ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಧರಿಸದ ವಿದೇಶಿಗರಿಗೆ ಈ ನಗರದಲ್ಲಿ ನೀಡುವ ಶಿಕ್ಷೆ ಏನು ಗೊತ್ತೇ?

|
Google Oneindia Kannada News

ಡೆನ್ಪಾಸರ್, ಜನವರಿ 20: ಕೋವಿಡ್ ಹರಡುವುದನ್ನು ತಡೆಯಲು ಅನೇಕ ದೇಶಗಳಲ್ಲಿ ಜನರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದು ಸೇರಿದಂತೆ ವಿವಿಧ ಶಿಕ್ಷೆಗಳನ್ನು ನೀಡಲಾಗುತ್ತಿದೆ. ಮಾಸ್ಕ್ ಧರಿಸದ ವಿದೇಶಿಗರಿಗೆ ಅನೇಕ ಕಡೆ ಬುದ್ದಿಮಾತು ಹೇಳಿ ಬಿಟ್ಟ ಘಟನೆಗಳು ನಡೆದಿದೆ. ಆದರೆ ಇಂಡೋನೇಷ್ಯಾದ ನಗರವೊಂದರಲ್ಲಿ ಮಾಸ್ಕ್ ತೊಡಲು ಮರೆತ ವಿದೇಶಿಗರಿಗೆ ವಿಭಿನ್ನ ಶಿಕ್ಷೆ ನೀಡಲಾಗುತ್ತಿದೆ.

ಪ್ರವಾಸಿಗರ ನೆಚ್ಚಿನ ತಾಣವಾದ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಮಾಸ್ಕ್ ಧರಿಸದೆ ಸಿಕ್ಕಿಬಿದ್ದ ವಿದೇಶಿಗರಿಗೆ ಪುಶ್‌ಅಪ್ ಮಾಡುವ ಶಿಕ್ಷೆ ವಿಧಿಸಲಾಗುತ್ತಿದೆ.

ತಾಂತ್ರಿಕ ದೋಷದಿಂದ 1000 ಡೋಸ್ ಕೊವಿಶೀಲ್ಡ್ ಲಸಿಕೆ ವ್ಯರ್ಥ!ತಾಂತ್ರಿಕ ದೋಷದಿಂದ 1000 ಡೋಸ್ ಕೊವಿಶೀಲ್ಡ್ ಲಸಿಕೆ ವ್ಯರ್ಥ!

ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡೋನೇಷ್ಯಾದ ಬಾಲಿ ದ್ವೀಪದ ಅಧಿಕಾರಿಗಳು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ತೊಡುವುದನ್ನು ಕಳೆದ ವರ್ಷ ಕಡ್ಡಾಯಗೊಳಿಸಿದ್ದರು. ಅನೇಕ ಪ್ರವಾಸಿಗರು ಭದ್ರತಾ ಅಧಿಕಾರಿಗಳ ನಡುವೆ ಪುಶ್ ಅಪ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ.

ದಂಡ ಇಲ್ಲದಿದ್ದರೆ ಪುಶ್-ಅಪ್

ದಂಡ ಇಲ್ಲದಿದ್ದರೆ ಪುಶ್-ಅಪ್

ಇತ್ತೀಚಿನ ದಿನಗಳಲ್ಲಿ ಮುಖಕ್ಕೆ ಯಾವುದೇ ರೀತಿ ರಕ್ಷಣೆ ಹೊಂದಿರದ ಅನೇಕ ವಿದೇಶಿ ಪ್ರವಾಸಿಗರನ್ನು ಅಧಿಕಾರಿಗಳು ಹಿಡಿದಿದ್ದಾರೆ. ಇಲ್ಲಿನ ಕಾನೂನು ಪಾಲಿಸದ ವಿದೇಶಿಗರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ಕೆಲವರು ತಮ್ಮ ಬಳಿ ಅಷ್ಟು ಪ್ರಮಾಣದ ನಗದು ಇಲ್ಲ ಎಂದು ತಪ್ಪಿಸಿಕೊಳ್ಳಲು ನೋಡುತ್ತಾರೆ. ಅಂತಹವರಿಗೆ ಪುಶ್-ಅಪ್ ಮಾಡುವ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಭದ್ರತಾ ಅಧಿಕಾರಿ ಗಸ್ಟಿ ಅಗುಂಗ್ ಕೆಟುಟ್ ಸೂರ್ಯನೆಗರ ತಿಳಿಸಿದ್ದಾರೆ.

