ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರ ಹೊಗಳಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

|
Google Oneindia Kannada News

ಇಸ್ಲಮಾಬಾದ್, ಮೇ 27: ಪ್ರಧಾನಿ ಹುದ್ದೆ ಕಳೆದುಕೊಳ್ಳುತ್ತಿದ್ದಂತೆ ಅದ್ಯಾಕೋ ಇಮ್ರಾನ್‌ ಖಾನ್‌ಗೆ ಭಾರತದ ಮೇಲೆ ವಿಶೇಷ ಒಲವು ಬಂದಂತಿದೆ. ಪಾಕಿಸ್ತಾನ ಸರ್ಕಾರವನ್ನು ಟೀಕಿಸುವ ವೇಳೆಯಲ್ಲಿ ಪದೇ ಪದೇ ಭಾರತವನ್ನು ಹೊಗಳುತ್ತಲೇ ಇದ್ದಾರೆ. ಅದಕ್ಕೆ ಈಗ ಮತ್ತೊಂದು ಸೇರ್ಪಡೆಯಾಗಿದೆ ಭಾರತದಲ್ಲಿ ಡೀಸೆಲ್, ಪೆಟ್ರೋಲ್ ದರ ಇಳಿಸಿದ್ದನ್ನು ಶ್ಲಾಘಿಸಿರುವ ಅವರು ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದಾರೆ.

ರಷ್ಯಾದಿಂದ ಅಗ್ಗದ ತೈಲ ಆಮದು ಮಾಡಿಕೊಂಡ ಕಾರಣ ಭಾರತದಲ್ಲಿ ಇಂಧನ ದರ ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಲೀಟರ್‌ಗೆ 30 ರೂಪಾಯಿಗಳಷ್ಟು ಹೆಚ್ಚಿಸಿದೆ (ಪಾಕಿಸ್ತಾನ ರೂಪಾಯಿ). ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವನ್ನು ಟೀಕಿಸಿರುವ ಅವರು ಭಾರತ ಸರ್ಕಾರವನ್ನು ಹೊಗಳಿದ್ದಾರೆ.

Video: ಪಾಕಿಸ್ತಾನದಲ್ಲಿ ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದ ಇಮ್ರಾನ್ ಖಾನ್ ಬೆಂಬಲಿಗರು! Video: ಪಾಕಿಸ್ತಾನದಲ್ಲಿ ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದ ಇಮ್ರಾನ್ ಖಾನ್ ಬೆಂಬಲಿಗರು!

ಪಾಕಿಸ್ತಾನ ಜನತೆಗೆ ಹೊಸ ಸರ್ಕಾರ ಬೆಲೆ ಹೆಚ್ಚಳವನ್ನು ಕೊಡುಗೆಯಾಗಿ ನೀಡಿದೆ. ಇದಕ್ಕೆ ಪಾಕಿಸ್ತಾನದ ಜನ ಬೆಲೆ ತೆರಬೇಕಾಗಿದೆ ಎಂದಿದ್ದಾರೆ. ಶೇ.30 ಅಗ್ಗದ ದರದ ತೈಲಕ್ಕಾಗಿ ರಷ್ಯಾದೊಂದಿಗೆ ಒಪ್ಪಂದ ಮುಂದುವರಿಸದ "ಅಸಮರ್ಥ ಮತ್ತು ಸಂವೇದನಾರಹಿತ" ಸರ್ಕಾರ ಎಂದು ಟೀಕಿಸಿದ್ದಾರೆ.

