ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ ಆರೋಪ: ಭಾರತೀಯ ಮೂಲದ ವ್ಯಕ್ತಿ ಅಮೇರಿಕಾದಲ್ಲಿ ಬಂಧನ

|
Google Oneindia Kannada News

ವಾಷಿಂಗ್ಟನ್ ಜೂನ್ 1: 45 ಮಿಲಿಯನ್ ಡಾಲರ್ ಹೂಡಿಕೆ ವಂಚನೆ ಆರೋಪದಡಿ ಭಾರತೀಯ ಮೂಲದ ವ್ಯಕ್ತಿಯನ್ನು ಅಮೇರಿಕಾದಲ್ಲಿ ಬಂಧಿಸಿರುವುದು ಬೆಳಕಿಗೆ ಬಂದಿದೆ. 10,000 ಕ್ಕೂ ಹೆಚ್ಚು ಸಂತ್ರಸ್ತರಿಗೆ 45 ಮಿಲಿಯನ್ ಡಾಲರ್ ವಂಚಿಸಿದ ಆರೋಪದ ಮೇಲೆ 50 ವರ್ಷದ ಭಾರತೀಯ ಮೂಲದ ಟೆಕ್ ಉದ್ಯಮಿಯೊಬ್ಬರನ್ನು ಯುಎಸ್‌ನಲ್ಲಿ ಬಂಧಿಸಲಾಗಿದೆ. ಮಾತ್ರವಲ್ಲದೆ ಈತ ಹಲವಾರು ಐಷಾರಾಮಿ ಕಾರುಗಳು ಮತ್ತು ರಿಯಲ್ ಎಸ್ಟೇಟ್ ಅನ್ನು ವಂಚಿಸಿ ಹೂಡಿಕೆ ಮಾಡಿದ್ದ ಎನ್ನಲಾಗುತ್ತಿದೆ.

ನೆವಾಡಾದ ಲಾಸ್ ವೇಗಾಸ್‌ನ ನೀಲ್ ಚಂದ್ರನ್ ಅವರನ್ನು ಲಾಸ್ ಏಂಜಲೀಸ್‌ನಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ದೋಷಾರೋಪಣೆಯ ಪ್ರಕಾರ, "ViRSE" ಬ್ಯಾನರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಂದ್ರನ್ ಅವರ ಹೆಚ್ಚಿನ ಕಂಪನಿಗಳು ಹೆಚ್ಚಿನ ಆದಾಯವನ್ನು ನೀಡುವುದಾಗಿ ಸುಳ್ಳು ಭರವಸೆ ನೀಡುವ ಮೂಲಕ ಹೂಡಿಕೆದಾರರನ್ನು ವಂಚಿಸಿವೆ. ಚಂದ್ರನ್ ಗೆ ಸೇರಿವೆ ಎನ್ನಲಾದ Free Vi Lab, Studio Vi Inc., ViDelivery Inc, ViMarket Inc, ಮತ್ತು Skalex USA Inc ಕಂಪನಿಗಳು ಆರೋಪಗಳನ್ನು ಎದುರಿಸುತ್ತಿವೆ.

Breaking; ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ದಾಳಿ Breaking; ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ದಾಳಿ

ಇದಕ್ಕೆ ಚಂದ್ರನ್ ಪರ ವಕೀಲರು ಇತರ ವ್ಯಕ್ತಿಗಳು ಹೂಡಿಕೆದಾರರಿಗೆ ಸುಳ್ಳು ಮತ್ತು ತಪ್ಪು ದಾರಿಗೆಳೆದಿರುವುದು ಕಾರಣವೆಂದು ಆರೋಪಿಸಿದ್ದಾರೆ. ಹೀಗಾಗಿ ಚಂದ್ರನ್ ಪರ ವಕೀಲರ ಪ್ರಕಾರ ಚಂದ್ರನ್ ಆರೋಪ ಮುಕ್ತರಾಗಿದ್ದಾರೆ.

Fraud accused: Indian-origin man arrested in US

ಆದರೆ ದೋಷಾರೋಪಣೆಯ ಪ್ರಕಾರ ಚಂದ್ರನ್ ವೈಯಕ್ತಿಕ ಲಾಭಕ್ಕಾಗಿ ವಂಚಿದ್ದಾರೆ ಎನ್ನಲಾಗಿದೆ. ಈ ಅವ್ಯವಹಾರದಲ್ಲಿ ಯಾವುದೇ ಕೋಟ್ಯಾತಿಪತಿಗಳು ಭಾಗಿಯಾಗಿಲ್ಲ ಎನ್ನಲಾಗುತ್ತಿದ್ದು. ಹೀಗಾಗಿ ನೇರವಾಗಿ ಚಂದ್ರನ್ ಮೇಲೆಯೇ ಆರೋಪ ಹೋರಿಸಲಾಗಿದೆ. ಚಂದ್ರನ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಆಸ್ತಿ ಮೇಲಿನ ಅವ್ಯವಹಾರ ವಂಚನೆ ಪ್ರಮುಖವಾಗಿದೆ. ಇದು ಸಾಬೀತಾದರೆ ಚಂದ್ರನ್ ಪ್ರತಿ ವೈರ್ ವಂಚನೆಗಳಿಗೆ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸುತ್ತಾರೆ.

ವಂಚನೆಯ ಸಾಬೀತಾದರೆ ಚಂದ್ರನ್ ಆಸ್ತಿ ಮೂಲಗಳಾದ ಬ್ಯಾಂಕ್ ಖಾತೆಗಳು, ರಿಯಲ್ ಎಸ್ಟೇಟ್ ಮತ್ತು ಐಷಾರಾಮಿ ವಾಹನಗಳು, 39 ಟೆಸ್ಲಾ ವಾಹನಗಳು ಸೇರಿದಂತೆ 100 ವಿವಿಧ ಸ್ವತ್ತುಗಳು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಕ್ರಿಮಿನಲ್ ಪ್ರಕರಣ ತನಿಖಾ ಭಾಗವಾಗಿ FBI ಹೆಚ್ಚಿನ ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತಿದೆ.

Recommended Video

ISRO ದಿಂದ 3 ಉಪಗ್ರಹ ಯಶಸ್ವಿ ಉಡಾವಣೆ? ಇದರ ಪ್ರಯೋಜನ ಏನು ಗೊತ್ತಾ? | *India | OneIndia Kannada

English summary
It has come to light that a man of Indian origin has been arrested in the US on charges of 45 million dollar investment fraud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X