• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸದ್ಭಾವನೆ'ಗಾಗಿ ಮಾಜಿ ಪತ್ನಿಯರಿಂದ ಹೊಗಳಿಸಿಕೊಂಡ ಇಮ್ರಾನ್

By ಯಶೋಧರ ಪಟಕೂಟ
|
   Surgical Strike 2: ಮೂವರು ಪತ್ನಿಯರ ಸರದಾರ ಇಮ್ರಾನ್ ಖಾನ್ | Oneindia Kannada

   ಇಸ್ಲಾಮಾಬಾದ್, ಮಾರ್ಚ್ 01 : ಭಯೋತ್ಪಾದನೆ ಮಟ್ಟ ಹಾಕಲು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಭಾರತದೊಡನೆ 'ಶಾಂತಿ' ಮಾತುಕತೆಗೆ ಸಿದ್ಧ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

   ಪಕ್ಕದ ಪಾಕಿಸ್ತಾನ್, ಅದಕ್ಕೆ ಇಮ್ರಾನ್ ಖಾನ್- ಜ್ಯೋತಿಷ್ಯ ವಿಶ್ಲೇಷಣೆ

   ಅಲ್ಲಾ ಸ್ವಾಮೀ, ಇಬ್ಬರು ತ್ರಿಪುರ ಸುಂದರಿ ಹೆಂಡತಿಯರಿದ್ದರೂ ಅವರೊಂದಿಗೆ 'ಮಾತುಕತೆ' ನಡೆಸಿ ಸಂಸಾರ ಸರಿದೂಗಿಸಿಕೊಳ್ಳಲು ವಿಫಲರಾದವರು, ಇನ್ನೊಂದು ದೇಶದ ಜೊತೆಯಲ್ಲಿ, ಅದರಲ್ಲೂ ಕಾಶ್ಮೀರದಂಥ 'ಸುಂದರಿ'ಗೆ ಸಂಬಂಧಿಸಿದಂತೆ ಯಶಸ್ವಿಯಾಗಿ ಮಾತುಕತೆ ನಡೆಸುವುದು ನಿಮ್ಮಿಂದ ಸಾಧ್ಯವೆ?

   ಮಾಜಿ ಪತ್ನಿ ಬೈದರೇನಂತೆ, ಹಾಲಿ ಪತ್ನಿಯ ಅಭಿನಂದನೆ ಸಿಕ್ಕಿದೆ ಇಮ್ರಾನ್ ಗೆ!

   ಇಮ್ರಾನ್ ಖಾನ್ ಮಾತುಕತೆಗೆ ಸಂಬಂಧಿಸಿದಂತೆ ಹೀಗೊಂದು ಕುಹಕದ, ವಂಗ್ಯಭರಿತ, ವಿಡಂಬನಾತ್ಮಕ, ತಮಾಷೆಯ ಮಾತುಗಳು ಗಾಳಿಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ ತೇಲಾಡುತ್ತಿವೆ. ಇದೇ ಸಂದರ್ಭದಲ್ಲಿ ಯಾರೋ ಪುಣ್ಯಾತ್ಮರು ಹೇಳಿದ್ದಾರೆ : "ಸಂಸಾರಕ್ಕೂ ಮಾತುಕತೆಗೂ ಸಂಬಂಧವೇ ಇಲ್ಲ!"

   ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಎಲ್ಲಿ ಹೆಚ್ಚು ಮಾತುಗಳಿರುವುದಿಲ್ಲವೋ ಅಲ್ಲಿ ಸಂಸಾರ ನೌಕೆ ತೇಲುತ್ತ ಸಾಗುತ್ತಿರುತ್ತದೆ. ಮೌನವನ್ನೂ ಮೀರಿ ಮಾತುಗಳು ಗಡಿಗಳನ್ನು ದಾಟಿದರೆ ಸಂಸಾರ ನೌಕೆ ಮುಳುಗುತ್ತದೆ. ಹೆಚ್ಚು ಮಾತಾಡಿದರೂ ಕಷ್ಟ, ಬಿಟ್ಟರೂ ಕಷ್ಟ ಎನ್ನುವಂಥ ಕಾಲವಿದು. ಇನ್ನು ಇಮ್ರಾನ್ ಖಾನ್ ಸಂಸಾರದಲ್ಲಿ ಅದೇನಾಯಿತೋ ಆ ಅಲ್ಲಾಹುವೇ ಬಲ್ಲ!

   ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ!

   ಅದೇನೇ ಇರಲಿ, ಇಮ್ರಾನ್ ಖಾನ್ ಅವರು ಪಾಕ್ ಪ್ರಧಾನಿಯಾಗುತ್ತಾರೆ ಎಂಬ ಸುದ್ದಿ ಬರುತ್ತಿದ್ದಂತೆ ಅವರ ಜನ್ಮವನ್ನು ಜಾಲಾಡಿದ್ದ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರು, ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಇಮ್ರಾನ್ ಖಾನ್ ಪ್ರಕಟಿಸುತ್ತಿದ್ದಂತೆ, ತಮ್ಮ ಮಾಜಿ ಪತಿಯನ್ನು ಶ್ಲಾಘಿಸಿದ್ದಾರೆ.

