• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೋರ್ಬ್ಸ್ ವಿಶ್ವದ ಅತ್ಯಂತ ಪ್ರಭಾವಿ ನಾಯಕರು: ಮೋದಿಗೆ ಎಷ್ಟನೇ ಸ್ಥಾನ?

|
   ಫೋರ್ಬ್ಸ್ ವಿಶ್ವದ 10 ಅತ್ಯಂತ ಪ್ರಭಾವಿ ನಾಯಕರು | ಈ ಪಟ್ಟಿಯಲ್ಲಿ ನಮ್ಮ ಮೋದಿ ಕೂಡ ಒಬ್ಬರು | Oneindia Kannada

   ವಿವಿಧ ಮಾನದಂಡವನ್ನು ಆಧರಿಸಿ, ಪ್ರತಿಷ್ಠಿತ ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡುವ ವಿಶ್ವದ ಅತ್ಯಂತ ಪ್ರಭಾವಿ ನಾಯಕರುಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡಾ ಸ್ಥಾನ ಪಡೆದಿದ್ದಾರೆ. ಹತ್ತು ಪ್ರಭಾವಿಗಳ ಪಟ್ಟಿಯಲ್ಲಿ ಮೋದಿಯ ಹೆಸರಿದೆ.

   ಫೇಸ್ ಬುಕ್ ಸಂಸ್ಥಾಪಕ ಝುಕರ್ ಬರ್ಗ್, ಬ್ರಿಟಿಷ್ ಪ್ರಧಾನಿ ತೆರೆಸಾ, ಆಪಲ್ ಸಂಸ್ಥೆಯ ಸಿಇಓ ಟಿಮ್ ಕುಕ್ ಮುಂತಾದ ದಿಗ್ಗಜರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಟಾಪ್ ಟೆನ್ ನಲ್ಲಿ ಒಬ್ಬರಾಗಿದ್ದಾರೆ.

   ವಿಶ್ವದ ಅತ್ಯಂತ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮೋದಿವಿಶ್ವದ ಅತ್ಯಂತ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮೋದಿ

   ವಿಶ್ವದ ಪ್ರಭಾವಿ 75 ನಾಯಕರು/ ಉದ್ಯಮಿಗಳನ್ನು ಗುರುತಿಸುವ 2018ರ ಈ ಪಟ್ಟಿಯಲ್ಲಿ ಮೋದಿ ನಂತರ ಸ್ಥಾನ ಪಡೆದ ಇನ್ನೋರ್ವ ಭಾರತೀಯರು ಎಂದರೆ ರಿಲಯನ್ಸ್ ಸಂಸ್ಥೆಯ ಒಡೆಯ ಮುಖೇಶ್ ಅಂಬಾನಿ. 41.2 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಮುಖೇಶ್ 32ನೇ ಸ್ಥಾನದಲ್ಲಿದ್ದಾರೆ.

   ಭಾರತೀಯ ಸಂಜಾತ ಮೈಕ್ರೋಸಾಫ್ಟ್ ಸಿಇಓ ಸತ್ಯ ನಡೇಲಾ ನಲವತ್ತನೇ ಸ್ಥಾನದಲ್ಲಿ, ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್ 12, ಆಲಿಬಾಬ ಮುಖ್ಯಸ್ಥ ಜ್ಯಾಕ್ ಮಾ 21, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟಿನೋ 31ನೇ ಸ್ಥಾನದಲ್ಲಿದ್ದಾರೆ.

   ಫೋರ್ಬ್ಸ್ ಗೇಮ್ ಚೇಂಜರ್ಸ್ ಪಟ್ಟಿಯಲ್ಲಿ ಮುಕೇಶ್ ನಂ. 1ಫೋರ್ಬ್ಸ್ ಗೇಮ್ ಚೇಂಜರ್ಸ್ ಪಟ್ಟಿಯಲ್ಲಿ ಮುಕೇಶ್ ನಂ. 1

   ಝುಕರ್ ಬರ್ಗ್ 13, ತೆರೆಸಾ ಮೇ 14, ಚೀನಾದ ಲಿಕಿಯಾಂಗ್ 15, ಟಿಮ್ ಕುಕ್ 24ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಬಿಡುಗಡೆಗೊಳಿಸಿದ ವಿಶ್ವದ ಅತ್ಯಂತ ಟಾಪ್ ಟೆನ್ ಪ್ರಭಾವಿ ನಾಯಕರ ಪಟ್ಟಿ, ಮುಂದೆ ಓದಿ..

