• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಲಿಯಲ್ಲಿ ಫ್ರೆಂಚ್ ಸೇನೆಯಿಂದ ವಾಯು ದಾಳಿ:50 ಉಗ್ರರ ಹತ್ಯೆ

|

ಬಮಾಕೊ, ನವೆಂಬರ್ 03: ಮಾಲಿಯಲ್ಲಿ ಫ್ರೆಂಚ್ ಸೇನೆ ನಡೆಸಿದ ದಾಳಿಯಲ್ಲಿ 50 ಉಗ್ರರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಕ್ಟೋಬರ್ 30 ರಂದು ಬಾರ್ಖೇನ್ ಪಡೆ ಈ ಕಾರ್ಯಾಚರಣೆ ನಡೆಸಿದ್ದು, 50ಕ್ಕೂ ಹೆಚ್ಚು ಜಿಹಾದಿಗಳನ್ನು ಹತ್ಯೆ ಮಾಡಿ, ಅವರ ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾರ್ಲಿ ಟ್ವೀಟ್ ಮಾಡಿದ್ದು, ವಿದೇಶಿ ನಿಯೋಜಿತ ಫ್ರೆಂಚ್ ಪಡೆಗಳ ಸೇವೆಗಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಪೂರ್ವ ಲಡಾಖ್: ಹಿಮಪಾತದ ನಡುವೆಯೂ ರೊಟೇಷನ್ ಪದ್ಧತಿಯಲ್ಲಿ ಸೈನಿಕರ ಪಹರೆ

ಮಾಲಿಯಲ್ಲಿ ಬಾರ್ಖೇನ್ ವಿಶೇಷ ಪಡೆ ನಡೆಸಿದ ವಾಯುದಾಳಿಯಲ್ಲಿ 50 ಉಗ್ರರು ಹತ್ಯೆಯಾಗಿರುವುದಾಗಿ ಫ್ರೆಂಚ್ ರಕ್ಷಣಾ ಸಚಿವರಾದ ಫ್ಲಾರೆನ್ಸ್ ಪಾರ್ಲಿ ಹೇಳಿದ್ದಾರೆ ಎಂದು ಸ್ಪೂಟ್ನಿಕ್ ವರದಿ ಮಾಡಿದೆ.

ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಚುನಾವಣೆಗಳನ್ನು ಆಯೋಜಿಸಲು ಮಾಲಿಯನ್ ಮಧ್ಯಂತರ ಸರ್ಕಾರ ಬದ್ಧವಾಗಿದೆ ಎಂದು ಫ್ರೆಂಚ್ ರಕ್ಷಣಾ ಸಚಿವರು ಪ್ರತ್ಯೇಕ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇದು ರಷ್ಯಾದಲ್ಲಿ ನಿಷೇಧಿಸಲ್ಪಟ್ಟಿರುವ ಅಲ್ ಖೈದಾದೊಂದಿಗೆ ಸಂಯೋಜಿತವಾದ ಗುಂಪೊಂದಕ್ಕೆ ಮಹತ್ವದ ಹೊಡೆತದ ಕಾರ್ಯಾಚರಣೆಯಾಗಿದೆ. ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಮಾಲಿಯನ್ ಗಣ್ಯರಿಗೆ ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ.

English summary
The French government said Monday its forces had killed more than 50 jihadists aligned to Al-Qaeda in air strikes in central Mali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X