ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್: ಡಿಸೆಂಬರ್ 15ರಿಂದ ಕೊರೊನಾ ಲಾಕ್‌ಡೌನ್, ರಾತ್ರಿ ಕರ್ಫ್ಯೂ

|
Google Oneindia Kannada News

ಪ್ಯಾರಿಸ್, ಡಿಸೆಂಬರ್ 11: ಹೊಸ ವರ್ಷವು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗದಂತೆ ಎಚ್ಚರಿಕೆವಹಿಸಲು ಫ್ರಾನ್ಸ್‌ನಲ್ಲಿ ಕೊರೊನಾ ಲಾಕ್‌ಡೌನ್ ವಿಧಿಸಲಾಗುತ್ತಿದೆ.

ಡಿಸೆಂಬರ್ 15ರಿಂದ ಕೊರೊನಾ ಲಾಕ್‌ಡೌನ್ ವಿಧಿಸಲಾಗುತ್ತಿದ್ದು, ರಾತ್ರಿ 8 ಗಂಟೆ ಬಳಿಕ ಕರ್ಫ್ಯೂ ಇರಲಿದೆ.ಈ ಕುರಿತು ಫ್ರಾನ್ಸ್ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಮಾಹಿತಿ ನೀಡಿದ್ದು, ಒಟ್ಟು ಆರು ದಿನಗಳ ಲಾಕ್‌ಡೌನ್ ಇರಲಿದೆ. ಕುಟುಂಬದವರು ಕ್ರಿಸ್‌ಮಸ್ ಆಚರಿಸಲು ಹೊರಗೆ ತೆರಳಲು ಅನುಮತಿ ನೀಡಲಾಗಿದೆ.

ಫೈಜರ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಎಫ್‌ಡಿಎ ಅನುಮತಿಫೈಜರ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಎಫ್‌ಡಿಎ ಅನುಮತಿ

ಕೊರೊನಾ ಸೋಂಕು ಕ್ರಮೇಣವಾಗಿ ಏರಿಕೆಯಾಗುತ್ತಿದ್ದು, ಮ್ಯೂಸಿಯಂ, ಸಿನೆಮಾ, ಥಿಯೇಟರ್‌ಗಳು ಮುಂದಿನ ಮೂರು ವಾರಗಳ ಕಾಲ ಮುಚ್ಚಿರಲಿವೆ. ಅಕ್ಟೋಬರ್ 30 ರಂದು ದೇಶದಲ್ಲಿ ಎರಡನೇ ಲಾಕ್‌ಡೌನ್ ಆರಂಭವಾಗಿತ್ತು. ಇದೀಗ ಪರಿಸ್ಥಿತಿ ಹಿಡಿತಕ್ಕೆ ಬಂದಿದೆ.

France: COVID-19 Lockdown To Be Lifted On December 15

ಅಕ್ಟೋಬರ್ ತಿಂಗಳಲ್ಲಿ ನಿತ್ಯ 50 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದರು ಅದು ಈಗ 10 ಸಾವಿರಕ್ಕೆ ಬಂದು ನಿಂತಿದೆ.ಮುಂದಿನ ಮಂಗಳವಾರದೊಳಗಾಗಿ ದೇಶದಲ್ಲಿ ನಿತ್ಯ 5 ಸಾವಿರಕ್ಕೂ ಕಡಿಮೆ ಪ್ರಕರಣಗಳು ಬರುವಂತೆ ನೋಡಿಕೊಳ್ಳಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ಗುರುವಾರ 14 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದುವರೆಗೂ ಫ್ರಾನ್ಸ್‌ನಲ್ಲಿ ಕೊರೊನಾ ಸೋಂಕಿಗೆ 55 ಸಾವಿರ ಮಂದಿ ಬಲಿಯಾಗಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಫೈಜರ್ ಲಸಿಕೆ ಬಳಕೆ ಮಾಡಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಒಪ್ಪಿಗೆ ನೀಡಿದೆ. ಬಯೋಎನ್‌ಟೆಕ್‌ನ ಫೈಜರ್‌ ಲಸಿಕೆಗೆ ತುರ್ತು ಅನುಮತಿ ದೊರೆತಂತಾಗಿದೆ.

Recommended Video

Corona ಸಮಯದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ದಾಖಲಾದ ಪ್ರಕರಣಗಳೆಷ್ಟು ಗೊತ್ತಾ? | Oneindia Kannada

ಎಫ್‌ಡಿಎ ಸಲಹಾ ಸಮಿತಿಯು ಹಾಗೂ ಕೆಲವು ವಿಜ್ಞಾನಿಗಳು ಸೇರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಜನವರಿಯಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು, ಬಳಿಕ ಲಸಿಕೆಯ ಪರಿಣಾಮದ ಬಗ್ಗೆ ನಿಗಾ ಇರಿಸಲಾಗುತ್ತದೆ.

English summary
France will lift a six-week-long nationwide coronavirus lockdown on December 15 but impose a curfew from 8 pm, including on New Year's Eve, Prime Minister Jean Castex announced Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X