ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆರಾಷ್ಟ್ರದಲ್ಲಿ ಏನಾಗುತಿಹುದು?: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೈಗೆ ಕೋಳ

|
Google Oneindia Kannada News

ಇಸ್ಲಾಮಾಬಾದ್, ಜೂನ್ 6: ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪಡೆದಿರುವ ರಕ್ಷಣಾತ್ಮಕ ಜಾಮೀನು ಅವಧಿಯು ಮುಕ್ತಾಯವಾಗುತ್ತಿದ್ದಂತೆ ಅವರನ್ನು ಬಂಧಿಸಲಾಗುವುದು ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದಾರೆ.

ಕಳೆದ ಜೂನ್ 2 ರಂದು ಮೂರು ವಾರಗಳ ರಕ್ಷಣಾತ್ಮಕ ಜಾಮೀನು ಪಡೆದಿರುವ ಇಮ್ರಾನ್ ಖಾನ್ ಅನ್ನು ಅವರ ಬನಿ ಗಾಲಾ ನಿವಾಸದ ಹೊರಗೆ ನಿಯೋಜಿಸಲಾದ ಭದ್ರತಾ ಅಧಿಕಾರಿಗಳು ಬಂಧಿಸಲಿದ್ದಾರೆ ಎಂದು ರಾಣಾ ಸನಾವುಲ್ಲಾ ಹೇಳಿದ್ದಾರೆ.

ಇಮ್ರಾನ್ ಖಾನ್ ಹತ್ಯೆ ಸಂಚು; ಇಸ್ಲಾಮಾಬಾದ್‌ನಲ್ಲಿ 144 ಸೆಕ್ಷನ್ ಜಾರಿ ಇಮ್ರಾನ್ ಖಾನ್ ಹತ್ಯೆ ಸಂಚು; ಇಸ್ಲಾಮಾಬಾದ್‌ನಲ್ಲಿ 144 ಸೆಕ್ಷನ್ ಜಾರಿ

ಇಸ್ಲಾಮಾಬಾದ್‌ಗೆ ಪಿಟಿಐ ನಡೆಸುತ್ತಿದ್ದ ಎರಡನೇ ಬೃಹತ್ ಮೆರವಣಿಗೆಗೂ ಮುಂಚಿತವಾಗಿ, ಜೂನ್ 2ರಂದು ಪೇಶಾವರ ಹೈಕೋರ್ಟ್ (PHC) ಇಮ್ರಾನ್ ಖಾನ್‌ಗೆ ಮೂರು ವಾರಗಳ ರಕ್ಷಣಾತ್ಮಕ ಜಾಮೀನು ನೀಡಿತು.

ಪಾಕ್ ಮಾಜಿ ಪ್ರಧಾನಿ ವಿರುದ್ಧವೇ ದೇಶದ್ರೋಹದ ಕೇಸ್

ಪಾಕ್ ಮಾಜಿ ಪ್ರಧಾನಿ ವಿರುದ್ಧವೇ ದೇಶದ್ರೋಹದ ಕೇಸ್

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ಗಲಭೆ, ದೇಶದ್ರೋಹ, ಅವ್ಯವಸ್ಥೆ ಮತ್ತು ಫೆಡರೇಶನ್‌ನಲ್ಲಿ ಸಶಸ್ತ್ರ ದಾಳಿ ಸೇರಿದಂತೆ 24ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪ ಹೊರಿಸಲಾಗಿದೆ ಎಂದು ರಾಣಾ ಸನಾವುಲ್ಲಾ ಹೇಳಿದ್ದಾರೆ.

"ಜನರನ್ನು ಪ್ರಚೋದಿಸುವ ಮತ್ತು ನೈತಿಕ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸುವ ಮತ್ತು ವಿರೋಧಿಗಳನ್ನು ದೇಶದ್ರೋಹಿ ಎಂದು ಕರೆಯುವ ವ್ಯಕ್ತಿಯೊಬ್ಬರು ಪ್ರಜಾಪ್ರಭುತ್ವ ಸಮಾಜದಲ್ಲಿ ರಾಜಕೀಯ ಪಕ್ಷದ ಮುಖ್ಯಸ್ಥನಾಗುವುದು ಹೇಗೆ? ಸಾಧ್ಯ," ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಲಾಗಿದೆ.