   ಹೊಡೆತ ತಿಂದ ನಂತರ ಮಾತುಕತೆಯ ಭಿಕ್ಷೆ ಬೇಡುತ್ತಿರುವ ಇಮ್ರಾನ್ ಖಾನ್

   ರೆಹಮ್ ಖಾನ್ ಮಾತ್ರವಲ್ಲ, ಇಮ್ರಾನ್ ಖಾನ್ ಅವರ ಇನ್ನೊಬ್ಬ ಮಾಜಿ ಪತ್ನಿ ಜೆಮೀಮಾ ಗೋಲ್ಡ್ ಸ್ಮಿತ್ ಅವರು ಕೂಡ ಚಪ್ಪಾಳೆ ಹೊಡೆದು, ಇಮ್ರಾನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಜಿ ಪತ್ನಿಯರು ಹೊಗಳಿದ್ದಾರೆಂದು ಹಾಲಿ ಪತ್ನಿ ಬುಶ್ರಾ ಮನೇಕಾ ಮುನಿಸಿಕೊಂಡು ಗುಡ್ ಬೈ ಹೇಳದಿದ್ದರೆ ಅಷ್ಟೇ ಸಾಕು. ನಮ್ಮ ಭಾರತದಲ್ಲಿ ಎಂಥೆಂಥವರೋ ಇಮ್ರಾನ್ ಅವರ ಈ ನಡೆಯನ್ನು ಮುಕ್ತಕಂಠದಿಂದ ಸ್ವಾಗತಿಸುತ್ತಿರಬೇಕಾದರೆ, ಇಬ್ಬರು ಮಾಜಿ ಪತ್ನಿಯರು ಶ್ಲಾಘಿಸಿದರೆ ತಪ್ಪೇನಿದೆ?

   ಈ ಬಗ್ಗೆ ಟ್ವೀಟ್ ಮಾಡಿರುವ ರೆಹಮಾ ಖಾನ್ ಅವರು, ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತಿರುವುದು ಜಿನೀವಾ ಒಪ್ಪಂದದ ಭಾಗವಾಗಿದ್ದರೂ, ಯುದ್ಧ ಬೇಕೆಂದು ರಕ್ತ ಪಿಪಾಸುಗಳು ಕೂಗೆಬ್ಬಿಸಿರುವಾಗ, ಇಮ್ರಾನ್ ಖಾನ್ ಅವರು ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡಲು ಒಪ್ಪಿದ್ದು ಸ್ವಾಗತ ಎಂದಿದ್ದಾರೆ. ಇದು ಒಳ್ಳೆಯ ಸದ್ಭಾವನೆಯಿಂದ ಬಿಡುಗಡೆ ಮಾಡಿದ್ದಲ್ಲ, ಜಿನೀವಾ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಮತ್ತು ವಿಶ್ವದಾದ್ಯಂತ ಒತ್ತಡ ಬರುತ್ತಿರುವುದರಿಂದ ಹೆದರಿ ಹೀಗೆ ಮಾಡಿದ್ದಾರೆ ಎಂಬ ಟ್ವೀಟ್ ಗೆ ರೆಹಮ್ ಖಾನ್ ಅವರು ಪ್ರತಿಕ್ರಿಯಿಸಿದ ರೀತಿಯಿದು.

   ಮಾತುಕತೆಗೂ, ಹೆಂಡತಿಯರೊಡನೆ ಸಂಸಾರ ಹೂಡುವುದಕ್ಕೂ, ಅವರೊಂದಿಗೆ ಜಗಳವಾಡಿ ವಿಚ್ಛೇದನ ತೆಗೆದುಕೊಳ್ಳುವುದಕ್ಕೂ, ಯಶಸ್ವಿಯಾಗಿ ಆಡಳಿತ ನಡೆಸುವುದಕ್ಕೂ ಸಂಬಂಧವೇ ಇಲ್ಲ. ಆಡಳಿತವೇ ಬೇರೆ, ಸಂಸಾರವೇ ಬೇರೆ, ಹೆಂಡತಿಯರೂ ಬೇರೆ, ಮಾತುಕತೆಯೂ ಬೇರೆ! ಯಾಕೆ, 'ಹೆಂಡತಿ'ಯಿಂದ ದೂರವಿರುವವರು ಈಗ ಯಾರೂ ಉತ್ತಮವಾಗಿ ಆಡಳಿತ ನಡೆಸುತ್ತಿಲ್ಲವೆ? 'ಹೆಂಡತಿ'ಯೇ ಇಲ್ಲದವರು ಅಧಿಕಾರಕ್ಕಾಗಿ ತಹತಹಿಸುತ್ತಿಲ್ಲವೆ?

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Former wives Reham Khan and Jemima Goldsmith have praised Imran Khan, prime minister of Pakistan, for peace gesture. Imran Khan has agreed to release Indian air force pilot wing commander Abhinandan Varthaman after Pakistan captured him in PoK.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more