ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಮ್ಯಾಕ್ರೋನ್ ಭೇಟಿಗೆ ಮುನ್ನವೇ ಭಾರತೀಯ ಸಬ್‌ಮರೀನ್ ಪ್ರಾಜೆಕ್ಟ್‌ನಿಂದ ಫ್ರಾನ್ಸ್ ಔಟ್

|
Google Oneindia Kannada News

ಡೆನ್ಮಾರ್ಕ್‌, ಮೇ 3: ಯೂರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ದೇಶಕ್ಕೂ ಭೇಟಿ ಕೊಡಲಿದ್ಧಾರೆ. ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಸಬ್‌ಮರೀನ್ ನಿರ್ಮಾಣ ಯೋಜನೆ (P-75I) ಯೊಂದರಿಂದ ಫ್ರಾನ್ಸ್ ಹಿಂದೆ ಸರಿದಿದೆ. ಆರು ಸಬ್‌ಮರೀನ್‌ಗಳನ್ನ ನಿರ್ಮಿಸುವ P-75 India ಪ್ರಾಜೆಕ್ಟ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಫ್ರಾನ್ಸ್ ದೇಶದ ನೇವಲ್ ಗ್ರೂಪ್ (Naval Group) ಸಂಸ್ಥೆ ಹೇಳಿದೆ. ಯೋಜನೆಯ ಆರ್‌ಎಫ್‌ಪಿ (Request for Proposal) ಷರತ್ತುಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯೋಜನೆಗೆ ಬಿಡ್ ಸಲ್ಲಿಸುವುದಿಲ್ಲ ಎಂದು ಅ ಸಂಸ್ಥೆ ಸ್ಪಷ್ಟಪಡಿಸಿದೆ.

ಅಂದಾಜು 43 ಸಾವಿರ ಕೋಟಿ ರೂ ಮೊತ್ತದ ಈ ಪ್ರಾಜೆಕ್ಟ್‌ನಲ್ಲಿ ಫ್ರಾನ್ಸ್‌ನ ನೇವಲ್ ಗ್ರೂಪ್ ಸೇರಿ ಐದು ವಿವಿಧ ದೇಶಗಳ ಕಂಪನಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಯೋಜನೆಯಲ್ಲಿ ಒಂದು ಅಂತರರಾಷ್ಟ್ರೀಯ ಮೂಲ ಉಪಕರಣ ತಯಾರಕ (ಒಇಎಂ- Original Equipment Manufacturer) ಕಂಪನಿ ಹಾಗೂ ಒಂದು ಭಾರತೀಯ ಕಂಪನಿ ಜಂಟಿಯಾಗಿ ಸಬ್‌ಮರೀನ್‌ಗಳನ್ನ ತಯಾರಿಸುವುದು ಈ ಯೋಜನೆಯಾಗಿದೆ. ಒಇಎಂ ತನ್ನ ಭಾರತೀಯ ಪಾರ್ಟ್ನರ್ ಕಂಪನಿಗೆ ತಂತ್ರಜ್ಞಾನದ ವಿವರವನ್ನು ಹಂಚಿಕೊಳ್ಳಬೇಕು ಎಂಬುದು ಮತ್ತೊಂದು ಷರತ್ತಾಗಿದೆ.

ರಷ್ಯಾ-ಉಕ್ರೇನ್ ಯುದ್ಧದ ಕುರಿತು ಜರ್ಮನಿಯಲ್ಲಿ ಪ್ರಧಾನಿ ಮೋದಿ ಸಂದೇಶರಷ್ಯಾ-ಉಕ್ರೇನ್ ಯುದ್ಧದ ಕುರಿತು ಜರ್ಮನಿಯಲ್ಲಿ ಪ್ರಧಾನಿ ಮೋದಿ ಸಂದೇಶ

