• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ ಮತ್ತೆ ಬಂತು ಕೋವಿಡ್; ವಿಮಾನ, ಶಾಲೆ ಬಂದ್

|
Google Oneindia Kannada News

ಬಿಜೀಂಗ್, ಅಕ್ಟೋಬರ್ 21; ಚೀನಾದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ. ಗುರುವಾರ ನೂರಾರು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಶಾಲೆಗಳನ್ನು ಬಂದ ಮಾಡಲಾಗಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರವಾಸಿಗರ ಗುಂಪಿನೊಂದಿಗೆ ಬಂದಿದ್ದ ವೃದ್ಧ ದಂಪತಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಬೀಜಿಂಗ್‌ನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಪ್ರವಾಸಿಗರ ಸಾಮೂಹಿಕ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ.

 ಚೀನಾ; ಮಕ್ಕಳ ಕೆಟ್ಟ ವರ್ತನೆಗೆ ಪೋಷಕರಿಗೆ ಶಿಕ್ಷೆ! ಚೀನಾ; ಮಕ್ಕಳ ಕೆಟ್ಟ ವರ್ತನೆಗೆ ಪೋಷಕರಿಗೆ ಶಿಕ್ಷೆ!

ಬೇರೆ ದೇಶಗಳಿಗೆ ಹೋಗುವ ವಿಮಾನಗಳನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗದಂತೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಎಫ್‌ಪಿ ವರದಿಯಲ್ಲಿ ಹೇಳಿದೆ.

ಬೆಂಗಳೂರಿನಲ್ಲಿ ಕೊರೊನಾ ಆಂಟಿಬಾಡಿ ಕಾಕ್‍ಟೈಲ್ ಥೆರಪಿ ಯಶಸ್ವಿ ಬೆಂಗಳೂರಿನಲ್ಲಿ ಕೊರೊನಾ ಆಂಟಿಬಾಡಿ ಕಾಕ್‍ಟೈಲ್ ಥೆರಪಿ ಯಶಸ್ವಿ

ಪ್ರವಾಸಿಗರ ಜೊತೆ ಬಂದಿದ್ದ ವೃದ್ಧ ದಂಪತಿಗಳು ಹಲವಾರು ಪ್ರದೇಶಗಳಲ್ಲಿ ಸಂಚಾರ ನಡೆಸಿದ್ದಾರೆ. ಆದ್ದರಿಂದ ಸಾಮೂಹಿಕ ಪರೀಕ್ಷೆ ಮೂಲಕ ಕೋವಿಡ್ ಹಬ್ಬುವಿಕೆ ಕುರಿತು ನಿಗಾವಹಿಸಲು ತೀರ್ಮಾನಿಸಲಾಗಿದೆ. ಕ್ಸಿಯಾನ್ ಮತ್ತು ಲಾನ್ಸೂದಲ್ಲಿ ಶೇ 60ರಷ್ಟು ವಿಮಾನಗಳ ಹಾರಾಟವನ್ನು ಗುರುವಾರ ರದ್ದುಗೊಳಿಸಲಾಗಿದೆ.

ಕುಸಿದು ಬಿತ್ತು ಚೀನಾ ಜಿಡಿಪಿ! 'ಡ್ರ್ಯಾಗನ್’ ಆರ್ಥಿಕತೆ ಸೋಲಿಗೆ ಕಾರಣವೇನು?ಕುಸಿದು ಬಿತ್ತು ಚೀನಾ ಜಿಡಿಪಿ! 'ಡ್ರ್ಯಾಗನ್’ ಆರ್ಥಿಕತೆ ಸೋಲಿಗೆ ಕಾರಣವೇನು?

ಎರೆನ್ ಹೋಟ್ ನಗರದ ಒಳಗೆ ಮತ್ತು ಹೊರಗೆ ಜನರ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದು ಜನರಿಗೆ ಕರೆ ನೀಡಲಾಗಿದೆ. ಪ್ರವಾಸಿ ತಾಣ, ಮನೋರಂಜನಾ ಸ್ಥಳಗಳಿಗೆ ಜನರ ಭೇಟಿ ನಿಷೇಧಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

ಸತತ 5ನೇ ದಿನ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಚೀನಾದ ಉತ್ತರ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ವೃದ್ಧ ದಂಪತಿಗಳು ಕ್ಸಿಯಾನ್, ಗನ್ಸು ಪ್ರಾಂತ್ಯಕ್ಕೆ ಸಂಚಾರ ನಡೆಸುವ ಮೊದಲು ಶಾಂಘೈನಲ್ಲಿದ್ದರು.

ಚೀನಾದ ರಾಜಧಾನಿ ಬೀಜಿಂಗ್ ಸೇರಿದಂತೆ ಕನಿಷ್ಠ 5 ಪ್ರಾಂತ್ಯಗಳು ಮತ್ತು ಪ್ರದೇಶಗಳಲ್ಲಿ ಹೊಸದಾಗಿ ಹತ್ತಾರು ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕು ತಗುಲಿದ ವ್ಯಕ್ತಿಗಳ ನಿಕಟ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.

ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಸ್ಥಳೀಯ ಸರ್ಕಾರಗಳು ಸಾಮೂಹಿಕ ಪರೀಕ್ಷೆಗಳನ್ನು ನಡೆಸುವಂತೆ ಸೂಚನೆ ಕೊಡಲಾಗಿದೆ. ಬೇರೆ ಪ್ರದೇಶಗಳಿಗೆ ಸೋಂಕು ಹರಡುವಿಕೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಮುಖ ಕ್ರಮಗಳು

* ಲಾನ್ಸೂ ಸೇರಿದಂತೆ ಕೆಲವು ಪ್ರದೇಶಗಳು, ವಾಯುವ್ಯ ಚೀನಾದ ಕೆಲವು ನಗರಗಳಲ್ಲಿ ಅಗತ್ಯವಿದ್ದಲ್ಲಿ ಮಾತ್ರ ನಿವಾಸಿಗಳು ಹೊರಗೆ ಬರಬೇಕು ಎಂದು ಹೇಳಿದೆ. ನಗರ ಬಿಟ್ಟು ಹೋಗಬೇಕಾದರೆ ಕೋವಿಡ್ -19 ನೆಗೆಟಿವ್ ಪರೀಕ್ಷೆ ವರದಿಯನ್ನು ತೋರಿಸಬೇಕು.

* ಕ್ಸಿಯಾನ್, ಗನ್ಸು ಪ್ರಾಂತ್ಯದಲ್ಲಿ ಹೆಚ್ಚು ವಿಮಾನಗಳ ಹಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಯಾವಾಗ ಹಾರಾಟ ಆರಂಭಿಸಲಾಗುತ್ತದೆ ಎಂಬ ಮಾಹಿತಿ ನೀಡಿಲ್ಲ.

* ಸ್ಥಳೀಯ ಸರ್ಕಾರಗಳು ಎರೆನ್‌ಹೋಟ್ ಮತ್ತು ಮಂಗೋಲಿಯಾ ನಗರದ ಒಳಗೆ ಮತ್ತು ಹೊರಗೆ ಸಂಚಾರ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿವಾಸಿಗಳು ತಮ್ಮ ಮನೆಗಳನ್ನು ಬಿಟ್ಟು ಹೊರಬರಬಾರದು ಎಂದು ತಿಳಿಸಲಾಗಿದೆ.

* ಗುರುವಾರ ವಿವಿಧ ನಗರಗಳಲ್ಲಿ 13ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ.

ವಿಶ್ವದ ಹಲವು ರಾಷ್ಟ್ರಗಳು ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಸುತ್ತಿದ್ದವು. ಆದರೆ ಚೀನಾ ಗಡಿ ನಿರ್ಬಂಧ ಸೇರಿದಂತೆ ಲಾಕ್‌ಡೌನ್ ಕ್ರಮಗಳನ್ನು ಮುಂದುವರೆಸಿ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಿತ್ತು.

ಆದರೆ ಈಗ ಉತ್ತರ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಸತತ 5 ದಿನದಿಂದ ಸೋಂಕು ಕಾಣಿಸಿಕೊಂಡಿದ್ದು, ಬೇರೆ ಪ್ರದೇಶಗಳಿಗೆ ಸೋಂಕು ಹರಡುವಿಕೆ ತಡೆಯಲು ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಪ್ರವಾಸಿಗರಿಂದಲೇ ಸೋಂಕು ಹರಡಿದ್ದು, ಇದರಿಂದಾಗಿ ಮತ್ತಷ್ಟು ದಿನ ನಿರ್ಬಂಧ ಮುಂದುವರೆಸುವ ಸೂಚನೆ ಸಿಕ್ಕಿದೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಭಾರತಕ್ಕೆ ವಾಪಸ್ ಆಗಲು ಸಾಧ್ಯವಾಗದೇ ಬೀಜಿಂಗ್‌ನಲ್ಲಿ ಸಾವಿರಾರು ಭಾರತೀಯರು ಉಳಿದಿದ್ದಾರೆ. ಅವರಿಗೆ ಹೇರಿದ್ದ ವೀಸಾ ನಿರ್ಬಂಧ ಕ್ರಮವನ್ನು ಚೀನಾ ಸಮರ್ಥಿಸಿಕೊಂಡಿತ್ತು. ವಿದೇಶಗಳಲ್ಲಿರುವ ಚೀನಾದ ಜನರು ಸಹ ವಾಪಸ್ ಬರಲು ಈ ನಿಯಮ ಅನ್ವಯವಾಗಲಿದೆ ಎಂದು ಚೀನಾ ಸ್ಪಷ್ಟಪಡಿಸಿತ್ತು.

English summary
By the group of tourists new Covid-19 cases found in China. Hundreds of flights cancelled, schools closed and directed to conduct mass testing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X