• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರರಿಂದ ಫ್ರಾನ್ಸ್ ಮೇಲೆ ರಾಸಾಯನಿಕ, ಜೈವಿಕ ಅಸ್ತ್ರ ಬಳಕೆ?

|

ಪ್ಯಾರಿಸ್, ನವೆಂಬರ್. 19: ಉಗ್ರಗಾಮಿಗಳು ದೇಶದ ಮೇಲೆ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳನ್ನು ಬಳಸಿ ದಾಳಿ ಮಾಡುವ ಸಾಧ್ಯತೆಯೂ ಇದೆ ಎಂದು ಫ್ರಾನ್ಸ್ ಪ್ರಧಾನಿ ಮ್ಯಾನಲ್ ವಾಲ್ಸ್ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಕಾನೂನು ತಜ್ಞರೊಂದಿಗೆ ಮಾತನಾಡುತ್ತ, ದೇಶವೂ ಇಂಥವುಗಳ ವಿರುದ್ಧ ಹೋರಾಟ ಮಾಡಲು ಸಿದ್ದರಿರಬೇಕು ಎಂದು ತಿಳಿಸಿದರು. ಯುರೋಪ್ ಒಕ್ಕೂಟ ವಿಮಾನದ ಮೂಲಕ ಆಗಮಿಸುವ ಎಲ್ಲ ಪ್ರಯಾಣಿಕರ ಮಾಹಿತಿ ಕಲೆ ಹಾಕುವುದನ್ನು ರೂಢಿ ಮಾಡಿಕೊಳ್ಳಬೇಕು. ಎಲ್ಲ ರಾಷ್ಟ್ರಗಳು ಸಂಯೋಜನೆಯಿಂದ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.[ಪ್ಯಾರಿಸಿನ ಶಾ೦ತ ಪರಿಸರದಲ್ಲಿ ಉಗ್ರವಾದದ ಬೆ೦ಕಿ: ಇದಕ್ಕೆ ಕೊನೆಯೆಂದು?]

ಕಳೆದ ವಾರ ಪ್ಯಾರಿಸ್ ನಲ್ಲಿ ಉಗ್ರರು ನಡೆಸಿದ ಬಾಂಬ್ ದಾಳಿಗೆ 130ಕ್ಕೂ ಅಧಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಇದಾದ ನಂತರ ಉಗ್ರವಾದ ದಮನಕ್ಕೆ ಫ್ರಾನ್ಸ್ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಂಡಿತ್ತು. ಅಲ್ಲದೇ ಉಗ್ರವಾದ ನಿರ್ನಾಮ ಮಾಡುವ ಎಚ್ಚರಿಕೆಯನ್ನು ರವಾನಿಸಿತ್ತು.[ಪ್ಯಾರಿಸ್‌ ಉಗ್ರರ ದಾಳಿ ಹಿಂದಿರುವವರು ಯಾರು?]

ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರ ನಿರ್ದೇಶನದಂತೆ ಸಿರಿಯಾದ ಐಎಸ್‌ಐಎಸ್ ಉಗ್ರರ ನೆಲೆಗಳ ಮೇಲೆ, ವಿಶೇಷವಾಗಿ ಉಗ್ರರ ಪ್ರಾಬಲ್ಯವಿರುವ ರಖ್ಖಾ ಮತ್ತಿತರ ನಗರಗಳ ಮೇಲೆ ಫ್ರಾನ್ಸ್ ಯುದ್ಧವಿಮಾನಗಳು ದಾಳಿ ನಡೆಸಿ ಉಗ್ರರ ನೆಲೆಗಳನ್ನು ನಾಶಮಾಡಿದ್ದವು. ಆರಂಭದಲ್ಲೇ ಅಮೆರಿಕ ಮಿತ್ರ ಪಡೆಗಳ ಬೆಂಬಲದೊಂದಿಗೆ ದಾಳಿ ಆರಂಭಿಸಿದ ಫ್ರಾನ್ಸ್ ಸೇನಾಪಡೆ ಸುಮಾರು 12 ರಿಂದ 15 ಜೆಟ್ ಯುದ್ಧ ವಿಮಾನಗಳ ಮೂಲಕ ನೂರಾರು ಬಾಂಬ್‌ಗಳ ದಾಳಿ ಮಾಡಿ ತಕ್ಕ ಎಚ್ಚರಿಕೆ ನೀಡಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
France prime Minister Manuel Valls warned Thursday of the danger of an attack in France using "chemical or biological weapons", in a speech to lawmakers debating the extension of a state of emergency. "We must not rule anything out," Valls said. "There is also the risk from chemical or biological weapons," he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more