5 ಓಇಎಂಗಳು ಯಾವುವು?; ಫ್ರಾನ್ಸ್ ದೇಶದ ನೇವಲ್ ಗ್ರೂಪ್, ಜರ್ಮನಿಯ ತೈಸೆನ್‌ಕ್ರುಪ್ ಮರೈನ್ ಸಿಸ್ಟಮ್ಸ್ (ThyssenKrupp Marine Systems), ರಷ್ಯಾದ ಜೆಎಸ್‌ಸಿ ರೋ (JSC ROE), ಸೌತ್ ಕೊರಿಯಾದ ಡಾಯ್‌ವೂ ಶಿಪ್‌ಬ್ಯುಲ್ಡಿಂಗ್ ಅಂಡ್ ಮರೈನ್ ಎಂಜಿನಿಯರಿಂಗ್ (Daewoo Shipbuilding & Marine Engineering Co Ltd) ಮತ್ತು ಫ್ರಾನ್ಸ್ ದೇಶದ ನೇವಂಟಿಯಾ (Navantia) ಕಂಪನಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗಿತ್ತು.

French company opt out of Indian submarine project

ಇನ್ನು ಭಾರತೀಯ ಪಾರ್ಟ್ನರ್ ಆಗಲು ಶಾರ್ಟ್‌ಲಿಸ್ಟ್ ಆದ ಎರಡು ಕಂಪನಿಗಳೆಂದರೆ ಮಜಗಾನ್ ಡಾಕ್ ಶಿಪ್‌ಬ್ಯುಲ್ಡರ್ಸ್ ಲಿ (MDL- Mazagon Dock Shipbuilders Limited) ಮತ್ತು ಲಾರ್ಸನ್ ಅಂಡ್ ಟೌಬ್ರೊ (L & T). ಈ ಐದು ಓಇಎಂಗಳ ಪೈಕಿ ಒಂದಕ್ಕೆ ಮಾತ್ರ ಯೋಜನೆಗೆ ಅವಕಾಶ ಕೊಡಲಾಗುತ್ತಗದೆ. ಆದರೆ, ಈ ಓಇಎಂ ಎರಡು ಭಾರತೀಯ ಕಂಪನಿಗಳ ಪೈಕಿ ಒಂದರ ಜೊತೆ ಪಾರ್ಟ್ನರ್‌ಶಿಪ್ ಆಗಿ ಕೆಲಸ ಮಾಡಬೇಕಾಗುತ್ತದೆ.

2 ಲಕ್ಷ ಮಕ್ಕಳು ಸೇರಿದಂತೆ 11 ಲಕ್ಷ ಉಕ್ರೇನಿಯನ್ನರು ರಷ್ಯಾಕ್ಕೆ ಗಡಿಪಾರು 2 ಲಕ್ಷ ಮಕ್ಕಳು ಸೇರಿದಂತೆ 11 ಲಕ್ಷ ಉಕ್ರೇನಿಯನ್ನರು ರಷ್ಯಾಕ್ಕೆ ಗಡಿಪಾರು

ಇತರ ಓಇಎಂಗಳಿಂದಲೂ ಹಿಂದೇಟು?; ಪಿ-75I ಪ್ರಾಜೆಕ್ಟ್‌ಗೆ ಶಾರ್ಟ್‌ಲಿಸ್ಟ್ ಆದ ಐದು ಒಇಎಂಗಳ ಪೈಕಿ ಫ್ರಾನ್ಸ್ ದೇಶದ ನೇವಲ್ ಗ್ರೂಪ್ ಹೊರಬಿದ್ದಿದೆ. ಆದರೆ, ರಷ್ಯಾ ಮತ್ತು ಸ್ಪೇನ್ ದೇಶದ ಕಂಪನಿಗಳೂ ಕೂಡ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ನಿರಾಸಕ್ತಿ ಹೊಂದಿವೆ. ಅಧಿಕೃತವಾಗಿ ಅವರು ತಮ್ಮ ನಿಲುವನ್ನು ಪ್ರಕಟಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಭಾರತೀಯ ನೌಕಾಪಡೆಯ ಈ ಮಹತ್ವಾಕಾಂಕ್ಷಿ ಯೋಜನೆ ಆರಂಭಕ್ಕೂ ಮುನ್ನವೇ ಮಗುಚಿಬೀಳುವ ಅಪಾಯದಲ್ಲಿದೆ.

