ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶಸ್ವಿ ಜಿ20 ಶೃಂಗಸಭೆ ಮುಗಿಸಿ ಭಾರತದತ್ತ ಮೋದಿ

|
Google Oneindia Kannada News

ಒಸಾಕಾ, ಜೂನ್ 29: ಜಪಾನ್‌ನ ಒಸಾಕಾದಲ್ಲಿ ನಡೆದ ಮಹತ್ವದ ಜಿ 20 ಶೃಂಗಸಭೆ ಮುಗಿಸಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಹಿಂದಿರುಗಿದ್ದಾರೆ.

ಈ ಶೃಂಗಸಭೆಯಲ್ಲಿ ಮೋದಿ ಅವರು ಅಮೆರಿಕದೊಂದಿಗೆ ಮಹತ್ವವಾದ ದ್ವಿಪಕ್ಷೀಯ ಮಾತುಕತೆಯನ್ನು ಮುಗಿಸಿದ್ದು, ವ್ಯಾಪಾರದ ಸಂಬಂಧ ಎರಡು ರಾಷ್ಟ್ರಗಳ ನಡುವೆ ಇತ್ತೀಚೆಗೆ ಉಲ್ಬಣಿಸಿದ್ದ ಬಿಕ್ಕಟ್ಟುಗಳನ್ನು ನಿವಾರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಸೆಲ್ಫಿ ಕ್ಲಿಕ್ಕಿಸಿ 'ಕಿತ್ನಾ ಅಚ್ಛಾ ಹೇ ಮೋದಿ' ಎಂದ ಆಸ್ಟ್ರೇಲಿಯಾ ಪ್ರಧಾನಿ ಸೆಲ್ಫಿ ಕ್ಲಿಕ್ಕಿಸಿ 'ಕಿತ್ನಾ ಅಚ್ಛಾ ಹೇ ಮೋದಿ' ಎಂದ ಆಸ್ಟ್ರೇಲಿಯಾ ಪ್ರಧಾನಿ

ಚೀನಾ-ಅಮೆರಿಕ-ಭಾರತ ಮೂರು ದೇಶಗಳು ಸಹ ಸಭೆ ನಡೆಸಿ ಭಯೋತ್ಪಾದನೆ ವಿರುದ್ಧ ಹೋರಾಡುವ ನಿರ್ಣಯ ಪ್ರಕಟಿಸಿದೆ. ಅಲ್ಲದೆ ಮೋದಿ ಅವರು ವಿಶೇಷವಾಗಿ ಭಯೋತ್ಪಾದನೆ ವಿರುದ್ಧ ಸಂದೇಶವನ್ನು ನೀಡಿದ್ದಾರೆ.

Fruifull G20 summit for India, Modi leaves for India

ಆದರೆ ಶೃಂಗಸಭೆಯಲ್ಲಿ ಭಾರತವು, ಜಪಾನ್‌ ಮಂಡಿಸಿದ್ದ ಡಿಎಫ್‌ಎಫ್‌ಟಿ (ಡಾಟಾ ಫ್ರೀ ಫ್ಲೋ ಟ್ರಸ್ಟ್‌) ಇಂದ ಹೊರಗೆ ಉಳಿಯಲು ನಿರ್ಧರಿಸಿದ್ದು, ತನ್ನ ನಿಲುವನ್ನು ಭಾರತವು ಸಮರ್ಥಿಸಿಕೊಂಡಿದೆ.

ಭಯೋತ್ಪಾದನೆ ದೊಡ್ಡ ಅಪಾಯ: ಬ್ರಿಕ್ಸ್ ಸಮಿತಿಯಲ್ಲಿ ಮೋದಿ ಕಳವಳ ಭಯೋತ್ಪಾದನೆ ದೊಡ್ಡ ಅಪಾಯ: ಬ್ರಿಕ್ಸ್ ಸಮಿತಿಯಲ್ಲಿ ಮೋದಿ ಕಳವಳ

ಶೃಂಗಸಭೆಯ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಡಾಟಾ ಸಂಬಂಧಿಸಿದಂತೆ ನಿಯಮಗಳನ್ನು ವಿಶ್ವ ವ್ಯಾಪಾರ ಸಂಸ್ಥೆಯ ಅಡಿಯಲ್ಲಿ ರೂಪಿಸುವುದು, ಜಿ20 ಯಲ್ಲಿ ರೂಪಿಸುವುದಕ್ಕಿಂತಲೂ ಉತ್ತಮ ಎಂದು ಹೇಳಿದ್ದಾರೆ.

English summary
G 20 summit in Japan is fruitful for India. Modi and Trumph bilateral talks are may clear trade problems between America and India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X