ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌಲನಾ ಅಜರ್ ಕಟ್ಟಿಹಾಕಲು ಮುಂದಾದ ಭಾರತಕ್ಕೆ ಫ್ರಾನ್ಸ್ ಬಲ

|
Google Oneindia Kannada News

ನವದೆಹಲಿ, ಫೆಬ್ರವರಿ 28: ಪಾಕಿಸ್ತಾನ ಬೆಂಬಲಿತ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಹಾಗೂ ಸಂಘಟನೆ ಮುಖ್ಯಸ್ಥ ಮೌಲನಾ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿ, ಎಲ್ಲೆಡೆಯಿಂದ ಕಟ್ಟಿ ಹಾಕಲು ಮುಂದಾಗಿರುವ ಭಾರತದ ಬೆನ್ನಿಗೆ ಫ್ರಾನ್ಸ್ ನಿಂತಿದೆ.

ಫ್ರಾನ್ಸ್ ಪ್ರಸ್ತಾವನೆಗೆ ಯುಎಸ್, ಯುಕೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿವೆ. ಮಸೂದ್ ಅಜರ್ ಜಾಗತಿಕವಾಗಿ ಪ್ರಯಾಣಿಸುವಂತಿಲ್ಲ, ಆತನ ಸಮಸ್ತ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಪ್ರಸ್ತಾವನೆಯಲ್ಲಿದೆ.

ನಮ್ಮ ನೆಲೆ ಮೇಲೆ ಭಾರತ ದಾಳಿ ಮಾಡಿದ್ದು ಸತ್ಯ: ಜೈಷ್ ಉಗ್ರ ಮಸೂದ್ನಮ್ಮ ನೆಲೆ ಮೇಲೆ ಭಾರತ ದಾಳಿ ಮಾಡಿದ್ದು ಸತ್ಯ: ಜೈಷ್ ಉಗ್ರ ಮಸೂದ್

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್, ಗಡಿ ನಿಯಂತ್ರಣ ರೇಖೆ ಬಳಿ ಇರುವ ಮುಜಾಫರ್ ಬಾದ್ ಹಾಗೂ ಚಕೋತಿಯಲ್ಲಿದ್ದ ಉಗ್ರದ ಅಡಗುತಾಣಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿತು.

ಭಾರತದ ಸರ್ಜಿಕಲ್ ಸ್ಟ್ರೈಕ್ 2ಗೆ ಜಾಗತಿಕ ಬೆಂಬಲ

ಭಾರತದ ಸರ್ಜಿಕಲ್ ಸ್ಟ್ರೈಕ್ 2ಗೆ ಜಾಗತಿಕ ಬೆಂಬಲ

ಭಾರತದ ವೈಮಾನಿಕ ದಾಳಿ ಕೇವಲ ಉಗ್ರರನ್ನು ಸದೆಬಡೆಯುವುದೇ ಆಗಿತ್ತು. ಭಾರತದ ವೈಮಾನಿಕ ದಾಳಿ ಕಾರ್ಯತಂತ್ರ, ರಾಜತಾಂತ್ರಿಕ ನಿಲುವಿಗೆ ಅನೇಕ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು. ಚೀನಾ ಕೂಡಾ ಉಗ್ರರ ನೆಲೆ ಧ್ವಂಸಗೊಳಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಚ್ಚರಿಯಾಗಿತ್ತು. ಈಗ ವಿಶ್ವಸಂಸ್ಥೆ ಭದ್ರತಾ ಸಮಿತಿ(ಯುಎನ್ ಎಸ್ ಸಿ) ಮೂಲಕ ಉಗ್ರ ಮೌಲನಾಗೆ ನಿರ್ಬಂಧ ಹೇರಲು ಫ್ರಾನ್ಸ್ ಪ್ರಸ್ತಾವನೆ ಸಲ್ಲಿಸಲಿದೆ.

ಫ್ರಾನ್ಸ್ ನಿಂದ ಉಗ್ರನಿಗೆ ನಿಷೇಧದ ಪ್ರಸ್ತಾವನೆ

ಫ್ರಾನ್ಸ್ ನಿಂದ ಉಗ್ರನಿಗೆ ನಿಷೇಧದ ಪ್ರಸ್ತಾವನೆ

15 ರಾಷ್ಟ್ರಗಳ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಅಧ್ಯಕ್ಷ ಸ್ಥಾನ ಈ ಬಾರಿ ಮಾರ್ಚ್ 01ರಂದು ಫ್ರಾನ್ಸ್ ಗೆ ಸಿಗಲಿದೆ. ಈ ಸಂದರ್ಭದಲ್ಲಿ ಜೈಷ್ ಎ ಮೊಹಮ್ಮದ್ ಹಾಗೂ ಮೌಲನಾ ಮಸೂದ್ ಅಜರ್ ಗೆ ಎಲ್ಲಾ ರೀತಿಯ ನಿಷೇಧ ಹೇರಲು ಪ್ರಸ್ತಾವನೆ ಸಲ್ಲಿಸಲಿದೆ.

