ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯಸ್ಕರ ಸಿನಿಮಾ ತಾರೆಯರ ಫೋಟೋ ಹಾಕಿ, ಕಾಶ್ಮೀರದ ಗಲಾಟೆ ಎಂದ ಬಾಸಿತ್

By ಅನಿಲ್ ಆಚಾರ್
|
Google Oneindia Kannada News

ಇಸ್ಲಾಮಾಬಾದ್ (ಪಾಕಿಸ್ತಾನ), ಸೆಪ್ಟೆಂಬರ್ 3: ಭಾರತದಲ್ಲಿ ಪಾಕಿಸ್ತಾನದಿಂದ ಹೈಕಮಿಷನರ್ ಆಗಿದ್ದ ಅಬ್ದುಲ್ ಬಾಸಿತ್ ಸೋಮವಾರ ಒಂದು ಟ್ವೀಟ್ ಮಾಡಿ, ಆ ನಂತರ ಭಾರೀ ಮುಖಭಂಗಕ್ಕೆ ಈಡಾಗಿ, ಆ ಟ್ವೀಟ್ ತೆಗೆದುಹಾಕಿದ್ದಾರೆ. ಕಲ್ಲು ತೂರಾಟದಲ್ಲಿ ದೃಷ್ಟಿ ಕಳೆದುಕೊಂಡ ಕಾಶ್ಮೀರಿ ವ್ಯಕ್ತಿ ಎಂದು ವಯಸ್ಕರ ಚಿತ್ರಗಳ ತಾರೆಯೊಬ್ಬರ ಫೋಟೋ ರೀಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಆರ್ಥಿಕತೆ ಕುರಿತು ಪಾಕ್ ಪ್ರಧಾನಿಗೆ ಬಾಲಕನ ಪಾಠಪಾಕಿಸ್ತಾನದ ಆರ್ಥಿಕತೆ ಕುರಿತು ಪಾಕ್ ಪ್ರಧಾನಿಗೆ ಬಾಲಕನ ಪಾಠ

ಪಾಕಿಸ್ತಾನ ಮೂಲದ ಪತ್ರಕರ್ತರಾದ ನಾಯಲಾ ಇನಾಯತ್ ಅವರು ಬಾಸಿತ್ ಟ್ವಿಟ್ಟರ್ ಖಾತೆಯ ಟ್ವೀಟ್ ಗಳ ಸ್ಕ್ರೀನ್ ಶಾಟ್ ಗಳನ್ನು ಹಾಕಿದ್ದಾರೆ. ಭಾರತಕ್ಕೆ ಹೈಕಮಿಷನರ್ ಆಗಿದ್ದ ಅಬ್ದುಲ್ ಬಾಸಿತ್ ಅವರು ಜಾನಿ ಸಿನ್ಸ್ ಫೋಟೋ ಹಾಕಿ, ಕಲ್ಲು ತೂರಾಟದಲ್ಲಿ ದೃಷ್ಟಿ ಕಳೆದುಕೊಂಡ ಕಾಶ್ಮೀರಿ ವ್ಯಕ್ತಿ ಇವರು. ಇವು ಯಾವವೂ ನಿಜವಾದವಲ್ಲ ಎಂದಿದ್ದಾರೆ.

ಜಮ್ಮು- ಕಾಶ್ಮೀರದ ಅನಂತನಾಗ್ ನ ಯೂಸೂಫ್ ಕಲ್ಲು ತೂರಾಟದಲ್ಲಿ ದೃಷ್ಟಿ ಕಳೆದುಕೊಂಡಿದ್ದು... ಈತನಿಗಾಗಿ ದಯವಿಟ್ಟು ನಿಮ್ಮ ಧ್ವನಿ ಎತ್ತಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರೀಟ್ವೀಟ್ ಮಾಡಿ, ಆ ನಂತರ ತೆಗೆದುಹಾಕಿದ್ದಾರೆ. ಪಾಕಿಸ್ತಾನೀಯರು ಹೀಗೆ ಮಾಡಿ, ಮುಜುಗರ ಅನುಭವಿಸುತ್ತಿರುವುದು ಇದು ಮೊದಲ ಬಾರಿಯಲ್ಲ.

Former Pakistan Envoy Used Adult Movie Star Photo As Kahmiri

ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು, ಎರಡು ಕೇಂದ್ರಾಡಳಿತ ಪ್ರದೇಶವಾಗಿ ಭಾರತವು ಘೋಷಣೆ ಮಾಡಿದ ಮೇಲೆ ಪಾಕಿಸ್ತಾನದ ಕಡೆಯಿಂದ ಸುಳ್ಳು ಸುದ್ದಿ ಹಬ್ಬುವ ಪ್ರಮಾಣ ವಿಪರೀತ ಹೆಚ್ಚಾಗಿದೆ.

English summary
Abdul Basit, former Pakistan envoy retweeted adult movie star photo as Kashmiri, who lost vision in stone pelting. Later he deleted the tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X