ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜೈಷ್' ಉಗ್ರ ಮಸೂದ್ ಅಜರ್ ಆಸ್ತಿ ಮುಟ್ಟುಗೋಲಿಗೆ ಫ್ರಾನ್ಸ್ ನಿರ್ಧಾರ

|
Google Oneindia Kannada News

ಪ್ಯಾರಿಸ್, ಮಾರ್ಚ್ 15 : ಜಾಗತಿಕ ಉಗ್ರ, ಪಾಕಿಸ್ತಾನದಲ್ಲಿ ಬೀಡುಬಿಟ್ಟಿರುವ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ್ ಅಜರ್ ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಫ್ರಾನ್ಸ್ ಸರಕಾರ ಹೇಳಿದೆ.

ಫ್ರಾನ್ಸ್ ನ ಆಂತರಿಕ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯ ಜಂಟಿಯಾಗಿ ನೀಡಿರುವ ಹೇಳಿಕೆಯಲ್ಲಿ, ಭಯೋತ್ಪಾದನೆಯಲ್ಲಿ ನಿರತರಾಗಿರುವ ಶಂಕಿತ ಉಗ್ರರ ಯುರೋಪಿಯನ್ ಯೂನಿಯನ್ ಪಟ್ಟಿಯಲ್ಲಿ ಮಸೂದ್ ಅಜರ್ ಹೆಸರನ್ನು ಸೇರಿಸಲಾಗುವುದು ಎಂದಿವೆ.

ಅಜರ್ 'ಜಾಗತಿಕ ಉಗ್ರ': ಭಾರತಕ್ಕೆ ನಮ್ಮ ಬೆಂಬಲ ಎಂದ ಅಮೆರಿಕ ಅಜರ್ 'ಜಾಗತಿಕ ಉಗ್ರ': ಭಾರತಕ್ಕೆ ನಮ್ಮ ಬೆಂಬಲ ಎಂದ ಅಮೆರಿಕ

ಜೈಷ್-ಎ-ಮೊಹಮ್ಮದ್ ಸೇರಿದಂತೆ ಭಾರತದ ಮೇಲೆ ಆಕ್ರಮಣ ಮಾಡುತ್ತಿರುವ ಉಗ್ರ ಸಂಘಟನೆಯ ವಿರುದ್ಧ ವಿಶ್ವದ ಹಲವಾರು ರಾಷ್ಟ್ರಗಳು ಸಿಡಿದೆದ್ದಿವೆ. ಫೆಬ್ರವರಿ 14ರಂದು ಜೈಷ್-ಎ-ಮೊಹಮ್ಮದ್ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಪೊಲೀಸ್ ಮೀಸಲು ಪಡೆಯ 40ಕ್ಕೂ ಹೆಚ್ಚು ಜವಾನರು ಹುತಾತ್ಮರಾಗಿದ್ದರು.

France to freeze assets of Jaish terrorist Masood Azhar

ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಪ್ರಸ್ತಾವನೆಯನ್ನು ಚೀನಾ ವಿರೋಧಿಸಿದ ಮರುದಿನವೇ ಫ್ರಾನ್ಸ್, ಪಾಕಿಸ್ತಾನದಲ್ಲಿ ಅವಿತುಕೊಂಡಿರುವ ಉಗ್ರ ಮಸೂದ್ ನ ಆಸ್ತಿಯನ್ನು ಮುಟ್ಟುಗೋಲು ಹಾಕಲು ನಿರ್ಧರಿಸಿದೆ. ಇದು ಒಂದು ರೀತಿ ಚೀನಾಕ್ಕೆ ಕಪಾಳಮೋಕ್ಷ ಮಾಡಿದಂತಾಗಿದೆ.

ಪುಲ್ವಾಮಾ ದಾಳಿ ಮಾತ್ರವಲ್ಲ, 2001ರ ಡಿಸೆಂಬರ್ 13ರಂದು ನಡೆದ ಸಂಸತ್ ದಾಳಿ ಸೇರಿದಂತೆ, ಕಳೆದೆರಡು ದಶಕಗಳಲ್ಲಿ ಮಸೂದ್ ಅಜರ್ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ಭಾರತದಲ್ಲಿ ಎಸಗಿದ್ದಾನೆ. ಆತನನ್ನು ಭಾರತಕ್ಕೆ ಒಪ್ಪಿಸಬೇಕೆಂದು ಪಾಕಿಸ್ತಾನಕ್ಕೆ ಆಗ್ರಹಿಸುತ್ತಲೇ ಇದೆ. ಆದರೆ, ತಲೆಕೆಡಿಸಿಕೊಳ್ಳದ ಪಾಕಿಸ್ತಾನ ಆ ಸಂಘಟನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೂಡ ಹಿಂಜರಿಯುತ್ತಿದೆ.

ಅಜರ್ ಬೆನ್ನಿಗೆ ನಿಂತ ಚೀನಾ, ಟ್ವಿಟ್ಟರ್ ನಲ್ಲಿ 'ಚೀನಾ ಉತ್ಪನ್ನಗಳನ್ನು ನಿಷೇಧಿಸಿ' ಟ್ರೆಂಡ್ಅಜರ್ ಬೆನ್ನಿಗೆ ನಿಂತ ಚೀನಾ, ಟ್ವಿಟ್ಟರ್ ನಲ್ಲಿ 'ಚೀನಾ ಉತ್ಪನ್ನಗಳನ್ನು ನಿಷೇಧಿಸಿ' ಟ್ರೆಂಡ್

2016ರ ಜನವರಿಯಲ್ಲಿ ಪಠಾಣ್ ಕೋಟ್ ಮೇಲೆ ದಾಳಿ ನಡೆಸಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆ ಏಳು ಭಾರತೀಯ ಯೋಧರನ್ನು ಹತ್ಯೆಗೈದಿತ್ತು. ನಂತರ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದ ಜೈಷ್ ಉಗ್ರರು 17 ಭಾರತೀಯ ಯೋಧರನ್ನು ಕೊಂದು ಹಾಕಿತ್ತು. ಇನ್ನು ಭಾರತದೊಳಗೆ ನುಸುಳಿಬಂದು ನಡೆಸುತ್ತಿರುವ ಹಿಂಸಾತ್ಮಕ ಕೃತ್ಯಗಳಿಗೆ ಲೆಕ್ಕವೇ ಇಲ್ಲ.

English summary
France has decided to freeze assets of Jaish-e-Mohammed terrorist Masood Azhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X