ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ ಮಾಜಿ ಅಧ್ಯಕ್ಷ ಸರ್ಕೋಜಿಗೆ ಜೈಲು ಭೀತಿ

By Mahesh
|
Google Oneindia Kannada News

ಪ್ಯಾರಿಸ್‌, ಜು.2: ಭ್ರಷ್ಟಾಚಾರ ಪ್ರಕರಣವೊಂದರ ತನಿಖೆಯ ಮೇಲೆ ಪ್ರಭಾವ ಬೀರಿದ ಆರೋಪಕ್ಕೆ ಗುರಿಯಾಗಿರುವ ಫ್ರಾನ್ಸಿನ ಮಾಜಿ ಅಧ್ಯಕ್ಷ ನಿಕೋಲಸ್‌ ಸರ್ಕೋಜಿ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದ್ದು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ಸರ್ಕೊಜಿ ಮೇಲಿನ ಭ್ರಷ್ಟಾಚಾರ ಆರೋಪಗಳು ಸಾಬೀತಾದರೆ ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಪಶ್ಚಿಮ ಪ್ಯಾರಿಸ್‌ನ ಉಪನಗರವಾದ ನಾಂಟೆರೆಯ ಪೊಲೀಸ್‌ ಠಾಣೆಯ ಮುಂದೆ ನಿಕೋಲಸ್‌ ಸರ್ಕೋಜಿ ಅವರು ಸ್ವತಃ ಹಾಜರಾದರು. ಸರ್ಕೋಜಿ ಅವರನ್ನು ಪೊಲೀಸರು 24 ತಾಸುಗಳ ಕಾಲ ಅಥವಾ ಅಗತ್ಯ ಬಿದ್ದಲ್ಲಿ ಮತ್ತೂಂದು ದಿನ ವಿಚಾರಣೆಗೆ ಗುರಿಪಡಿಸಿ, ಆ ಬಳಿಕ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗಿತ್ತು. ಅದರೆ, 15 ಗಂಟೆಗಳ ಸತತ ವಿಚಾರಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ನಿಕೋಲಸ್‌ ಸರ್ಕೋಜಿ ಅವರ ಪರ ವಕೀಲರಾದ ಥೈರಿ ಹೆಜೊಗ್ ಸೇರಿದಂತೆ ಇಬ್ಬರು ಮ್ಯಾಜಿಸ್ಟ್ರೇಟ್‌ಗಳನ್ನು ಕೆಲದಿನಗಳ ಹಿಂದೆಯಷ್ಟೇ ತನಿಖಾಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ಸರ್ಕೋಜಿ ಅವರನ್ನು ಬಂಧಿಸಲಾಗಿದೆ.

Former French President Sarkozy charged with corruption

ಮತ್ತೆ ಅಧ್ಯಕ್ಷನಾಗುವ ಕನಸಿದೆ: ಸದಾ ಒಂದಿಲ್ಲೊಂದು ಪ್ರಕರಣದಲ್ಲಿ ಸಿಲುಕಿ ಸುದ್ದಿಗೆ ಗ್ರಾಸವಾಗುವ 59 ವರ್ಷ ವಯಸ್ಸಿನ ಸರ್ಕೊಜಿ ಅವರಿಗೆ 2017ರಲ್ಲಿ ಮತ್ತೊಮ್ಮೆ ಫ್ರಾನ್ಸಿನ ಅಧ್ಯಕ್ಷ ಪಟ್ಟ ಅಲಂಕರಿಸುವ ಕನಸಿದೆ.[ಸರ್ಕೋಜಿಗೆ ಅಚ್ಚರಿಯ ಸೋಲು]

2012ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಫ್ರಾಂಕೋಯಿಸ್‌ ಹೋಲಾಂಡೆ ಅವರ ಎದುರು ಸರ್ಕೋಜಿ ಸೋಲು ಅನುಭವಿಸಿದ್ದರು. 2017ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಗೆಲ್ಲುವ ವಿಶ್ವಾಸದಲ್ಲಿದ್ದ ಸರ್ಕೋಜಿ ಅವರಿಗೆ ಈ ಪ್ರಕರಣ ತೀವ್ರ ಹಿನ್ನಡೆ ಉಂಟು ಮಾಡಿದೆ.