ಆರ್‌ಎಫ್‌ಪಿ ಷರತ್ತುಗಳೇನು?: ಸಬ್‌ಮರೀನ್ ನಿರ್ಮಾಣಕ್ಕೆ ಬಳಲಾಗುವ ಎಐಪಿ ಫುಯೆಲ್ ಸೆಲ್ (AIP fuel cell) ಸಾಗರ ಪ್ರಯೋಗದಲ್ಲಿ ಸಾಮರ್ಥ್ಯ ದೃಢಪಟ್ಟಿರಬೇಕು (Sea-proven) ಎಂಬುದು ಒಂದು ಷರತ್ತು. ಹಾಗೆಯೇ, ಭಾರತೀಯ ಪಾರ್ಟ್ನರ್ ಕಂಪನಿಗೆ ತಂತ್ರಜ್ಞಾನದ ಮಾಹಿತಿ ಹಂಚಿಕೊಳ್ಳಬೇಕು ಎಂಬುದು ಇನ್ನೊಂದು ಪ್ರಮುಖ ಷರುತ್ತು. ಈ ಎರಡನೇ ಷರುತ್ತು ಒಇಎಂಗಳ ಆಸಕ್ತಿ ಕುಂದಿಸಿವೆ ಎನ್ನಲಾಗಿದೆ.

Recommended Video

ಡೆಲ್ಲಿ ತಂಡವನ್ನು ಸೋಲಿಸಿ ಸಂಭ್ರಮಿಸುತ್ತಿರೋ ಲಕ್ನೋ ಟೀಂ ಪಾರ್ಟಿ ವಿಡಿಯೋ ವೈರಲ್ | Oneindia Kannada

ಫ್ರಾನ್ಸ್ ದೇಶದ ನೇವಲ್ ಗ್ರೂಪ್ ಈಗಾಗಲೇ ಭಾರತಕ್ಕೆ ಆರು ಕಲ್ವರಿ ಕ್ಲಾಸ್ (Scorpene class) ಸಬ್‌ಮರೀನ್‌ಗಳನ್ನ ತಯಾರಿಸಿಕೊಟ್ಟಿದೆ. ಭಾರತದ ಮಜಗಾನ್ ಡಾಕ್‌ಯಾರ್ಡ್ ಶಿಪ್‌ಬ್ಯುಲ್ಡಿಂಗ್ ಸಂಸ್ಥೆ ಜೊತೆ ಪಾರ್ಟ್ನರ್‌ಶಿಪ್‌ನಲ್ಲಿ ಸಬ್‌ಮರೀನ್ ನಿರ್ಮಿಸಿದೆ. ಈಗಾಗಲೇ ಈ ಕಲ್ವರಿ ಕ್ಲಾಸ್‌ನ ನಾಲ್ಕು ಸಬ್‌ಮರೀನ್‌ಗಳು ನೌಕಾಪಡೆಗೆ ನಿಯೋಜನೆಗೊಂಡಿವೆ. ಮುಂದಿನ ವರ್ಷ ಆರನೇ ಸಬ್‌ಮರೀನ್ ಡೆಲಿವರಿ ಆಗುವ ನಿರೀಕ್ಷೆ ಇದೆ.

(ಒನ್ಇಂಡಿಯಾ ಸುದ್ದಿ)

English summary
Ahead of Prime Minister Narendra Modi’s scheduled visit to France, French defence major Naval Group has announced that it is unable to participate in the P-75 India project under which six conventional submarines are to be built in India for the Indian Navy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X