ಏಳು ಡಾಲರ್ ದಂಡ

ಏಳು ಡಾಲರ್ ದಂಡ

70ಕ್ಕೂ ಅಧಿಕ ವಿದೇಶಿಗರು 100,000 ರೂಪಾಯಿ (7 ಡಾಲರ್) ದಂಡವನ್ನು ತೆತ್ತಿದ್ದಾರೆ. ಇನ್ನು ಹಣವಿಲ್ಲ ಎಂದ ಸುಮಾರು 30 ಮಂದಿಗೆ ಪುಶ್ ಅಪ್ ಶಿಕ್ಷೆ ನೀಡಲಾಗಿದೆ. ತಮ್ಮೊಂದಿಗೆ ಮಾಸ್ಕ್ ಕೊಂಡೊಯ್ಯದ ಜನರಿಗೆ 50ರವರೆಗೂ ಪುಶ್‌ಅಪ್ ಮಾಡುವ ಶಿಕ್ಷೆ ವಿಧಿಸಿದರೆ, ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸದ ಜನರಿಗೆ 15 ಪುಶ್‌ಅಪ್ ಮಾಡುವಂತೆ ಸೂಚಿಸಲಾಗುತ್ತಿದೆ.

ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾ

ನೆಪಗಳನ್ನು ಹೇಳುವ ಜನರು

ನೆಪಗಳನ್ನು ಹೇಳುವ ಜನರು

ತಮಗೆ ಈ ನಿಯಮ ತಿಳಿದಿಲ್ಲ, ಮಾಸ್ಕ್ ತರಲು ಮರೆತು ಹೋಯಿತು, ಮಾಸ್ಕ್ ಒದ್ದೆಯಾಗಿದೆ ಅಥವಾ ಹರಿದುಹೋಗಿದೆ ಹೀಗೆ ಅನೇಕರು ಒಂದೊಂದು ನೆಪಗಳನ್ನು ಹೇಳುತ್ತಿದ್ದಾರೆ. ಆದರೆ ಈ ಎಲ್ಲ ಕಾರಣಗಳಿಗೆ ಮಾನ್ಯತೆ ನೀಡುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಿಂದ ಹೊರದಬ್ಬುವ ಎಚ್ಚರಿಕೆ

ದೇಶದಿಂದ ಹೊರದಬ್ಬುವ ಎಚ್ಚರಿಕೆ

ಇಂಡೋನೇಷ್ಯಾದಲ್ಲಿ ಕೋವಿಡ್ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಪ್ರವಾಸೋದ್ಯಮ ಆಧಾರಿತ ಆರ್ಥಿಕತೆಯಾಗಿರುವುದರಿಂದ ಪ್ರವಾಸಿ ತಾಣಗಳು ವಿದೇಶಿಗರಿಗೆ ತೆರೆದಿವೆ. ಆದರೆ ಕೋವಿಡ್ ನಿಯಮಗಳನ್ನು ಪಾಲಿಸದ ವಿದೇಶಿಗರನ್ನು ಮುಲಾಜಿಲ್ಲದೆ ದೇಶದಿಂದ ಹೊರಹಾಕುವುದಾಗಿ ಬಾಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮಕ್ಕಳಿಗೆ ಯಾವ ಕೊರೊನಾ ಲಸಿಕೆ ಸೂಕ್ತ; ಏಮ್ಸ್ ನಿರ್ದೇಶಕರ ಸಲಹೆಮಕ್ಕಳಿಗೆ ಯಾವ ಕೊರೊನಾ ಲಸಿಕೆ ಸೂಕ್ತ; ಏಮ್ಸ್ ನಿರ್ದೇಶಕರ ಸಲಹೆ

English summary
Foreigners forced to do 50 push-ups for not wearing masks in island Bali of Indonesia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X