ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್‌ ರಾಣಿ ಎಲಿಜಬೆತ್ II ಸೇರಿ ವಿಶ್ವ ಸೆಲೆಬ್ರಿಟಿಗಳ ಸಾವಿನ ಸುದ್ದಿಗೆ ಕ್ಷಮೆಯಾಚಿಸಿದ ಫ್ರಾನ್ಸ್ ರೇಡಿಯೊ

|
Google Oneindia Kannada News

ಫ್ರೆಂಚ್ ರೇಡಿಯೊ ಕೇಂದ್ರವು ಅನೇಕ ಸೆಲೆಬ್ರಿಟಿಗಳು ಮತ್ತು ವಿಶ್ವ ನಾಯಕರು ಜೀವಂತವಾಗಿದ್ದರೂ ಅವರ ಸಾವಿನ ಪ್ರಕಟಣೆಯನ್ನು ಹೊರಡಿಸಿದ್ದು, ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ರಾಣಿ ಎಲಿಜಬೆತ್ II, ಬ್ರೆಜಿಲಿಯನ್ ಫುಟ್ ಬಾಲ್ ದಂತಕಥೆ ಪೀಲೆ, ಕ್ಲಿಂಟ್ ಈಸ್ಟ್‌ವುಡ್, ಬ್ರಿಗಿಟ್ಟೆ ಬಾರ್ಡೋಟ್ ಮತ್ತು ಕೆಲವು ಇತರ ನಾಯಕರು ಸೇರಿದ್ದಾರೆ.

ರೇಡಿಯೊ ಕೇಂದ್ರದ ಹೇಳಿಕೆಯಲ್ಲಿ "ಈ ಮರಣ ವಿಷಯಕ್ಕೆ ಸಂಬಂಧಪಟ್ಟವರಿಗೆ ಮತ್ತು ಅವರ ಸಾವಿನ ಅಕಾಲಿಕ ಪ್ರಕಟಣೆಯಿಂದ ನೋವಾಗಿದ್ದರೆ, ಅವರ ಕ್ಷಮೆಯಾಚಿಸಲು ಮೊದಲ ಮತ್ತು ಮುಖ್ಯ ಆದ್ಯತೆಯಾಗಿದೆ' ಎಂದು ಹೇಳಿದೆ.

ಫ್ರಾನ್ಸ್ ಮತ್ತು ವಿದೇಶಗಳಲ್ಲಿ ಪ್ರಸಾರವಾಗುವ ಸುದ್ದಿವಾಹಿನಿ ಇದು ತಾಂತ್ರಿಕ ದೋಷ ಎಂದು ಹೇಳಿದ್ದು, ಮತ್ತು ಅವರು ಇತ್ತೀಚೆಗೆ ತನ್ನ ವೆಬ್‌ಸೈಟ್ ಅನ್ನು ಹೊಸ ವಿಷಯ ನಿರ್ವಹಣಾ ವ್ಯವಸ್ಥೆಗೆ ಬದಲಾಯಿಸಿದ್ದಾರೆ ಎಂದು ಹೇಳಿದ್ದು, ಸುದ್ದಿ ಹೊರಬಂದ ನಂತರ, ಗೂಗಲ್ ಮತ್ತು ಯಾಹೂ ನ್ಯೂಸ್‌ನಂತಹ ಪ್ಲಾಟ್‌ಫಾರ್ಮ್‌ಗಳು ಕೆಲವು ಲೇಖನಗಳನ್ನು ಕೈಗೆತ್ತಿಕೊಂಡಿದ್ದವು ಎಂದು ತಿಳಿಸಿದೆ.

France Radio Station Apologizes For News Of World Leaders Death

ರೇಡಿಯೋ ಕೇಂದ್ರವು "ಸಂಬಂಧಪಟ್ಟ ಜನರಿಗೆ ಮತ್ತು ನಮ್ಮನ್ನು ಅನುಸರಿಸುವ ಮತ್ತು ನಂಬುವವರಿಗೆ ನಮ್ಮ ಕ್ಷಮೆಯಾಚಿಸುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.

ಅವರ ಸಾವಿನ ಸುದ್ದಿ ಪ್ರಕಟವಾದ ನಂತರ ಸೋಮವಾರ ಫೇಸ್‌ಬುಕ್‌ನಲ್ಲಿ ವೇಡ್, "ಜೀವಂತವಾಗಿರುವಾಗ ಒಬ್ಬರ ಮರಣವನ್ನು ಬಯಸಲು ಯಾರೊಬ್ಬರಿಗೂ ಅವಕಾಶ ಸಿಗುವುದಿಲ್ಲ' ಎಂದು ಹೇಳಿದೆ.

ರೇಡಿಯೋ ಕೇಂದ್ರವು ಸಾವಿನ ಸುದ್ದಿ ಘೋಷಿಸಲ್ಪಟ್ಟ ಇತರ ನಾಯಕರೆಂದರೆ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಕ್ಯೂಬನ್ ನಾಯಕ ರೌಲ್ ಕ್ಯಾಸ್ಟ್ರೋ, ನಟರಾದ ಕ್ಲಿಂಟ್ ಈಸ್ಟ್‌ವುಡ್, ಸೋಫಿಯಾ ಲೊರೆನ್ ಮತ್ತು ಬ್ರಿಗಿಟ್ಟೆ ಬಾರ್ಡೋಟ್ ಇವರೆಲ್ಲರೂ 80 ಮತ್ತು 90 ವರ್ಷ ವಯಸ್ಸಿನವರಾಗಿದ್ದಾರೆ.

English summary
France radio station statement said: "For those concerned about this death and for suffering from the untimely announcement of their death, their first and foremost priority is to apologize.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X