ಕಪ್ಪುಪಟ್ಟಿಗೆ ಸೇರಿಸಲು ಭಾರತದ ಪ್ರಯತ್ನ

ಕಪ್ಪುಪಟ್ಟಿಗೆ ಸೇರಿಸಲು ಭಾರತದ ಪ್ರಯತ್ನ

2009ರಲ್ಲೇ ಮೌಲನಾ ಮಸೂದ್ ಅಜರ್ ನನ್ನ ಜಾಗತಿಕ ಉಗ್ರ ಎಂದು ಘೋಷಿಸುವಂತೆ ಭಾರತವು 1267 ಭದ್ರತಾ ಸಮಿತಿಗೆ ಮನವಿ ಮಾಡಿಕೊಂಡಿತ್ತು. 2017ರಲ್ಲೂ ಮತ್ತೊಮ್ಮೆ ಮನವಿ ಸಲ್ಲಿಸಲಾಗಿತ್ತು. ಆದರೆ, ಪಾಕಿಸ್ತಾನ ಹಾಗೂ ಚೀನಾ ದೇಶಗಳ ಪ್ರತಿರೋಧದಿಂದ ಸಾಧ್ಯವಾಗಿರಲಿಲ್ಲ.

ಚೀನಾ ಬೆಂಬಲ ಸಿಗುವ ನಿರೀಕ್ಷೆ ಕಡಿಮೆ

ಚೀನಾ ಬೆಂಬಲ ಸಿಗುವ ನಿರೀಕ್ಷೆ ಕಡಿಮೆ

ವಿಶ್ವಸಂಸ್ಥೆಯು ನಿಷೇಧಿತ ಉಗ್ರರ ಪಟ್ಟಿಯನ್ನು ತಯಾರಿಸುವ ವಿಚಾರದಲ್ಲಿ ಈಗಾಗಲೇ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದಲೇ ತೀವ್ರ ಆಕ್ಷೇಪವಿದೆ. ಹಾಗಾಗಿ, ಚೀನಾ ದೇಶವು ಈ ವಿಚಾರದಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.

ಅಮೆರಿಕದ ಬೆಂಬಲ ಸಿಗುವ ನಿರೀಕ್ಷೆ

ಅಮೆರಿಕದ ಬೆಂಬಲ ಸಿಗುವ ನಿರೀಕ್ಷೆ

ವಿಶ್ವಸಂಸ್ಥೆಯ 1267 ಭದ್ರತಾ ಸಮಿತಿಯ ಮುಂದೆ ಈ ವಿಚಾರ ಚರ್ಚೆಗೆ ಬಂದಾಗ, ಭಾರತದ ಬೇಡಿಕೆಗೆ ವಿಶ್ವ ಸಂಸ್ಥೆಯ ಉಳಿದ ಸದಸ್ಯ ರಾಷ್ಟ್ರಗಳ ಬೆಂಬಲ ಬೇಕಾಗುತ್ತದೆ. ಭಾರತದ ಬೇಡಿಕೆಗೆ ಪಾಕಿಸ್ತಾನ, ಚೀನಾ ಪ್ರತಿರೋಧ ಒಡ್ಡುತ್ತಿದೆ. ಸಂಸತ್ ದಾಳಿ, ಪಠಾಣ್ ಕೋಟ್ ದಾಳಿ ರೂವಾರಿ ಮೌಲನಾ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕನಾಗಿ ಘೋಷಿಸಬೇಕು ಎಂಬ ಭಾರತದ ಬೇಡಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಎರಡು ವರ್ಷಗಳ ಹಿಂದೆ ಬೆಂಬಲ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಿನೀವಾ ಒಪ್ಪಂದ ಎಂದರೇನು?, ಪ್ರಮುಖ ಅಂಶಗಳು ಏನು? ಜಿನೀವಾ ಒಪ್ಪಂದ ಎಂದರೇನು?, ಪ್ರಮುಖ ಅಂಶಗಳು ಏನು?

English summary
France is working on a proposal to ban chief of the UN-proscribed Jaish-e Muhammad (JeM) Masood Azhar and could move it in the Sanctions Committee after it assumes the Presidency of the powerful UN Security Council in March, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X