ಭದ್ರತೆ ನೀಡಿದ ಅಧಿಕಾರಿಗಳಿಂದಲೇ ಇಮ್ರಾನ್ ಖಾನ್ ಬಂಧನ

ಭದ್ರತೆ ನೀಡಿದ ಅಧಿಕಾರಿಗಳಿಂದಲೇ ಇಮ್ರಾನ್ ಖಾನ್ ಬಂಧನ

ಪೇಶಾವರ ಹೈಕೋರ್ಟ್ ನೀಡಿರುವ ರಕ್ಷಣಾತ್ಮಕ ಜಾಮೀನು ಹಿನ್ನೆಲೆಯಲ್ಲಿ ಈಗಾಗಲೇ ಇಮ್ರಾನ್ ಖಾನ್ ಬನಿ ಗಲಾ ನಿವಾಸದ ಹೊರಗೆ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೀಗೆ ನಿಯೋಜಿಸಲಾಗಿರುವ ಅಧಿಕಾರಿಗಳೇ ನ್ಯಾಯಾಲಯವು ನೀಡಿದ ರಕ್ಷಣಾತ್ಮಕ ಜಾಮೀನಿನ ಅವಧಿ ಮುಗಿದ ನಂತರ ಇಮ್ರಾನ್ ಖಾನ್ ಅನ್ನು ಬಂಧಿಸುತ್ತಾರೆ ಎಂದು ಸಚಿವ ರಾಣಾ ಸನಾವುಲ್ಲಾ ಮಾಹಿತಿ ನೀಡಿದ್ದಾರೆ.

ಇಸ್ಲಾಮಾಬಾದ್‌ಗೆ ಆಗಮಿಸಿದ ಇಮ್ರಾನ್ ಖಾನ್‌ಗೆ ಭದ್ರತೆ

ಇಸ್ಲಾಮಾಬಾದ್‌ಗೆ ಆಗಮಿಸಿದ ಇಮ್ರಾನ್ ಖಾನ್‌ಗೆ ಭದ್ರತೆ

ಇಸ್ಲಾಮಾಬಾದ್‌ಗೆ ಆಗಮಿಸಿದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರನ್ನು ಸ್ವಾಗತಿಸುತ್ತೇವೆ ಮತ್ತು ಕಾನೂನಿನ ಪ್ರಕಾರ ಅವರಿಗೆ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಆಂತರಿಕ ಸಚಿವ ರಾಣಾ ಸನಾವುಲ್ಲಾ ಹೇಳಿದ್ದಾರೆ. ಇಮ್ರಾನ್ ಖಾನ್ ಪೇಶಾವರದಿಂದ ಇಸ್ಲಾಮಾಬಾದ್‌ಗೆ ಮರಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಬನಿ ಗಾಲಾ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಶನಿವಾರ ತಡರಾತ್ರಿಯೇ ಇಸ್ಲಾಮಾಬಾದ್ ಪೊಲೀಸರು ತಿಳಿಸಿದ್ದರು.

ಬನಿ ಗಾಲಾಗೆ ಇಮ್ರಾನ್ ಖಾನ್ ಆಗಮನ

ಬನಿ ಗಾಲಾಗೆ ಇಮ್ರಾನ್ ಖಾನ್ ಆಗಮನ

ಪಾಕಿಸ್ತಾನದ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರದಲ್ಲಿ ದೇಶ ತೊರೆದು ಹೋಗಿದ್ದ ಇಮ್ರಾನ್ ಖಾನ್, ಇತ್ತೀಚಿಗಷ್ಟೇ ವಾಪಸ್ ಸ್ವದೇಶಕ್ಕೆ ತೆರಳುವ ಮಾತನಾಡಿದ್ದರು. ತಾವು ಎಲ್ಲಿಯೇ ಇದ್ದರೂ, ಪಾಕಿಸ್ತಾನದ ಮಗನೇ ಎಂದು ಹೇಳಿಕೊಂಡಿದ್ದರು. ಅದರಂತೆ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಬನಿ ಗಾಲಾಗೆ ಆಗಮಿಸುವ ನಿರೀಕ್ಷೆಯ ಹಿನ್ನೆಲೆ ಬನಿ ಗಾಲಾ ಸುತ್ತಮುತ್ತ ಭದ್ರತೆಯನ್ನು ಬಲಪಡಿಸಲಾಗಿದೆ. ಇದರ ಜೊತೆಗೆ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

Recommended Video

Layer Shot ಜಾಹಿರಾತಿನ ವಿರುದ್ಧ ದೇಶದೆಲ್ಲೆಡೆ ಆಕ್ರೋಶ | #Trending | OneIndia Kannada

English summary
Former Pakistan PM Imran Khan to be arrested once protective bail ends, Says Pak Interior Minister Rana Sanaullah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X