ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ರೀತಿಯ ಕೊರೊನಾವೈರಸ್ ರೂಪಾಂತರ ಜಗತ್ತಿನಲ್ಲಿ ಹರಡುತ್ತಿದೆ: WHO ಎಚ್ಚರಿಕೆ

|
Google Oneindia Kannada News

ನವದೆಹಲಿ, ಜನವರಿ 03: ಬ್ರಿಟನ್‌ನಲ್ಲಿ ಕೆಲ ವಾರಗಳ ಹಿಂದಷ್ಟೇ ಕೊರೊನಾವೈರಸ್ ಹೊಸ ರೂಪಾಂತರವು ವಿಶ್ವವನ್ನೇ ಮತ್ತೆ ಆತಂಕಕ್ಕೆ ದೂಡಿದ್ದನ್ನು ಮರೆತಿಲ್ಲ. ಜೊತೆ ದಕ್ಷಿಣ ಆಫ್ರಿಕಾದಲ್ಲೂ ಹೊಸ ಕೊರೊನಾವೈರಸ್ ಕಂಡುಬಂದಿತ್ತು. ಇದನ್ನೇ ಅರಗಿಸಿಕೊಳ್ಳುವಷ್ಟರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಆತಂಕಕಾರಿ ಸುದ್ದಿಯನ್ನು ಹೊರಹಾಕಿದೆ.

ವಿಶ್ವದಲ್ಲಿ ಸದ್ಯ ಎರಡು ಇಲ್ಲವೇ ಮೂರು ಹೊಸ ಕೊರೊನಾವೈರಸ್ ಕಂಡುಬಂದಿದೆ ಎಂದು ನೀವು ಭಾವಿಸಿದ್ದರೆ ಅದು ಸುಳ್ಳಾಗಬಹುದು. ಏಕೆಂದರೆ ಜಗತ್ತಿನಲ್ಲಿ ನಾಲ್ಕು ರೀತಿಯ ಕೊರೊನಾವೈರಸ್ ಹೊಸ ರೂಪಾಂತರವು ಸಂಚರಿಸುತ್ತಿದೆ ಎಂದು ಡಬ್ಲ್ಯೂಹೆಚ್‌ಒ ಮಾಹಿತಿ ನೀಡಿದೆ.

ಚೀನಾದ ವುಹಾನ್‌ನಲ್ಲಿ ಮೊದಲ ಪ್ರಕರಣ ಪತ್ತೆ

ಚೀನಾದ ವುಹಾನ್‌ನಲ್ಲಿ ಮೊದಲ ಪ್ರಕರಣ ಪತ್ತೆ

ಡಬ್ಲ್ಯೂಹೆಚ್‌ಒ ಪ್ರಕಾರ, 2019 ರ ನವೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾದಾಗಿನಿಂದ, ಈ ವೈರಸ್ ಇದುವರೆಗೆ ಅನೇಕ ರೂಪಾಂತರಗಳಿಗೆ (ರಚನೆಯಲ್ಲಿ ಬದಲಾವಣೆಗಳಿಗೆ) ಒಳಗಾಗಿದೆ. ಜೊತೆಗೆ ಪ್ರಸ್ತುತ ಈ ವೈರಸ್‌ನ 4 ರೂಪಾಂತರಗಳು ಪ್ರಪಂಚದಾದ್ಯಂತ ಸೋಂಕನ್ನು ಹರಡುತ್ತಿವೆ.

ಭಾರತಕ್ಕೆ ಅಭಿನಂದನೆ: ಕೊರೊನಾ ಲಸಿಕೆ ತುರ್ತು ಅನುಮತಿ ಬಗ್ಗೆ ಮೋದಿ ಮಾತುಭಾರತಕ್ಕೆ ಅಭಿನಂದನೆ: ಕೊರೊನಾ ಲಸಿಕೆ ತುರ್ತು ಅನುಮತಿ ಬಗ್ಗೆ ಮೋದಿ ಮಾತು

ಸ್ಪೈಕ್ ಪ್ರೋಟೀನ್ ಅನ್ನು ಎನ್ಕೋಡಿಂಗ್ ಮಾಡುವ ಜೀನ್‌ನಲ್ಲಿ ಡಿ 614 ಜಿ ರೂಪಾಂತರದ SARS-CoV-2 ರೂಪಾಂತರದ ಮೊದಲ ಗುಣಲಕ್ಷಣವನ್ನು ಮೊದಲ ಬಾರಿಗೆ 2020 ರ ಜನವರಿಯ ಕೊನೆಯಲ್ಲಿ ಫೆಬ್ರವರಿ ಆರಂಭದವರೆಗೆ ಗಮನಿಸಲಾಯಿತು. ಇದನ್ನು ಚೀನಾದಲ್ಲಿ ಗುರುತಿಸಲಾಗಿದ್ದು, ಈ ರೂಪಾಂತರಗಳು ಜೂನ್ 2020 ರ ನಂತರ ಇಡೀ ಜಗತ್ತಿನಲ್ಲಿ ವೇಗವಾಗಿ ಹರಡುತ್ತವೆ. ಹಾಗೂ ಜೂನ್ 2020ರ ಹೊತ್ತಿಗೆ ಜಗತ್ತಿನಾದ್ಯಂತ ಪ್ರಬಲವಾಗಿ ರೂಪುಗೊಂಡಿತು.

