ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಉಚಿತವಾಗಿ ವೆಂಟಿಲೇಟರ್, ಟೆಸ್ಟಿಂಗ್ ಕಿಟ್ ಕೊಟ್ಟ ಫ್ರಾನ್ಸ್!

|
Google Oneindia Kannada News

ನವದೆಹಲಿ, ಜುಲೈ.28: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಫ್ರಾನ್ಸ್ ನೆರವು ನೀಡಿದೆ. 120 ವೆಂಟಿಲೇಟರ್ ಮತ್ತು 50,000 ಕೊವಿಡ್ ಟೆಸ್ಟಿಂಗ್ ಕಿಟ್ ಗಳನ್ನು ಉಚಿತವಾಗಿ ನೀಡಿದೆ.

Recommended Video

ಕರೋನಾದಿಂದಾಗಿ ಸಾವಿರಾರು ಕಾಣದ ನೋವು | Oneindia Kannada

ಫ್ರಾನ್ಸ್ ರಾಯಭಾರಿ ಎಮ್ಯಾನ್ಯುವಲ್ ಲೆನೈನ್ ಅವರು ವೆಂಟಿಲೇಟರ್ ಮತ್ತು ಕೊವಿಡ್-19 ಟೆಸ್ಟಿಂಗ್ ಕಿಟ್ ಗಳನ್ನು ಭಾರತದ ರೆಡ್ ಕ್ರಾಸ್ ಸೊಸೈಟ್ ಕಾರ್ಯದರ್ಶಿ ಆರ್.ಕೆ.ಜೈನ್ ಅವರಿಗೆ ಮಂಗಳವಾರ ಹಸ್ತಾಂತರಿಸಿದ್ದಾರೆ. ಫ್ರಾನ್ಸ್ ವಿಶೇಷ ವಿಮಾನಗಳಲ್ಲಿ ಈ ಸಾಮಗ್ರಿಗಳನ್ನು ಹೊತ್ತು ತರಲಾಯಿತು.

ಯುದ್ಧ ವಿಮಾನ ವಿಶೇಷ: ಫ್ರಾನ್ಸಿನಿಂದ ಬಂದ ಜೆಟ್ ರಫೇಲ್ಯುದ್ಧ ವಿಮಾನ ವಿಶೇಷ: ಫ್ರಾನ್ಸಿನಿಂದ ಬಂದ ಜೆಟ್ ರಫೇಲ್

ಕೊರೊನಾವೈರಸ್ ಸೋಂಕು ನಿಯಂತ್ರಣ ಮತ್ತು ನಿರ್ಮೂಲನೆಗೆ ಭಾರತ ಮತ್ತು ಫ್ರಾನ್ಸ್ ಒಟ್ಟುಗೂಡಿ ಹೋರಾಟ ನಡೆಸಬೇಕಿದೆ. ಮಹಾಮಾರಿ ವಿರುದ್ಧ ಹೋರಾಟಕ್ಕೆ ಭಾರತದ ಜೊತೆಗೆ ಕೈಜೋಡಿಸಲು ಫ್ರಾನ್ಸ್ ಸದಾ ಸಿದ್ಧವಾಗಿರುತ್ತದೆ. ಅದಕ್ಕೆ ಅಗತ್ಯವಾಗಿರುವ ಮೂಲಸೌಕರ್ಯಗಳ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಫ್ರಾನ್ಸ್ ರಾಯಭಾರಿ ಎಮ್ಯಾನ್ಯುವಲ್ ಲೆನೈನ್ ತಿಳಿಸಿದ್ದಾರೆ.

France Donates 120 Ventilators And 50000 Medical Testing Kit To India


ಭಾರತಕ್ಕೆ ಕೊವಿಡ್-19 ಚಿಕಿತ್ಸಾ ಉಪಕರಣ ರವಾನೆ:

ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುವಲ್ ಮ್ಯಾಕ್ರೋನ್ ಭಾರತಕ್ಕೆ ವೈದ್ಯಕೀಯ ಉಪಕರಣಗಳನ್ನು ನೀಡುವುದಾಗಿ ಘೋಷಿಸಿದ್ದರು. ಅದರಂತೆ 50 Osiris-3 ವೆಂಟಿಲೇಟರ್, 70 Yuwell 830 ವೆಂಟಿಲೇಟರ್ ಗಳನ್ನು ಫ್ರಾನ್ಸ್ ನಿಂದ ಭಾರತಕ್ಕೆ ರವಾನಿಸಲಾಗಿದೆ. ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಕೊವಿಡ್-19 ಸೋಂಕಿತರನ್ನು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರವಾನಿಸುವ ಸಂದರ್ಭದಲ್ಲಿ Osiris-3 ವೆಂಟಿಲೇಟರ್ ಗಳ ಬಳಕೆ ಹೆಚ್ಚು ಉಪಯುಕ್ತವಾಗಿರುತ್ತದೆ. ಮೂಗು ಮತ್ತು ಗಂಟಲು ದ್ರವ್ಯವನ್ನು ಪರೀಕ್ಷಿಸುವ ಗುಣಮಟ್ಟದ 50 ಸಾವಿರ ಕೊವಿಡ್-19 ಟೆಸ್ಟಿಂಗ್ ಕಿಟ್ ಗಳನ್ನು ಭಾರತಕ್ಕೆ ಫ್ರಾನ್ಸ್ ನೀಡಿದೆ. ಭಾರತದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 200 ಮಿಲಿಯನ್ ಯುರೋವನ್ನು ನೆರವನ್ನು ಫ್ರೆಂಚ್ ಅಭಿವೃದ್ಧಿ ಏಜೆನ್ಸಿಯಿಂದ ಘೋಷಿಸಲಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲೇ 47,704 ಕೊರೊನಾವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. 24 ಗಂಟೆಯಲ್ಲಿ 654 ಮಂದಿ ಮೃತಪಟ್ಟಿದ್ದಾರೆ. ಒಟ್ಟು ದೇಶದಲ್ಲಿ 14,83,157 ಕೊರೊನಾ ಸೋಂಕಿತ ಪ್ರಕರಣಗಳಿವೆ. 4,96,988 ಪ್ರಕರಣಗಳು ಸಕ್ರಿಯವಾಗಿವೆ. 9,52,744 ಮಂದಿ ಗುಣಮುಖರಾಗಿದ್ದಾರೆ.

ದೇಶಾದ್ಯಂತ ಮಹಾಮಾರಿಗೆ ಒಟ್ಟು 33,425 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದ 5 ಲಕ್ಷಕ್ಕೂ ಹೆಚ್ಚು ಜನರ ಮಾದರಿಗಳನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಜುಲೈ.26 ರಂದು 5,15,000 ಮಂದಿಯನ್ನು ಪರೀಕ್ಷೆಗೊಳಪಡಿಸಿತ್ತು. ಜುಲೈ.27ರಂದು 5,28,000 ಮಂದಿ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
France Donates 120 Ventilators And 50000 Medical Testing Kit To India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X