ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 27ಕ್ಕೆ ಶಿಂಜೋ ಅಬೆಗೆ 2ನೇ ಬಾರಿ ನಮನ, ವಿವಿಧ ದೇಶದ ಗಣ್ಯರು ಭಾಗಿ

|
Google Oneindia Kannada News

ಟೋಕಿಯೊ, ಜುಲೈ, 22: ಹತ್ಯೆಗೀಡಾದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ 2ನೇ ಬಾರಿಗೆ ಸೆಪ್ಟೆಂಬರ್ 27ರಂದು ನಡೆಯಲಿದೆ ಎಂದು ಸರ್ಕಾರ ಶುಕ್ರವಾರ ಘೋಷಿಸಿದೆ. ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ವಿದೇಶಿ ನಾಯಕರು ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಮಾರಂಭವು ಟೋಕಿಯೊದ ನಿಪ್ಪಾನ್ ಬುಡೋಕನ್‌ನಲ್ಲಿ ನಡೆಯಲಿದೆ. ಈ ಸ್ಥಳ ಸಂಗೀತ ಕಚೇರಿಗಳು ಮತ್ತು ಕ್ರೀಡಾಕೂಟಗಳನ್ನು ಆಯೋಜಿಸಿದ ದೊಡ್ಡ ಸ್ಥಳವಾಗಿದೆ. 1967ರಲ್ಲಿಯೂ ಜಪಾನ್‌ ಮಾಜಿ ಪ್ರಧಾನಿಯೊಬ್ಬರ ಅಂತ್ಯಕ್ರಿಯೆಗೂ ಇದೇ ಸ್ಥಳವನ್ನು ಬಳಸಲಾಗಿತ್ತು.

ಟೋಕಿಯೊ ಒಲಿಂಪಿಕ್ಸ್ 2020: ಲಕ್ಷಾಂತರ ವೀಕ್ಷಣೆಯನ್ನು ದಾಖಲೆ ಟೋಕಿಯೊ ಒಲಿಂಪಿಕ್ಸ್ 2020: ಲಕ್ಷಾಂತರ ವೀಕ್ಷಣೆಯನ್ನು ದಾಖಲೆ

ಜಪಾನ್‌ ಸರ್ಕಾರದ ವಕ್ತಾರ ಹಿರೋಕಾಜು ಮಾಟ್ಸುನೊ ಮಾತನಾಡಿ, ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿ ಶಿಂಜೋ ಅಬೆ ಅವರು ದಾಖಲೆ ಬರೆದಿದ್ದಾರೆ. ಅವರ ಸಾಧನೆಗಳು ಮತ್ತು ವಿದೇಶಿ ನಾಯಕರೊಂದಿಗಿನ ಅವಿನಾಭವ ಸಂಬಂಧಗಳನ್ನು ಕಾಪಾಡಿಕೊಂಡು ಬಂದಿದ್ದರು ಎಂದರು. ನಾವು ವಿದೇಶಿ ಗಣ್ಯರನ್ನು ಆಹ್ವಾನಿಸುತ್ತೇವೆ. ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶಗಳಿಗೆ ಈ ಬಗ್ಗೆ ಸಮಾರಂಭದ ಬಗ್ಗೆ ತಿಳಿಸಲಾಗುವುದು ಎಂದು ಅವರು ಹೇಳಿದರು.

Former Japan Prime Minister Shinzo Abes funeral on September 27

ಇದೇ ವರ್ಷದ ಜುಲೈ 8ರಂದು ಪಶ್ಚಿಮ ನಗರ ನಾರಾದಲ್ಲಿ ರಾಜಕೀಯ ಪ್ರಚಾರ ಸಂದರ್ಭದಲ್ಲಿ ಅಬೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಪೊಲೀಸರು ಆರೋಪಿ ಟೆಟ್ಸುಯಾ ಯಮಗಾಮಿ ಎಂಬುವನನ್ನು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿಯಲಾಗಿತ್ತು. ಏಕೀಕರಣ ಚರ್ಚ್‌ಗೆ ಸಂಬಂಧಿಸಿದಂತೆ ಅಬೆಯನ್ನು ಗುರಿಯಾಗಿಸಿದ್ದಾರೆಂದು ಮಾಹಿತಿ ಬಹಿರಂಗವಾಗಿದೆ.

