ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ಫ್ಯೂ ನಡುವೆಯೂ ಮೋಜು ಮಸ್ತಿ! ಪಾರ್ಟಿ ಮಾಡುತ್ತಿದ್ದ ಗ್ಯಾಂಗ್ ಕಂಬಿ ಹಿಂದೆ..!

|
Google Oneindia Kannada News

ಕೊರೊನಾ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು ಸೋಂಕು ಕಂಟ್ರೋಲ್‌ಗೆ ತರಲು ಕರ್ಫ್ಯೂ ಹೇರಿದ್ದರೂ ಜನ ಕೇಳ್ತಿಲ್ಲ. ಹೀಗೆ ಕರ್ಫ್ಯೂ ನಡುವೆಯೂ ಮೋಜು, ಮಸ್ತಿ ಮಾಡಲು ಹೋಗಿ ನೂರಾರು ಜನ ಕಂಬಿ ಹಿಂದೆ ಬಿದ್ದ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ. ಜಗತ್ತಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ತಲೆ ಎತ್ತಿದ್ದ ದೇಶ ಫ್ರಾನ್ಸ್‌. ಆದರೆ ಈ ದೇಶ ಕೊರೊನಾ ವಕ್ಕರಿಸಿದ ಬಳಿಕ ನಲುಗಿ ಹೋಗಿದೆ. ಜೀವ ಉಳಿಸಿಕೊಳ್ಳಲು ಕೂಡ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಸೋಂಕಿತರು ಫ್ರಾನ್ಸ್‌ನಲ್ಲಿ ಪತ್ತೆಯಾಗಿದ್ದಾರೆ. ಕೇವಲ 6 ಕೋಟಿ 70 ಲಕ್ಷ ಜನಸಂಖ್ಯೆ ಇರುವ ಫ್ರಾನ್ಸ್‌ನಲ್ಲಿ ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಜನರಿಗೆ ಕಿಲ್ಲರ್ ವೈರಸ್ ಅಟ್ಯಾಕ್ ಆಗಿದೆ.

ಹೀಗಾಗಿಯೇ ಫ್ರಾನ್ಸ್ ಸರ್ಕಾರ ಕರ್ಫ್ಯೂ ಹೇರಿ ಜನರ ಓಡಾಟ ಹಾಗೂ ಮೋಜು, ಮಸ್ತಿಗೆ ಬ್ರೇಕ್ ಹಾಕಿದೆ. ಆದರೆ ಕೆಲವರು ಇದರ ಅರಿವೇ ಇಲ್ಲದಂತೆ ಗುಟ್ಟಾಗಿ ಪಾರ್ಟಿಗಳನ್ನ ನಡೆಸುತ್ತಿದ್ದಾರೆ. ಹೀಗೆ ಪಾರ್ಟಿ ಮಾಡುವಾಗ ಲಾಕ್ ಆದ ನೂರಾರು ಜನರನ್ನ ಕಂಬಿ ಹಿಂದೆ ತಳ್ಳಿ ದಂಡ ಹಾಕಲಾಗಿದೆ.

ಫ್ರಾನ್ಸ್‌ನಲ್ಲಿ ಶಾಲೆಗಳಿಗೂ ರಜೆ..!

ಫ್ರಾನ್ಸ್‌ನಲ್ಲಿ ಶಾಲೆಗಳಿಗೂ ರಜೆ..!

ಕೊರೊನಾ 1 ಆಯ್ತು, 2 ಆಯ್ತು, ಈಗ 3ನೇ ಅಲೆ ಅಬ್ಬರಕ್ಕೆ ಸಿಲುಕಿ ನಲುಗಿ ಹೋಗುತ್ತಿದೆ ಫ್ರಾನ್ಸ್. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಶಾಲೆಗಳಿಗೆ ಬೀಗ ಹಾಕಲಾಗಿದೆ. 50 ಲಕ್ಷ ಸೋಂಕಿತರಿರುವ ಫ್ರಾನ್ಸ್ 'ಕೊರೊನಾ' ಸೋಂಕಿತರ ಪಟ್ಟಿಯಲ್ಲಿ ರಷ್ಯಾವನ್ನೂ ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದಿದೆ.

