ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಮತ್ತೆ 3 ಕಡೆ ಬಾಂಬ್ ಸ್ಫೋಟ, 1 ಸಾವು

|
Google Oneindia Kannada News

ಕೊಲಂಬೋ, ಏಪ್ರಿಲ್ 26 : ಶ್ರೀಲಂಕಾದಲ್ಲಿ ಮತ್ತೆ ಸರಣಿ ಬಾಂಬ್ ಸ್ಫೋಟ ನಡೆದಿದೆ. ಶುಕ್ರವಾರ ರಾತ್ರಿ ಮೂರು ಕಡೆ ಬಾಂಬ್ ಸ್ಫೋಟಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಶುಕ್ರವಾರ ರಾತ್ರಿ ಕಾಲ್ ಮುನೈ ನಗರದಲ್ಲಿ ಮೂರು ಕಡೆ ಬಾಂಬ್ ಸ್ಫೋಟವಾಗಿದೆ ಎಂಬ ವರದಿ ಬಂದಿದೆ. ಸೇನಾ ವಕ್ತಾರರು ಸಹ ಬಾಂಬ್ ಸ್ಫೋಟವನ್ನು ಖಚಿತ ಪಡಿಸಿದ್ದಾರೆ.

'ಶ್ರೀಲಂಕಾ ಸ್ಫೋಟದ ಮುಖ್ಯ ಶಂಕಿತ ಹಶೀಮ್ ದಾಳಿ ವೇಳೆಯೇ ಸತ್ತಿದ್ದಾನೆ''ಶ್ರೀಲಂಕಾ ಸ್ಫೋಟದ ಮುಖ್ಯ ಶಂಕಿತ ಹಶೀಮ್ ದಾಳಿ ವೇಳೆಯೇ ಸತ್ತಿದ್ದಾನೆ'

ಕಳೆದ ಭಾನುವಾರ ಈಸ್ಟರ್ ಪ್ರಾರ್ಥನೆ ವೇಳೆ ಚರ್ಚ್, ಹೋಟೆಲ್‌ಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. 200ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಬಳಿಕ ದೇಶದ ಬೇರೆ-ಬೇರೆ ಕಡೆ ಬಾಂಬ್ ಸ್ಫೋಟವಾಗಿತ್ತು.

ಜಸ್ಟ್ ಮಿಸ್: ಶ್ರೀಲಂಕಾ ಪ್ರವಾಸದ ಅನುಭವ ಹಂಚಿಕೊಂಡ ಪ್ರವಾಸಿಗರುಜಸ್ಟ್ ಮಿಸ್: ಶ್ರೀಲಂಕಾ ಪ್ರವಾಸದ ಅನುಭವ ಹಂಚಿಕೊಂಡ ಪ್ರವಾಸಿಗರು

Sri Lanka

ಭಾರತಕ್ಕೆ ನುಗ್ಗಿದ ಉಗ್ರರು : ಮತ್ತೊಂದು ಕಡೆ ದೇಶದೊಳಗೆ 19 ಉಗ್ರರು ನುಸುಳಿದ್ದಾರೆ ಎಂಬ ಅಪರಿಚಿತ ಕರೆಯೊಂದು ಬಂದಿದೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ಗೋವಾ, ಪುದುಚೇರಿ, ಆಂಧ್ರಪ್ರದೇಶ ರಾಜ್ಯಗಳಿಗೆ ಉಗ್ರರು ನುಗ್ಗಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಸಿಕ್ಕಿದೆ. ಆದ್ದರಿಂದ, ರಾಜ್ಯಗಳಲ್ಲಿ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.

English summary
Serial bomb blast in Sri Lanka again. 1 person killed in blast at 3 place on April 26, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X