ಶೀಘ್ರವೇ ಚುನಾವಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ ಇಮ್ರಾನ್ ಖಾನ್ಶೀಘ್ರವೇ ಚುನಾವಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ ಇಮ್ರಾನ್ ಖಾನ್

ರಷ್ಯಾದೊಂದಿಗೆ ಒಪ್ಪಂದ ಮುಂದುವರಿಸದ ಹೊಸ ಸರ್ಕಾರ

ರಷ್ಯಾದೊಂದಿಗೆ ಒಪ್ಪಂದ ಮುಂದುವರಿಸದ ಹೊಸ ಸರ್ಕಾರ

ಈ ಹಿಂದೆ ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿ ಹುದ್ದೆಯಿಂದ ಉಚ್ಛಾಟಿತರಾದ ಇಮ್ರಾನ್ ಖಾನ್ ಅಗ್ಗದ ತೈಲದ ಪೂರೈಕೆ ಒಪ್ಪಂದದ ಕುರಿತು ಮಾತುಕತೆ ಮುಂದುವರಿಸಲು ರಷ್ಯಾಕ್ಕೆ ಭೇಟಿ ನೀಡಿರುವುದಾಗಿ ಹೇಳಿಕೊಂಡಿದ್ದರು. ಈ ಭೇಟಿಯ ಸಂದರ್ಭದಲ್ಲೇ ಉಕ್ರೇನ್‌ ಮೇಲೆ ರಷ್ಯಾದ ದಾಳಿ ಆರಂಭವಾಗಿದ್ದರಿಂದ ಇಮ್ರಾನ್‌ ಖಾನ್ ಭೇಟಿ ಮಹತ್ವ ಕಳೆದುಕೊಂಡಿತ್ತು.

"ವಿದೇಶಿಯರ ಕೃಪೆಯಿಂದ ಅಧಿಕಾರಕ್ಕೆ ಬಂದ ಶೆಹಬಾಜ್‌ ಷರೀಫ್ ವಿದೇಶಿಯರ ಲಾಭಕ್ಕಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ. ಅದರ ಮೊದಲ ಭಾಗವಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಶೇ.20ರಷ್ಟು ಅಥವಾ ಪಾಕಿಸ್ತಾನದ 30 ರೂಪಾಯಿಯಷ್ಟು ಬೆಲೆ ಏರಿಕೆ ಮಾಡಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆ ಏರಿಕೆಯಾಗಿದೆ. ಅಸಮರ್ಥ ಸರ್ಕಾರ ನಮ್ಮ ಅವಧಿಯಲ್ಲಿ ರಷ್ಯಾದೊಂದಿಗೆ ಮಾಡಿಕೊಂಡಿದ್ದ ಅಗ್ಗದ ತೈಲ ಪೂರೈಕೆ ಒಪ್ಪಂದವನ್ನು ಮುಂದುವರೆಸಲಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ಸರ್ಕಾರವನ್ನು ಹೊಗಳಿದ ಇಮ್ರಾನ್

ಮೋದಿ ಸರ್ಕಾರವನ್ನು ಹೊಗಳಿದ ಇಮ್ರಾನ್

ಭಾರತ ಸರ್ಕಾರದ ಆಡಳಿತವನ್ನು ಹೊಗಳಿರುವ ಅವರು "ರಷ್ಯಾದಿಂದ ಅಗ್ಗದ ದರದ ತೈಲವನ್ನು ಖರೀದಿಸುವ ಮೂಲಕ ಭಾರತದಲ್ಲಿ ಪ್ರತಿ ಲೀಟರ್ ಇಂಧನದ ಬೆಲೆ 25 ಪಾಕಿಸ್ತಾನ ರೂಪಾಯಿಗಳಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಈಗ ಪಾಕಿಸ್ತಾನವು ಈ ಮೋಸಗಾರರ ಕೈಯಲ್ಲಿ ಸಿಕ್ಕು ಹಣದುಬ್ಬರದಂತ ಸಂಕಷ್ಟವನ್ನು ಎದುರಿಸುತ್ತಿದೆ" ಎಂದಿದ್ದಾರೆ.

"ಕ್ವಾಡ್‌ನ ಭಾಗವಾಗಿದ್ದರೂ, ಭಾರತವು ಯುಎಸ್‌ನಿಂದ ಒತ್ತಡವನ್ನು ಎದುರಿಸಿದೆ ಮತ್ತು ಜನಸಾಮಾನ್ಯರಿಗೆ ಪರಿಹಾರ ಒದಗಿಸಲು ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಿತು. ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದಿಂದ ಈ ಕೆಲಸ ಮಾಡುತ್ತಿದೆ" ಎಂದು ಇಮ್ರಾನ್ ಖಾನ್ ಬೆಲೆ ಕಡಿತವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರ
ೆ.

