ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಸಹೋದರರ ಬೇಟೆಗೆ 80 ಸಾವಿರ ಪೊಲೀಸರು

By Kiran B Hegde
|
Google Oneindia Kannada News

ಫ್ರಾನ್ಸ್, ಜ. 9: ಪ್ಯಾರಿಸ್‌ನ ಚಾರ್ಲಿ ಹೆಬ್ಡೊ ವ್ಯಂಗ್ಯಚಿತ್ರ ಪತ್ರಿಕೆ ಮೇಲೆ ದಾಳಿ ನಡೆಸಿ 10 ಪತ್ರಕರ್ತರು ಹಾಗೂ ಇಬ್ಬರು ಪೊಲೀಸರ ಹತ್ಯೆಗೈದ ಪಾತಕಿಗಳ ಬೇಟೆಗೆ ಫ್ರಾನ್ಸ್ ಸರ್ಕಾರ ಕಾರ್ಯಾಚರಣೆ ಮುಂದುವರಿಸಿದೆ. ಈ ಕುರಿತು 10 ಪ್ರಮುಖ ಬೆಳವಣಿಗೆಗಳನ್ನು ಇಲ್ಲಿ ನೀಡಲಾಗಿದೆ.

1) ಪ್ಯಾರಿಸ್‌ನಿಂದ 40 ಕಿ.ಮೀ. ದೂರದಲ್ಲಿರುವ ದಮ್ಮಾರ್ಟಿನ್-ಎನ್-ಗೋಲೆ ಪಟ್ಟಣದಲ್ಲಿ ಉಗ್ರರ ಬೇಟೆಗೆ ಪೊಲೀಸರು ಜಾಲ ಬೀಸಿದ್ದಾರೆ.
2) ಚಾರ್ಲಿ ಹೆಬ್ಡೊ ಮೇಲೆ ದಾಳಿ ನಡೆಸಿದ್ದ ಉಗ್ರರು ಸೂಪರ್ ಮಾರ್ಕೆಟ್‌ನಲ್ಲಿ ಅಡಗಿದ್ದಾರೆ. [ಚಾರ್ಲಿ ಹೆಬ್ಡೊ ಮೇಲೆ ದಾಳಿ : ಓರ್ವ ಉಗ್ರ ಶರಣು]
3) ಫ್ರಾನ್ಸ್ ಸರ್ಕಾರ ಗುರುತಿಸಿದ್ದ ಇಬ್ಬರು ಶಂಕಿತ ಸಹೋದರರು ಹಲವರನ್ನು ಬಂಧನದಲ್ಲಿಟ್ಟುಕೊಂಡಿದ್ದಾರೆ.
4) ಶಂಕಿತರ ವಶದಲ್ಲಿರುವವರನ್ನು ಬಿಡಿಸಲು ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.
5) ರಕ್ಷಣಾ ಕಾರ್ಯಾಚರಣೆಗಾಗಿ ದಮ್ಮಾರ್ಟಿನ್-ಎನ್-ಗೋಲೆಗೆ ಹೆಲಿಕಾಪ್ಟರ್ ಆಗಮನ. [ಉಗ್ರರ ಮಟ್ಟಹಾಕಲು ಭಾರತಕ್ಕೆ ಅಸಾಧ್ಯವೇ?]

france

6) ಈ ಪಟ್ಟಣದ ನಿವಾಸಿಗಳಿಗೆ ಮನೆಯೊಳಗೇ ಇರಲು ಪೊಲೀಸರ ಸೂಚನೆ. ವಿದ್ಯಾರ್ಥಿಗಳಿಗೆ ತರಗತಿಯೊಳಗೆ ಇರಲು ಆದೇಶ.
7) ಪಟ್ಟಣದಲ್ಲಿ 80 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ.
8) ನಾವು ಹುಡುಕುತ್ತಿದ್ದ ಉಗ್ರರು ಸಿಕ್ಕಿದ್ದಾರೆ ಎಂದ ಫ್ರಾನ್ಸ್ ಆಂತರಿಕ ಸಚಿವ ಬರ್ನಾರ್ಡ್ ಕೆಜೆನಾವ್. [ಕೋಸ್ಟ್ ಗಾರ್ಡ್ ಕಣ್ಣಿಗೆ ಪಾಕ್ ದೋಣಿ ಬಿದ್ದಿದ್ದು ಹೀಗೆ]
9) ಕೆಲವೇ ಗಂಟೆಗಳ ಮೊದಲು ಶಂಕಿತ ಸಹೋದರರಿಂದ ಪಿಯುಜಿಯೋ ಕಾರು ಅಪಹರಣ.
10) ಉಗ್ರರು ಜನರನ್ನು ಒತ್ತೆ ಇಟ್ಟುಕೊಂಡಿರುವ ಸ್ಥಳದ ಸಮೀಪ ಕಾರ್ಯಾಚರಣೆಗಾಗಿ ಬಂದಿಳಿದಿವೆ ವಿಮಾನಗಳು.

English summary
Biggest police operation is under way in the town of Dammartin-en-Goele in France. More than 80,000 police officers are involved in search for Charlie Hebdo attackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X