   ಕ್ಸಿ ಜಿನ್ಪಿಂಗ್ , ಪುತಿನ್

   ಕ್ಸಿ ಜಿನ್ಪಿಂಗ್ , ಪುತಿನ್

   ಮೊದಲನೇ ಸ್ಥಾನದಲ್ಲಿ
   ದೇಶ: ಚೀನಾ
   ಹೆಸರು: ಕ್ಸಿ ಜಿನ್ಪಿಂಗ್
   ಹುದ್ದೆ: ಚೀನಾದ ಅಧ್ಯಕ್ಷ

   ಎರಡನೇ ಸ್ಥಾನದಲ್ಲಿ
   ದೇಶ: ರಷ್ಯಾ
   ಹೆಸರು: ವ್ಲಾದಿಮಿರ್ ಪುತಿನ್
   ಹುದ್ದೆ: ರಷ್ಯಾ ಅಧ್ಯಕ್ಷ
   (ಚಿತ್ರದಲ್ಲಿ: ಜಿನ್ಪಿಂಗ್ )

   ಟ್ರಂಪ್, ಜರ್ಮನ್ ಚಾನ್ಸಲರ್

   ಟ್ರಂಪ್, ಜರ್ಮನ್ ಚಾನ್ಸಲರ್

   ಮೂರನೇ ಸ್ಥಾನದಲ್ಲಿ
   ದೇಶ: ಅಮೆರಿಕಾ
   ಹೆಸರು: ಡೊನಾಲ್ಡ್ ಟ್ರಂಪ್
   ಹುದ್ದೆ: ಅಮೆರಿಕಾ ಅಧ್ಯಕ್ಷ

   ನಾಲ್ಕನೇ ಸ್ಥಾನದಲ್ಲಿ
   ದೇಶ: ಜರ್ಮನಿ
   ಹೆಸರು: ಏಂಜೆಲಾ ಮಾರ್ಕೆಲ್
   ಹುದ್ದೆ: ಜರ್ಮನ್ ಚಾನ್ಸಲರ್
   (ಚಿತ್ರದಲ್ಲಿ : ಟ್ರಂಪ್)

   ಅಮೆಜಾನ್ ಮುಖ್ಯಸ್ಥ, ಪೋಪ್

   ಅಮೆಜಾನ್ ಮುಖ್ಯಸ್ಥ, ಪೋಪ್

   ಐದನೇ ಸ್ಥಾನದಲ್ಲಿ
   ದೇಶ: ಅಮೆರಿಕಾ
   ಹೆಸರು: ಜೆಫ್ ಬೆಝೂಶ್
   ಹುದ್ದೆ: ಅಮೆಜಾನ್ ಸಂಸ್ಥೆಯ ಮುಖ್ಯಸ್ಥ

   ಆರನೇ ಸ್ಥಾನದಲ್ಲಿ
   ದೇಶ: ಇಟೆಲಿ (ವ್ಯಾಟಿಕನ್)
   ಹೆಸರು: ಪೋಪ್ ಫ್ರಾನ್ಸಿಸ್
   ಹುದ್ದೆ: ಪೋಪ್, ರೋಮನ್ ಕ್ಯಾಥೋಲಿಕ್ ಚರ್ಚ್
   (ಚಿತ್ರದಲ್ಲಿ: ಜೆಫ್ ಬೆಝೂಶ್)

   ಬಿಲ್ ಗೇಟ್ಸ್, ಸೌದಿ ರಾಜ

   ಬಿಲ್ ಗೇಟ್ಸ್, ಸೌದಿ ರಾಜ

   ಏಳನೇ ಸ್ಥಾನದಲ್ಲಿ
   ದೇಶ: ಅಮೆರಿಕಾ
   ಹೆಸರು: ಬಿಲ್ ಗೇಟ್ಸ್
   ಹುದ್ದೆ: ಬಿಲ್ ಗೇಟ್ಸ್ ಫೌಂಡೇಶನ್ ಮುಖ್ಯಸ್ಥ

   ಎಂಟನೇ ಸ್ಥಾನದಲ್ಲಿ
   ದೇಶ: ಸೌದಿ ಅರೆಬಿಯಾ
   ಹೆಸರು: ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್
   ಹುದ್ದೆ: ಸೌದಿ ಅರೆಬಿಯಾದ ರಾಜ
   (ಚಿತ್ರದಲ್ಲಿ: ಬಿಲ್ಸ್ ಗೇಟ್ಸ್)

   ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ

   ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ

   ಒಂಬತ್ತನೇ ಸ್ಥಾನದಲ್ಲಿ
   ದೇಶ: ಭಾರತ
   ಹೆಸರು: ನರೇಂದ್ರ ಮೋದಿ
   ಹುದ್ದೆ: ಭಾರತದ ಪ್ರಧಾನಿ

   ಹತ್ತನೇ ಸ್ಥಾನದಲ್ಲಿ
   ದೇಶ: ಅಮೆರಿಕಾ
   ಹೆಸರು: ಲ್ಯಾರೀ ಪೇಜ್
   ಹುದ್ದೆ: ಸಿಇಓ, ಗೂಗಲ್

   English summary
   Forbes ten most powerful people in the world 2018 : Indian Prime Minister Narendra Modi stands 9th in the table. Chinese President Xi Jinping, who dethroned Russian President Vladimir Putin as the most influential person on the planet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X