ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸ್ ಉಗ್ರರಿಂದ ಕನ್ನಡಿಗರು ಸೇರಿ ನಾಲ್ವರ ಅಪಹರಣ

By Mahesh
|
Google Oneindia Kannada News

ಟ್ರಿಪೋಲಿ(ಲಿಬಿಯಾ) , ಜುಲೈ 31: ಕರ್ನಾಟಕ ಮೂಲದ ಇಬ್ಬರು ಹಾಗೂ ಆಂಧ್ರಪ್ರದೇಶದ ಇಬ್ಬರು ಸೇರಿದಂತೆ ನಾಲ್ವರು ಭಾರತೀಯರು ನಾಪತ್ತೆಯಾಗಿದ್ದಾರೆ. ಐಎಸ್ಐಎಸ್ ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ. ಇದುವರೆವಿಗೂ ಯಾವುದೇ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತಿಲ್ಲ.

ಇದೀಗ ಬಂದ ಶುಭ ಸುದ್ದಿ: ಅಪಹರಣವಾಗಿದ್ದ ಇಬ್ಬರು ಕನ್ನಡಿಗರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದಿಂದ ಟ್ವೀಟ್

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನಾಲ್ವರ ಪೈಕಿ ಇಬ್ಬರು ಕನ್ನಡಿಗರು ಇರುವುದನ್ನು ದೃಢಪಡಿಸಿದ್ದಾರೆ.[ಉಗ್ರರಿಗೆ ಭಾರತೀಯರೆಂದರೆ ಲೈಂಗಿಕ ಗುಲಾಮರಂತೆ!]

ಲಿಬಿಯಾದ ಬೆಳವಣಿಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಲಾಗಿದೆ. ಅಪಹರಣಕಾರರು ಇನ್ನೂ ಯಾವುದೇ ಬೇಡಿಕೆ ಇಟ್ಟಿಲ್ಲ. ಭಾರತೀಯ ಸುರಕ್ಷತೆ ಆದ್ಯತೆ ನೀಡಲಾಗುತ್ತದೆ ಎಂದು ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ. [ಐಎಸ್‌ಐಎಸ್‌ ಸೇರಿದ್ದ ಕರ್ನಾಟಕದ ಮೂವರ ಸಾವು?]

Four Indian techies missing in Libya, ISIS suspected

ಗುರುತು ಪತ್ತೆ: ಅಪಹರಣವಾದ ಭಾರತೀಯರ ಪೈಕಿ ಒಬ್ಬರು ಆಂಧ್ರಪ್ರದೇಶದ ಶ್ರೀಕಾಕುಳಂ ಗೋಪಿಕೃಷ್ಣ, ಮತ್ತೊಬ್ಬರು ಹೈದಬಾದಿನ ಬಲರಾಮ್ ಎಂದು ತಿಳಿದು ಬಂದಿದೆ. [ಗಡಾಫಿಯ 7,600 ಕೋಟಿ ರು ಆಸ್ತಿ ಇಟಲಿ ವಶ]

ಇಬ್ಬರು ಕನ್ನಡಿಗರ ಪೈಕಿ ಒಬ್ಬರು ಬೆಂಗಳೂರಿನ ವಿಜಯ್ ಕುಮಾರ್ ಮತ್ತೊಬ್ಬರು ರಾಯಚೂರಿನ ಲಕ್ಷ್ಮಿಕಾಂತ್ ಎಂದು ಹೇಳಲಾಗಿದೆ. ಕಳೆದ ರಾತ್ರಿ(ಜುಲೈ 30) 11 ಗಂಟೆ ಸುಮಾರಿಗೆ ಟ್ರಿಪೋಲಿಯ ಸಿರ್ಸೆ ನಗರದ ಚೆಕ್ ಪೋಸ್ಟ್ ಬಳಿಯಲ್ಲಿದ್ದರು ನಂತರ ಅವರ ಸುಳಿವು ಸಿಕ್ಕಿಲ್ಲ ಎಂದು ಸದ್ಯಕ್ಕೆ ಮಾಹಿತಿ ಲಭ್ಯವಾಗಿದೆ. [ಇರಾಕಿ ಉಗ್ರರ ಕಣ್ಣು ಈಗ ಭಾರತದ ಮೇಲೆ!]

ಕಳೆದ ಒಂದು ವರ್ಷದಲ್ಲಿ ಯುದ್ಧ ಪೀಡಿತ ಲಿಬಿಯಾದಲ್ಲಿ ನಾಪತ್ತೆಯಾದ 39ಕ್ಕೂ ಅಧಿಕ ಭಾರತೀಯರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಆದರೆ, ಸಾವಿರಾರು ಭಾರತೀಯರನ್ನು ರಕ್ಷಿಸಿ ತವರಿಗೆ ವಾಪಸ್ ಕರೆಸಿಕೊಳ್ಳುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸುದ್ದಿಯ ವಿಡಿಯೋ ನೋಡಲು ಕ್ಲಿಕ್ ಮಾಡಿ.

English summary
The government of India which is keeping a close watch on the developments after four Indians were abducted in Libya allegedly by the ISIS has said that no ransom demand has been made as yet.Two of the four Indians who were abducted allegedly by the ISIS have been released, the MEA has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X