ಸುಮಾರು 50 ಸಾವಿರ ಕೇಸ್‌ಗಳು ಪತ್ತೆಯಾಗುತ್ತಿವೆ

ಸುಮಾರು 50 ಸಾವಿರ ಕೇಸ್‌ಗಳು ಪತ್ತೆಯಾಗುತ್ತಿವೆ

ಈಗಾಗಲೇ 98 ಸಾವಿರ ನಾಗರಿಕರು ಕೊರೊನಾಗೆ ಬಲಿಯಾಗಿದ್ದು ಪ್ರತಿನಿತ್ಯ ಸುಮಾರು 50 ಸಾವಿರ ಕೇಸ್‌ಗಳು ಪತ್ತೆಯಾಗುತ್ತಿವೆ. ಹೀಗಾಗಿ ಮತ್ತೆ ಲಾಕ್‌ಡೌನ್, ಕರ್ಫ್ಯೂ ನಿರ್ಧಾರ ಕೈಗೊಂಡು ಶಾಲೆಗಳನ್ನ ಬಂದ್ ಮಾಡಲಾಗಿದೆ. ಇದು ಕೇವಲ ಫ್ರಾನ್ಸ್‌ನ ಕಥೆಯಾಗಿ ಉಳಿದಿಲ್ಲ, ಭಾಗಶಃ ಇಡೀ ಯುರೋಪ್ ಇಂತಹದ್ದೇ ಪರಿಸ್ಥಿತಿಯಲ್ಲಿದೆ.

ಯುರೋಪ್‌ನಲ್ಲಿ ಕೊರೊನಾ ಬಿರುಗಾಳಿ

ಯುರೋಪ್‌ನಲ್ಲಿ ಕೊರೊನಾ ಬಿರುಗಾಳಿ

ದೇಶ ಒಟ್ಟು ಪ್ರಕರಣ ಹೊಸ ಪ್ರಕರಣ ಒಟ್ಟು ಸಾವು
ಫ್ರಾನ್ಸ್ 50,23,785 43,284 98,602
ರಷ್ಯಾ 46,32,688 8,704 1,02,649
ಬ್ರಿಟನ್ 43,68,045 2,589 1,27,080
ಇಟಲಿ 37,54,077 17,567 1,13,923
ಸ್ಪೇನ್ 33,47,512 10,875 76,328
ಜರ್ಮನಿ 30,01,844 18,693 78,936
ಫ್ರಾನ್ಸ್‌ನಲ್ಲಿ ಐಸಿಯು ಬೆಡ್‌ಗಳಿಗೆ ಹಾಹಾಕಾರ..!

ಫ್ರಾನ್ಸ್‌ನಲ್ಲಿ ಐಸಿಯು ಬೆಡ್‌ಗಳಿಗೆ ಹಾಹಾಕಾರ..!

ಸದ್ಯದ ಸಂಕಷ್ಟಕ್ಕೆ ಕೈಗನ್ನಡಿ ಎಂಬಂತೆ, ಫ್ರಾನ್ಸ್‌ನಲ್ಲಿ ಐಸಿಯು ಬೆಡ್‌ಗಳಿಗೆ ಹಾಹಾಕಾರ ಎದುರಾಗಿದೆ. ಅಲ್ಲಿನ ಬಹುತೇಕ ಐಸಿಯು ಬೆಡ್‌ಗಳು ಕೊರೊನಾ ಸೋಂಕಿತರಿಂದ ತುಂಬಿ ಹೋಗಿವೆ. ಇನ್ನೇನು ಅಲ್ಲಿ ಚಳಿ ಆರಂಭ ಆಗಬೇಕಿದ್ದು, ಫ್ರಾನ್ಸ್ ಸರ್ಕಾರವನ್ನು ನಡುಗುವಂತೆ ಮಾಡಿದೆ. ಸ್ಪೇನ್ ಸ್ಥಿತಿಯೂ ಇದೇ ಆಗಿದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿರುವ ಯುರೋಪ್‌ ದೇಶಗಳಿಗೆ ಮತ್ತೆ ಕಂಟಕ ಎದುರಾಗಿದೆ. ಆದರೆ ಈ ಬಾರಿ ಆ ಸಂಕಷ್ಟವನ್ನು ಎದುರಿಸುವುದು ಹೇಗೆ ಎಂಬುದೇ ಯುರೋಪ್ ರಾಷ್ಟ್ರಗಳಿಗೆ ಚಿಂತೆಯಾಗಿದೆ.

English summary
France police fined the citizens who violating corona curfew rules and attending secrete dinner party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X