ಆಗಸ್ಟ್‌ ಮತ್ತು ಸೆಪ್ಟೆಂಬ್‌ನಲ್ಲಿ ಮೂರನೇ ರೂಪಾಂತರ ವರದಿ

ಆಗಸ್ಟ್‌ ಮತ್ತು ಸೆಪ್ಟೆಂಬ್‌ನಲ್ಲಿ ಮೂರನೇ ರೂಪಾಂತರ ವರದಿ

ಎರಡನೆಯ ರೂಪಾಂತರವು ವರದಿಯಾದ ನಂತರ, ಆಗಸ್ಟ್ ಮತ್ತು ಸೆಪ್ಟೆಂಬರ್ 2020 ರಲ್ಲಿ ಕೊರೊನಾವೈರಸ್ ಮತ್ತೊಂದು ರೂಪಾಂತರವು ವರದಿಯಾಗಿದೆ. ಆದಾಗ್ಯೂ, ಇದು ವೈರಸ್‌ನಿಂದಾಗಿ ರೋಗದ ತೀವ್ರತೆಗೆ ಯಾವುದೇ ಪರಿಣಾಮ ಬೀರಿಲ್ಲ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕಂಡು ಬಂದ ಮೂರನೇ ರೂಪಾಂತರವನ್ನು ಬೀವರ್‌ನಲ್ಲಿ ಕಂಡುಹಿಡಿಯಲಾಯಿತು ಮತ್ತು ಅದು ಮನುಷ್ಯರನ್ನು ತಲುಪುತ್ತದೆ ಎಂಬ ಭಯವಿದ್ದು, ಇದು ಮೊದಲು ಡೆನ್ಮಾರ್ಕ್‌ನಲ್ಲಿ ಕಂಡುಹಿಡಿಯಲಾಯಿತು.

ಬ್ರಿಟನ್‌ನಲ್ಲಿ ಹೊಸ ಕೊರೊನಾವೈರಸ್ ಪತ್ತೆ

ಬ್ರಿಟನ್‌ನಲ್ಲಿ ಹೊಸ ಕೊರೊನಾವೈರಸ್ ಪತ್ತೆ

ಇದರ ನಂತರ ಡಿಸೆಂಬರ್ 14 ರಂದು, ಯುಕೆ ನಲ್ಲಿ SARS-CoV-2 VOC 202012/01 ಎಂಬ ಹೊಸ ವೈರಸ್ ಪತ್ತೆಯಾಗಿದೆ. ಅದರ ಆನುವಂಶಿಕ ಅಧ್ಯಯನ ಮಾಡಿದಾಗ ಅದು ಬ್ರಿಟನ್‌ನಲ್ಲಿ ಹರಡುತ್ತಿದ್ದ SARS-CoV-2 ಗಿಂತ ಭಿನ್ನವಾಗಿದೆ ಎಂದು ಕಂಡುಬಂದಿದೆ. ಈ ವರದಿಯು ವಿಜ್ಞಾನಿಗಳ ಕಳವಳವನ್ನು ಹೆಚ್ಚಿಸಿದೆ. ಕ್ರಮೇಣ, ಈ ವೈರಸ್ ವೇಗವಾಗಿ ಹರಡಿದ್ದು, ಡಿಸೆಂಬರ್ 30 ರ ಹೊತ್ತಿಗೆ ಹೊಸ ವೈರಸ್ ಬ್ರಿಟನ್ ಹೊರಗಿನ ಇತರ 31 ದೇಶಗಳಲ್ಲಿ ಹರಡಿತು.

ಕೊವಿಶೀಲ್ಡ್, ಕೋವ್ಯಾಕ್ಸಿನ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ಕೊವಿಶೀಲ್ಡ್, ಕೋವ್ಯಾಕ್ಸಿನ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್

ದಕ್ಷಿಣ ಆಫ್ರಿಕಾದಲ್ಲೂ ಹೊಸ ವೈರಸ್

ದಕ್ಷಿಣ ಆಫ್ರಿಕಾದಲ್ಲೂ ಹೊಸ ವೈರಸ್

ಡಿಸೆಂಬರ್ 18 ರಂದು, ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರವನ್ನು ಕಂಡುಹಿಡಿಯಲಾಯಿತು, ಇದು ದೇಶದ ಮೂರು ರಾಜ್ಯಗಳಲ್ಲಿ ವೇಗವಾಗಿ ಹರಡಿತು. ಅದಕ್ಕೆ 501 ವೈ.ವಿ 2 ಎಂದು ಹೆಸರಿಸಲಾಯಿತು. ಆಫ್ರಿಕಾದಲ್ಲಿ ಕಂಡುಬರುವ 501Y.V2 ರೂಪಾಂತರವು ಉಳಿದ ತಳಿಗಳಿಗಿಂತ ಭಿನ್ನವಾಗಿದೆ ಎಂದು ಕಂಡುಬಂದಿದೆ. ಈವರೆಗೆ ಈ ವೈರಸ್ ನಾಲ್ಕು ರಾಷ್ಟ್ರಗಳಲ್ಲಿ ಹರಡಿದೆ.

English summary
The World Health Organization (WHO) has said in a report that at least four types of coronavirus variants are circulating the globe since the first case of the infection was reported in Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X