರುವ ಬಿಪಿ ರಾಷ್ಟ್ರವ್ಯಾಪಿ ತನ್ನ ಕೇಂದ್ರಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಇಂಧನದ ಎರಡು ಮುಖ್ಯ ದರ್ಜೆಗಳಿಂದ ಹೊರಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ - ಕೊಳ್ಳುವಿಕೆ ಭೀತಿಯಿಂದಾಗಿ ಸರ್ಕಾರವು ಸ್ಪರ್ಧಾತ್ಮಕ ಕಾನೂನುಗಳನ್ನು ಸ್ಥಗಿತಗೊಳಿಸಲು ಮತ್ತು ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಕಂಪನಿಗಳು ಒಟ್ಟಾಗಿ ಕೆಲಸ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಅಮಾನತು ಸಂಸ್ಥೆಗಳು ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಅವರ ಪ್ರತಿಕ್ರಿಯೆಯನ್ನು ಸಂಯೋಜಿಸಲು ಅವಕಾಶ ನೀಡುತ್ತದೆ ಎಂದು ವ್ಯಾಪಾರ ಕಾರ್ಯದರ್ಶಿ ಕ್ವಾಸಿ ಕ್ವಾರ್ಟೆಂಗ್ ಹೇಳಿದ್ದಾರೆ.

ಅಡೆತಡೆಗಳ ಸಡಿಲಿಕೆ:

"ಈ ಹಂತದಲ್ಲಿ ಸರ್ಕಾರವು ಇಂಧನ ಉತ್ಪಾದಕರು, ಪೂರೈಕೆದಾರರು, ಸಾಗಾಣಿಕೆದಾರರು ಮತ್ತು ಚಿಲ್ಲರೆ ವ್ಯಾಪಾರಿಗಳೊಂದಿಗೆ ರಚನಾತ್ಮಕ ರೀತಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಎಲ್ಲ ರೀತಿಯ ಅಡೆತಡೆಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವುದನ್ನು ದೃಢಪಡಿಸಿಕೊಳ್ಳುವುದಕ್ಕೆ ವ್ಯಾಪಾರ ಇಲಾಖೆ ಹೇಳಿಕೆ ತಿಳಿಸಿದೆ.

ತಾತ್ಕಾಲಿಕ ವೀಸಾ:

ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ನೇತೃತ್ವದ ಸಂಪ್ರದಾಯವಾದಿ ಸರ್ಕಾರವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಲ್ಲಿನ ಬಿಕ್ಕಟ್ಟು ನಿವಾರಣೆ ದೃಷ್ಟಿಯಿಂದ 5,000 ವಿದೇಶಿ ಟ್ರಕ್ ಚಾಲಕರಿಗೆ ತಾತ್ಕಾಲಿಕ ವೀಸಾ ನೀಡುವ ಯೋಜನೆಯನ್ನು ಘೋಷಿಸಿದೆ. ಬ್ರೆಕ್ಸಿಟ್ ನಂತರದ ವಲಸೆಯ ನಿಯಮಗಳು ಎಂದರೆ ಹೊಸದಾಗಿ ಬಂದಿರುವ ಯುರೋಪಿಯನ್ ಯೂನಿಯನ್ ನಾಗರಿಕರು ಬ್ರಿಟನ್‌ನಲ್ಲಿ ವೀಸಾ ಇಲ್ಲದೇ ಕೆಲಸ ಮಾಡುವುದಕ್ಕೆ ಸಾಧ್ಯವಿರುವುದಿಲ್ಲ.

ಕೋವಿಡ್ -19 ಸಾಂಕ್ರಾಮಿಕ ಪಿಡುಗು ಮತ್ತು ಬ್ರೆಕ್ಸಿಟ್ ಒಟ್ಟಾಗಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಅಂದಾಜು 100,000 ಹಮಾಲರ ಕೊರತೆ ಮತ್ತು ವಿವಿಧ ವಲಯಗಳಿಂದ ಉದ್ಯಮದ ಎಚ್ಚರಿಕೆಗಳ ಹೊರತಾಗಿಯೂ ತಿಂಗಳುಗಳವರೆಗೆ ಹೆಚ್ಚಿನ ವೀಸಾ ನೀಡುವುದನ್ನು ಸರ್ಕಾರ ವಿರೋಧಿಸಿತು. ಅಲ್ಲದೇ ವೀಸಾ ವಿತರಣೆಯು ಅಲ್ಪಾವಧಿಯ ಪರಿಹಾರವಾಗಿದ್ದು, ಕಾರ್ಮಿಕರ ತೀವ್ರ ಕೊರತೆಯನ್ನು ಪರಿಹರಿಸುವುದಿಲ್ಲ ಎಂದು ಉದ್ಯಮಿಗಳು ಎಚ್ಚರಿಸಿದ್ದಾರೆ.

ಚಾಲಕರ ನೇಮಕ ಮತ್ತು ತರಬೇತಿ:

ಸರ್ಕಾರವು ದೀರ್ಘಾವಧಿಯಲ್ಲಿ ಬ್ರಿಟಿಷ್ ಕಾರ್ಮಿಕರಿಗೆ ಚಾಲನಾ ತರಬೇತಿ ನೀಡಿ ಉದ್ಯೋಗಳನ್ನು ಭರ್ತಿ ಮಾಡಿಕೊಳ್ಳಬೇಕು. ಆ ಮೂಲಕ ಸಾರಿಗೆ ಕಂಪನಿಗಳು ವೇತನ ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವಂತೆ ಕರೆ ನೀಡಲಾಗಿದೆ. ಏಕೆಂದರೆ ಟ್ರಕ್ ಚಾಲಕರ ಕೊರತೆಯು ಇತ್ತೀಚಿನ ತಿಂಗಳುಗಳಲ್ಲಿ ಬ್ರಿಟಿಷ್ ಕಾರ್ಖಾನೆಗಳು, ರೆಸ್ಟೋರೆಂಟ್‌ಗಳು ಮತ್ತು ಸೂಪರ್‌ ಮಾರ್ಕೆಟ್‌ಗಳಿಗೂ ತಟ್ಟಿದೆ. ಕೊರತೆಯು ಪೂರೈಕೆ ಸರಪಳಿಗಳಿಗೆ ಹಾನಿಯುಂಟು ಮಾಡಿದೆ, ಮಾರುಕಟ್ಟೆಗೆ ಸರಕುಗಳನ್ನು ಸಾಗಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕ್ರಿಸ್‌ಮಸ್‌ಗೂ ಮುನ್ನ ಬೆಲೆ ಏರಿಕೆಯ ಆತಂಕ ಹೆಚ್ಚಾಗಿದೆ.

English summary
Fuel pumps run dry in British cities amid panic buying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X