ಪಾಕಿಸ್ತಾನದಲ್ಲಿ ಹೆಚ್ಚಾಯ್ತು ಪೆಟ್ರೋಲ್, ಡೀಸೆಲ್ ದರ

ಪಾಕಿಸ್ತಾನದಲ್ಲಿ ಹೆಚ್ಚಾಯ್ತು ಪೆಟ್ರೋಲ್, ಡೀಸೆಲ್ ದರ

ಏಕಾಏಕಿ ಇಂಧನ ತೈಲ ಬೆಲೆಯನ್ನು ಶೇ.30 ರಷ್ಟು ಹೆಚ್ಚಿಸಿ ಪಾಕಿಸ್ತಾನ ಸರ್ಕಾರ ಆದೇಶ ಮಾಡಿದೆ. ಸದ್ಯಕ್ಕೆ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 179.86 ರೂಪಾಯಿಗಳಾಗಿದೆ. ಹೈಸ್ಪೀಡ್ ಡೀಸೆಲ್ ದರ 174.15 ರೂ.ಗಳಿಗೆ ಹೆಚ್ಚಾಗಿದೆ, ಸೀಮೆಎಣ್ಣೆ ದರ 155.56 ರೂ. ಮತ್ತು ಲೈಟ್ ಡೀಸೆಲ್ ದರ ಪ್ರತಿ ಲೀಟರ್‍‌ಗೆ 148.31 ರೂಪಾಯಿಗಳಿಗೆ ಏರಿಕೆಯಾಗಿದೆ.

ಮೇ 21 ರಂದು, ಭಾರತ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು, ಇದರ ಪರಿಣಾಮವಾಗಿ ಪೆಟ್ರೋಲ್ ಬೆಲೆ ಲೀಟರ್‌ಗೆ 9.5 ರೂ. ಕಡಿಮೆಯಾಗಿದೆ, ಡೀಸೆಲ್ ಬೆಲೆ ಲೀಟರ್‌ಗೆ 7 ರೂಪಾಯಿ ಕಡಿಮೆಯಾಗಿತ್ತು.

ದೇಶದಲ್ಲಿ ಪೆಟ್ರೋಲ್, ಹಣ ಸಿಗ್ತಿಲ್ಲ ಎಂದ ಖ್ಯಾತ ಕ್ರಿಕೆಟಿಗ

ದೇಶದಲ್ಲಿ ಪೆಟ್ರೋಲ್, ಹಣ ಸಿಗ್ತಿಲ್ಲ ಎಂದ ಖ್ಯಾತ ಕ್ರಿಕೆಟಿಗ

ಪಾಕಿಸ್ತಾನದ ಮಾಜಿ ನಾಯಕ ಮತ್ತು ಖ್ಯಾತ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಅಲ್ಲಿನ ಸಮಸ್ಯೆಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ, "ಲಾಹೋರ್‌ನ ಯಾವುದೇ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಲಭ್ಯವಿಲ್ಲ, ಎಟಿಎಂ ಯಂತ್ರಗಳಲ್ಲಿ ನಗದು ಸಿಗುತ್ತಿಲ್ಲ, ರಾಜಕೀಯ ನಿರ್ಧಾರಗಳಿಂದ ಸಾಮಾನ್ಯ ಜನರು ಬಳಲುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ರಾಜಕೀಯ ನಾಯಕರ ತಿಕ್ಕಾಟದಿಂದ ದೇಶದಲ್ಲಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರ ಬೇಸರ ವ್ಯಕ್ತಪಡಿಸಿದ್ದಾರೆ. ಲಾಹೋರ್‌ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾದ ನಂತರ ಟ್ವೀಟ್ ಮಾಡಿದ್ದಾರೆ.

English summary
The Pakistan government led by Shehbaz Sharif has raised the price of petroleum products by Rs 30 per liter (Pakistan rupee). Imran Khan Slams Pakistan Government Praises India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X