ಆರೋಪಿ ಯಮಗಾಮಿಯ ತಾಯಿ ಚರ್ಚ್‌ಗೆ ದೊಡ್ಡ ದೇಣಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಇದು ಕುಟುಂಬದ ಆರ್ಥಿಕತೆಗೂ ಆಗಿತ್ತು ಎಂದು ಯಮಗಾಮಿ ಆರೋಪಿಸಿದ್ದಾನೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಅವರ ಎರಡನೇ ಅಂತ್ಯಕ್ರಿಯೆ ನಡೆಯುತ್ತಿದ್ದು, ರಾಜಕೀಯ ನಾಯಕರ ಸಮಾರಂಭಗಳಿಗೆ ಸಾರ್ವಜನಿಕರ ಹಣವನ್ನು ಖರ್ಚು ಮಾಡುವುದನ್ನು ಅಲ್ಲಿ ಕೆಲವು ವಿರೋಧ ಪಕ್ಷಗಳ ನಾಯಕರು ಪ್ರಶ್ನಿಸುವುದರೊಂದಿಗೆ ಆಕ್ರೋಶ ಹೊರಹಾಕಿದ್ದಾರೆ. ಅಂತ್ಯಕ್ರಿಯೆಯನ್ನು ನಿಲ್ಲಿಸಲು ತಡೆಯಾಜ್ಞೆ ನೀಡುವಂತೆ ವಿಪಕ್ಷಗಳ ಕಾರ್ಯಕರ್ತರ ಗುಂಪು ಟೋಕಿಯೊ ನ್ಯಾಯಾಲಯವನ್ನು ಕೇಳಿಕೊಂಡಿದೆ.

ಶಿಂಜೊ ಅಬೆ ಅವರು ಜಪಾನ್‌ನ ಪ್ರಸಿದ್ಧ ರಾಜಕಾರಣಿಯಾಗಿದ್ದು, ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ 2020ರಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕವೂ ಸಾರ್ವಜನಿಕ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಉಳಿಸಿಕೊಂಡರು. ಅಷ್ಟೇ ಅಲ್ಲ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಜೊತೆಗೂ ಅವರು ಅವಿನಾಭವ ಸಂಬಂಧ ಹೊಂದಿದವರಾಗಿದ್ದಾರು. ಹೀಗೆ ಅವರ ಆಡಳಿತದಲ್ಲಿ ಧನಾತ್ಮಕ ಚಿಂತನೆಗಳನ್ನು ಮೂಡಿಸಿ ಜನರ ನೆಚ್ಚಿನ ನಾಯಕನಾಗಿ ಹೊರಹೊಮ್ಮಿದವರಾಗಿದ್ದರು.

Former Japan Prime Minister Shinzo Abes funeral on September 27

ಶಿಂಜೊ ಸಾವಿನ ನಂತರವೂ ಜಪಾನ್‌ನಲ್ಲಿ ಅವರ ಮೇಲಿನ ಅಭಿಮಾನವಂತೂ ಕಿಂಚಿತ್ತೂ ಕಡಿಮೆಯಾಗಿಲ್ಲ. ಗುಂಡೇಟಿನಿಂದ ಸಾವನ್ನಪ್ಪಿದ್ದ ಶಿಂಜೊ ಅವರಿಗೆ ಈ ಮೊದಲು ಅಂತ್ಯಕ್ರಿಯೆಯನ್ನು ಮಾಡಲು ಜನರು ಸರದಿಯಲ್ಲಿ ಬಂದಿದ್ದರು. ಮತ್ತೆ ಇದೀಗ 2ನೇ ಬಾರಿ ಅಂತ್ಯಕ್ರಿಯೆ ಮಾಡಲು ಜನರು ಸಿದ್ಧರಾಗಿದ್ದಾರೆ.

Recommended Video

KLರಾಹುಲ್ ಗೆ ಕೊರೋನಾ ಪಾಸಿಟಿವ್: ಕಾಯಿಲೆಯಲ್ಲೇ ಕಾಲ ಕಳೆಯುವಂತಾಯ್ತು ಕನ್ನಡಿಗನ ಪರಿಸ್ಥಿತಿ | *Cricket | OneIndia

English summary
Japan government announced on Friday that the second funeral of slain former Japanese prime minister Shinzo Abe will be held on September 27. Foreign leaders are also expected to attend Shinzo Abe's funeral. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X