ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ ಗುಳುಂ ಆರೋಪದಲ್ಲಿ ಬಾಂಗ್ಲಾ ಮಾಜಿ ಪ್ರಧಾನಿಗೆ 5 ವರ್ಷ ಜೈಲು

|
Google Oneindia Kannada News

ಢಾಕಾ, ಫೆಬ್ರವರಿ 8: ವಿರೋಧ ಪಕ್ಷದ ನಾಯಕಿ- ಮಾಜಿ ಪ್ರಧಾನಿ ಖಲೀದಾ ಜಿಯಾ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಗುರುವಾರ ಬಾಂಗ್ಲಾದೇಶದ ಕೋರ್ಟ್ ತೀರ್ಪು ನೀಡಿದೆ. ಹಣಕಾಸು ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ಪ್ರಮಾಣ ಘೋಷಣೆ ಆಗಿದೆ.

ಅನಾಥರಿಗಾಗಿ ಸ್ಥಾಪಿಸಿದ್ದ ಟ್ರಸ್ಟ್ ನಿಂದ 2,52,000 ಅಮೆರಿಕನ್ ಡಾಲರ್ ದುರ್ಬಳಕೆ ಮಾಡಿಕೊಂಡ ಆರೋಪ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ ನಾಯಕಿ ಖಲೀದಾ ಜಿಯಾ ಮೇಲಿತ್ತು. ಈ ಆರೋಪ ರಾಜಕೀಯ ಪ್ರೇರಿತವಾದದ್ದು ಎಂದು ಜಿಯಾ ಸಮರ್ಥಿಸಿಕೊಂಡಿದ್ದರು. ಆದರೆ ಆ ವಾದವು ಕೋರ್ಟ್ ನಲ್ಲಿ ಬಿದ್ದುಹೋಗಿದ್ದು, ಜಿಯಾಗೆ ಶಿಕ್ಷೆ ಆಗಿದೆ.

ಬಾಂಗ್ಲಾದೇಶಕ್ಕೆ ಭಾರತದಿಂದ 29 ಸಾವಿರ ಕೋಟಿ ರು. ಸಾಲಬಾಂಗ್ಲಾದೇಶಕ್ಕೆ ಭಾರತದಿಂದ 29 ಸಾವಿರ ಕೋಟಿ ರು. ಸಾಲ

"ಖಲೀದಾ ಜಿಯಾ ಅವರ ವಿರುದ್ಧದ ಆರೋಪ ಕೋರ್ಟ್ ನಲ್ಲಿ ಸಾಬೀತಾಗಿದೆ. ಆಕೆಯ ದೈಹಿಕ ಹಾಗೂ ಸಾಮಾಜಿಕ ಸ್ಥಿತಿ ಗಮನಿಸಿ ಸೆಕ್ಷನ್ 409 ಹಾಗೂ 109ರ ಅನ್ವಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ" ಎಂದು ಜಡ್ಜ್ ಅಖ್ತರುಜ್ಮಾನ್ ತಿಳಿಸಿದ್ದಾರೆ.

Former Bangladesh PM Khaleda Zia Gets 5 Years Jail for corruption charges

ಈ ಪ್ರಕರಣದಲ್ಲಿ ಸಹ ಆರೋಪಿ ಆಗಿರುವ ಖಲೀದಾ ಜಿಯಾ ಮಗ ತಾರಿಖ್ ರೆಹ್ಮಾನ್ ಮತ್ತು ಇತರ ನಾಲ್ವರಿಗೆ ಹತ್ತು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಇದಕ್ಕೂ ಮುನ್ನ ರಕ್ಷಣಾ ಪಡೆ ಹಾಗೂ ವಿರೋಧ ಪಕ್ಷದ ಪರವಾದ ಪ್ರತಿಭಟನಾನಿರತರ ಮಧ್ಯೆ ಗಲಭೆ ಏರ್ಪಟ್ಟಿತು. ಈ ವೇಳೆ ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾದವು.

English summary
Bangladesh court sentenced opposition leader and former PM Khaleda Zia to 5 years in jail on Thursday after convicting the two-time former premier of embezzling money meant for an orphanage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X