ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೆಂಚ್ ಮರು ಚುನಾವಣೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರೋನ್ ಗೆಲುವು

|
Google Oneindia Kannada News

ನವದೆಹಲಿ, ಏಪ್ರಿಲ್, 25: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಭಾನುವಾರ ತಮ್ಮ ಬಲಪಂಥೀಯ ಪ್ರತಿಸ್ಪರ್ಧಿ ಮರೀನ್ ಲೆ ಪೆನ್ ಅವರನ್ನು ಆರಾಮದಾಯಕ ಅಂತರದಿಂದ ಸೋಲಿಸಿದರು ಎಂದು ಹೇಳಲಾಗುತ್ತಿದೆ. ಮತಗಳನ್ನು ಎಣಿಕೆ ಮಾಡಲಾಗುತ್ತಿದೆ ಮತ್ತು ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯ ಮೊದಲ ಫಲಿತಾಂಶಗಳನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದು ಎಎಫ್‌ಪಿ ನ್ಯೂಸ್ ವರದಿ ಮಾಡಿದೆ.

ಎಮ್ಯಾನುಯೆಲ್ ಮ್ಯಾಕ್ರೋನ್ ಶೇ. 57.6 ಮತ್ತು ಶೇ. 58.2 ಮತಗಳ ಅಂತರದಲ್ಲಿ ಮರು-ಚುನಾವಣೆಯನ್ನು ಗೆದ್ದಿದ್ದಾರೆ ಎಂಬ ಸೂಚನೆಗಳು ಸಿಗುತ್ತಿದ್ದು, ಬಲಪಂಥೀಯ ನಾಯಕ ಮರೀನ್ ಲೆ ಪೆನ್ ಅವರನ್ನು ಸೋಲಿಸಿದ್ದಾರೆ.

ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ

ಇದರ ಮಧ್ಯೆ ಮರೀನ್ ಲೆ ಪೆನ್ ಅವರು ತಮ್ಮ ಸೋಲಿನ ಭಾಷಣದಲ್ಲಿ ಫ್ರೆಂಚ್ ಅನ್ನು "ಎಂದಿಗೂ ತ್ಯಜಿಸುವುದಿಲ್ಲ" ಎಂದು ಹೇಳಿದರು. ಜೂನ್ ಶಾಸಕಾಂಗ ಚುನಾವಣೆಯಲ್ಲಿ ಮತದಾರರು ತಮ್ಮ ಪಕ್ಷವನ್ನು ಆಯ್ಕೆ ಮಾಡಲು ಕರೆ ನೀಡಿದರು.

French Re-Election: Macron Becoming First President to Win Re-election Since Jacques Chirac

ಎಮ್ಯಾನುಯೆಲ್ ಮ್ಯಾಕ್ರನ್ ಗೆಲುವಿನ ಹೊಸ್ತಿಲಿನಲ್ಲಿರುವುದ ಮಧ್ಯೆ ಪ್ರತಿಕ್ರಿಯೆ ನೀಡಿರುವ ಯುರೋಪಿಯನ್ ಕೌನ್ಸಿಲ್ನ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಯುರೋಪಿಯನ್ ಒಕ್ಕೂಟವು 'ಇನ್ನೂ ಐದು ವರ್ಷಗಳ ಕಾಲ ಫ್ರಾನ್ಸ್ ಅನ್ನು ನಂಬಬಹುದು' ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ಬ್ರೆಕ್ಸಿಟ್ ಮತ್ತು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ನಿರ್ಗಮನದ ನಂತರ ಅಧ್ಯಕ್ಷ ಸ್ಥಾನವು ಲೆ ಪೆನ್ ಚುಕ್ಕಾಣಿಯಾಗುತ್ತದೆ ಎಂಬ ಭೀತಿಯಿತ್ತು. ಆದರೆ ಅಧಿಕೃತ ಫಲಿತಾಂಶಗಳಿಂದ ದೃಢೀಕರಿಸುವ ಫಲಿತಾಂಶವು ಯುರೋಪಿನಲ್ಲಿ ಜನರಿಗೆ ಬಿಗ್ ರಿಲೀಫ್ ನೀಡಿದೆ.

2002 ರಲ್ಲಿ ಜಾಕ್ವೆಸ್ ಚಿರಾಕ್ ಅವರ ಹಿಂದಿನ ನಿಕೋಲಸ್ ಸರ್ಕೋಜಿ ಮತ್ತು ಫ್ರಾಂಕೋಯಿಸ್ ಹೊಲಾಂಡ್ ಅವರು ಕೇವಲ ಒಂದು ಅವಧಿಯ ನಂತರ ಅಧಿಕಾರವನ್ನು ತೊರೆದಿದ್ದರು. ಅವರ ನಂತರ ಮರುಚುನಾವಣೆಯಲ್ಲಿ ಗೆದ್ದ ಮೊದಲ ಫ್ರೆಂಚ್ ಅಧ್ಯಕ್ಷರಾಗಿ ಎಮ್ಯಾನುಯೆಲ್ ಮ್ಯಾಕ್ರನ್ ಹೊರ ಹೊಮ್ಮಿದ್ದಾರೆ.

English summary
French Re-Election: Emmanuel Macron Becoming First President to Win Re-election Since Jacques Chirac.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X