ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150 ವರ್ಷದ ಬಳಿಕ ಹೋರಾಟಗಾರರ ತಲೆಬುರುಡೆಗಳನ್ನು ಸಮಾಧಿ ಮಾಡಿದ ಅಲ್ಜೀರಿಯಾ

|
Google Oneindia Kannada News

ದೆಹಲಿ, ಜುಲೈ 6: ಸುಮಾರು 150 ವರ್ಷಗಳ ಹಿಂದೆ ಫ್ರೆಂಚ್ ವಸಾಹತು ಶಾಹಿಗಳ ವಿರುದ್ಧ ಹೋರಾಡಿ ಮಡಿದ ಅಲ್ಜೀರಿಯಾ ಹೋರಾಟಗಾರರ ಅವಶೇಷನಗಳನ್ನು ಅಂತಿಮವಾಗಿ ಭಾನುವಾರ ಸಮಾಧಿ ಮಾಡಲಾಗಿದೆ.

ಅಲ್ಜೀರಿಯಾದ 58ನೇ ಸ್ವಾತಂತ್ರ್ಯ ದಿನಾಚರಣೆಯ ಫ್ರೆಂಚ್ ಪ್ರಯುಕ್ತ ವಸಾಹತು ಶಾಹಿಗಳ ವಿರುದ್ಧ ಹೋರಾಡಿ ಸಾವನ್ನಪ್ಪಿದ್ದ 24 ಜನ ಅಲ್ಜೀರಿಯಾ ಯೋಧರ ತಲೆಬುರುಡೆಗಳನ್ನು ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

ಭಾನುವಾರ ಎಲ್ ಅಲಿಯಾ ಸ್ಮಶಾನದಲ್ಲಿ ನಡೆದ ಸಮಾರಂಭದಲ್ಲಿ 24 ಹೋರಾಟಗಾರರ ಅವಶೇಷನಗಳಿಗೆ ರಾಷ್ಟ್ರೀಯ ಧ್ವಜ ಹೊದಿಸಿ ದೇಶದ ಅತ್ಯುನ್ನತ ಗೌರವ ಸಮರ್ಪಿಸಲಾಯಿತು. ಈ ವೇಳೆ ರಿಪಬ್ಲಿಕನ್ ಗಾರ್ಡ್‌ನ ಗಣ್ಯ ಘಟಕವೂ ಶಸ್ತ್ರಾಸ್ತ್ರಗಳೊಂದಿಗೆ ಗೌರವ ಸಲ್ಲಿಸಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

France Returned The Skulls Of Algerians Who Fought Against French Colonialists

ಸುಮಾರು 150 ವರ್ಷದ ಹಿಂದೆ ಫ್ರೆಂಚ್‌ ವಸಾಹತು ಶಾಹಿಗಳ ವಿರುದ್ಧ ಹೋರಾಡಿದ ಅಲ್ಜೀರಿಯಾದ 24 ಹೋರಾಟಗಾರರನ ತೆಲೆಗಳನ್ನು ತುಂಡರಿಸಿ ಯುದ್ಧ ಟ್ರೋಫಿಗಳಾಗಿ ವಶಕ್ಕೆ ಪಡೆದುಕೊಂಡು ಮ್ಯೂಸಿಯಂನಲ್ಲಿ ಇಟ್ಟಿದ್ದರು. ಅಲ್ಜೀರಿಯಾ ಹೋರಾಟಗಾರರ ತಲೆಬುರುಡೆಗಳನ್ನು ಸ್ವದೇಶಕ್ಕೆ ವಾಪಸ್ ತರಬೇಕು ಎಂದು ಹಲವು ಇತಿಹಾಸಕಾರರ ಬಹಳ ವರ್ಷಗಳಿಂದ ಪ್ರಯತ್ನ ಪಟ್ಟಿದ್ದರು.

ಅಂತಿಮವಾಗಿ ಅಲ್ಜೀರಿಯಾ ದೇಶಕ್ಕೆ ಆ ಅವಶೇಷಗಳನ್ನು ಹಸ್ತಾಂತರಿಸಲಾಗಿದೆ. ಭಾನುವಾರದ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಅಲ್ಜೀರಿಯಾ ಅಧ್ಯಕ್ಷ ಅಬ್ದೆಲ್ಮದ್ಜಿದ್ ಟೆಬ್ಬೌನ್ 'ಪ್ಯಾರಿಸ್ ತನ್ನ ವಸಾಹತುಶಾಹಿ ಭೂತಕಾಲಕ್ಕೆ ಕ್ಷಮೆಯಾಚಿಸಬೇಕು' ಎಂದು ಹೇಳಿದರು.

France Returned The Skulls Of Algerians Who Fought Against French Colonialists

ಅಂದ್ಹಾಗೆ, 1830 ರಲ್ಲಿ ಫ್ರೆಂಚ್ ವಸಾಹತುಶಾಹಿ ಪಡೆಗಳು ಅಲ್ಜೀರಿಯಾವನ್ನು ಆಕ್ರಮಿಸಿಕೊಂಡಿತ್ತು. ನಂತರ 1849ರ ದಂಗೆಯಲ್ಲಿ ಪಾಲ್ಗೊಂಡಿದ್ದ 24 ಜನ ಹೋರಾಟಗಾರರನ್ನು ಕೊಂದು ಅವರ ತಲೆಬುರುಡೆಗಳನ್ನು ಉಳಿಸಿಕೊಂಡಿದ್ದರು. ಈ ಕ್ರೂರ ಯುದ್ಧದ ನಂತರ ಜುಲೈ 5, 1962 ರಂದು ಅಲ್ಜೀರಿಯಾ ಔಪಚಾರಿಕವಾಗಿ ಸ್ವಾತಂತ್ರ್ಯ ಘೋಷಿಸಿತು.

English summary
France returned the skulls of Algerians who fought against French colonialists over 170 years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X