2007ರ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವೊಂದರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿ ಸಾಕ್ಷಿ ನಾಶ ಹಾಗೂ ಅಧಿಕಾರ ಪ್ರಭಾವ ಬೀರಲು ಯತ್ನಿಸಿದ ಆರೋಪವನ್ನು ಸರ್ಕೊಜಿ ಹೊತ್ತುಕೊಂಡಿದ್ದಾರೆ. ಹಲವು ವೃತ್ತಿಪರ ಗೌಪ್ಯ ವಿಷಯಗಳನ್ನು ಬಹಿರಂಗಗೊಳಿಸಲಾಗಿದೆ ಎಂಬ ಸುದ್ದಿಯಿದೆ.

ಗಢಾಪಿ ಜತೆ ಏನು ಸಂಬಂಧ?: ಲಿಬಿಯಾ ದಂಡ ನಾಯಕ ಗಡಾಫಿ ಅವರಿಂದಲೂ ಸರ್ಕೊಜಿ ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಆದರೆ, ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೊಲಸ್ ಸರ್ಕೊಜಿ ಅವರ ಆದೇಶದ ಮೇರೆಗೆ ಫ್ರಾನ್ಸ್‌ನ ಗುಪ್ತ ದಳದ ಸಿಬ್ಬಂದಿ ಲಿಬಿಯಾದ ಮುಖಂಡ ಮುಮ್ಮರ್ ಗಡಾಫಿಯನ್ನು ಹತ್ಯೆ ಮಾಡಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿತ್ತು.[ಗಡಾಫಿ ಯುಗ ಅಂತ್ಯ, ಸೆಕ್ಸ್ ಸೀಕ್ರೇಟ್ಸ್ ಜೀವಂತ]

ವಿಶೇಷ ಫೋನ್ ಬಳಸಿ ಪಾಲ್ ಬಿಸ್ಮುತ್ ಎಂಬ ಹೆಸರಿನಲ್ಲಿ ತನ್ನ ವಕೀಲರೊಡನೆ ಸರ್ಕೊಜಿ ಮಾತನಾಡುತ್ತಿದರು ಎನ್ನಲಾಗಿದೆ. ಸರ್ಕೊಜಿ ತನ್ನ ಮೂರನೇ ಪತ್ನಿ ಮಾಜಿ ರೂಪದರ್ಶಿ ಕಾರ್ಲಾ ಬ್ರೂನಿ ಜತೆ ನೆಲೆಸುತ್ತಿದ್ದ ಬಂಗಲೆ ಮೇಲೂ ಫ್ರೆಂಚ್ ತನಿಖಾಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಸರ್ಕೊಜಿಗೆ 5 ವರ್ಷ ಜೈಲುಶಿಕ್ಷೆ ಹಾಗೂ 5,00,000 ಯುರೋ ದಂಡ ವಿಧಿಸಲಾಗುತ್ತದೆ. ಈ ಹಿಂದೆ 2011ರಲ್ಲಿ ಸರ್ಕೊಜಿ ಅವರ ಗುರು ಜಾಕ್ವಸ್ ಚಿರಾಕ್ ಅವರು ಇದೇ ರೀತಿ ಭ್ರಷ್ಟಾಚಾರ ಆರೋಪ ಹೊತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.ಆದರೆ, ಮಾಜಿ ಅಧ್ಯಕ್ಷರೊಬ್ಬರ ಬಂಧನವಾಗಿರುವುದು ಫ್ರಾನ್ಸಿನಲ್ಲಿ ಇದೇ ಮೊದಲು.

English summary
Former French President President Nicholas Sarkozy has been charged with corruption and influence peddling, French prosecutors said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X