ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ಪ್ರಕರಣ : ಬಾಂಗ್ಲಾ ಮಾಜಿ ಪ್ರಧಾನಿಗೆ 7 ವರ್ಷ ಜೈಲು

|
Google Oneindia Kannada News

ಢಾಕಾ, ಅಕ್ಟೋಬರ್ 29 : ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಗ್ಲಾದೇಶ ಮಾಜಿ ಪ್ರಧಾನಿ ಖಲೀದಾ ಜಿಯಾ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅವರಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶ ನೀಡಲಾಗಿದೆ.

ಸೋಮವಾರ ಖಲೀದಾ ಜಿಯಾ ಮೇಲಿದ್ದ ಭ್ರಷ್ಟಾಚಾರ ಪ್ರಕರಣದ ತೀರ್ಪು ಪ್ರಕಟವಾಗಿದ್ದು 7 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. 73 ವರ್ಷದ ಖಲೀದಾ ಜಿಯಾ ಅವರು ಹಣ ದುರುಪಯೋಗದ ಮತ್ತೊಂದು ಪ್ರಕರಣದಲ್ಲಿ 5 ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ಪತ್ರಕರ್ತೆಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳುಬಾಂಗ್ಲಾದೇಶದಲ್ಲಿ ಪತ್ರಕರ್ತೆಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು

Former Bangladesh PM Khaleda Zia sentenced to 7 years jail

ಖಲೀದಾ ಜಿಯಾ ಎರಡು ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು. ವಿರೋಧ ಪಕ್ಷದ ನಾಯಕಿಯಾಗಿಯೂ ಕೆಲಸ ಮಾಡಿದ್ದರು. ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ತಡೆ ನೀಡುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಗ್ಲಾದೇಶದ ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ನಾಪತ್ತೆಯಾಗಿ 9 ವರ್ಷದ ಬಳಿಕ ಪ್ರತ್ಯಕ್ಷವಾಯ್ತು 'ದೆವ್ವದ ಹಡಗು'!ನಾಪತ್ತೆಯಾಗಿ 9 ವರ್ಷದ ಬಳಿಕ ಪ್ರತ್ಯಕ್ಷವಾಯ್ತು 'ದೆವ್ವದ ಹಡಗು'!

ಖಲೀದಾ ಜಿಯಾ ಅವರು 2018ರ ಫೆಬ್ರವರಿಯಿಂದ ಜೈಲಿನಲ್ಲಿದ್ದಾರೆ. ಹಣ ದುರುಪಯೋಗ ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯ 5 ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಈಗ ಭ್ರಷ್ಟಾಚಾರ ಪ್ರಕರಣದಲ್ಲಿ 7 ವರ್ಷಗಳ ಶಿಕ್ಷೆಯಾಗಿದೆ.

ಅಕ್ರಮ ಶಸ್ತ್ರಾಸ್ತ್ರ: ಬೆಂಗಳೂರಲ್ಲಿ 13 ಬಾಂಗ್ಲರ ಬಂಧನಅಕ್ರಮ ಶಸ್ತ್ರಾಸ್ತ್ರ: ಬೆಂಗಳೂರಲ್ಲಿ 13 ಬಾಂಗ್ಲರ ಬಂಧನ

ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಮುಖ್ಯಸ್ಥರಾಗಿದ್ದ ಖಲೀದಾ ಜಿಯಾ ಅವರು ಜಿಯಾ ಆರ್ಫನೇಜ್‌ ಟ್ರಸ್ಟ್‌ಗೆ ಮೀಸಲಾಗಿದ್ದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ 5 ವರ್ಷದ ಶಿಕ್ಷೆ ಅನುಭವಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಖಲೀದಾ ಜಿಯಾ ಪುತ್ರ ತಾರೀಕ್ ರೆಹಮಾನ್ ಸೇರಿದಂತೆ ಹಲವು ಆರೋಪಿಗಳಿದ್ದು, ಎಲ್ಲರಿಗೂ 10 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.

English summary
Former Bangladesh Prime Minister Khaleda Zia sentenced to 7 years in jail in corruption case. 73 year old Khaleda Zia two time prime minister of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X