ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಬಾರಿಗೆ USನ ಟೈಮ್ಸ್ ಸ್ಕ್ವೇರ್‌ನಲ್ಲಿ ಮುಸ್ಲಿಮರಿಂದ ತರಾವೀಹ್ ಪ್ರಾರ್ಥನೆ

|
Google Oneindia Kannada News

ಪವಿತ್ರ ರಂಜಾನ್ ಉಪವಾಸ ಆರಂಭವಾದ ಬೆನ್ನಲ್ಲೆ ನೂರಾರು ಮುಸ್ಲಿಮರು ಶನಿವಾರ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ತರಾವೀಹ್ ಪ್ರಾರ್ಥನೆ ಸಲ್ಲಿಸಿದರು. ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ, ಟೈಮ್ಸ್ ಸ್ಕ್ವೇರ್ ರಸ್ತೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಮುಸ್ಲಿಮರು ಟೈಮ್ಸ್ ಸ್ಕ್ವೇರ್‌ನಲ್ಲಿ ಜಮಾಯಿಸಿದ್ದರು. ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಟೈಮ್ಸ್ ಸ್ಕ್ವೇರ್‌ನಲ್ಲಿ ನಮಾಜ್ ಮಾಡಲು ಅನೇಕ ಜನರು ಬೆಂಬಲಿಸುತ್ತಿದ್ದಾರೆ, ಆದರೆ ಹೆಚ್ಚಿನ ಜನರು ಅದನ್ನು ವಿರೋಧಿಸುತ್ತಿದ್ದಾರೆ.

Ramadan 2022 Time Table : ಸೆಹ್ರಿ, ಇಫ್ತಾರ್ ಸಮಯದ ಸಂಪೂರ್ಣ ಪಟ್ಟಿ ಇಲ್ಲಿದೆRamadan 2022 Time Table : ಸೆಹ್ರಿ, ಇಫ್ತಾರ್ ಸಮಯದ ಸಂಪೂರ್ಣ ಪಟ್ಟಿ ಇಲ್ಲಿದೆ

ಗಲ್ಫ್ ಟುಡೇ ವರದಿಯ ಪ್ರಕಾರ, ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೈಮ್ಸ್ ಸ್ಕ್ವೇರ್‌ನಂತಹ ಜನಪ್ರಿಯ ಸ್ಥಳದಲ್ಲಿ ಮುಸ್ಲಿಮರು ನಮಾಜ್ ಮಾಡಿದರು. ಈ ಪ್ರಸಿದ್ಧ ನ್ಯೂಯಾರ್ಕ್ ನಗರದಲ್ಲಿ ರಂಜಾನ್ ಆಚರಿಸಲು ಮತ್ತು ಇಸ್ಲಾಂ ಶಾಂತಿಯ ಧರ್ಮ ಎಂದು ಇತರರಿಗೆ ತಿಳಿಸಲು ಅಮೆರಿಕದಲ್ಲಿ ವಾಸಿಸುವ ಮುಸ್ಲಿಮರು ಬಯಸುತ್ತಾರೆ ಎಂದು ಕಾರ್ಯಕ್ರಮದ ಸಂಘಟಕರು ಹೇಳಿದರು. ವಿಶ್ವಾದಾದ್ಯಂತ ಇಸ್ಲಾಂ ಧರ್ಮದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ ಎಂದು ಸಂಘಟಕರು ತಿಳಿಸಿದ್ದಾರೆ.

For the first time Muslims Perform Taraweeh Prayer at Times Square in US

ಇಸ್ಲಾಂ ಬಗ್ಗೆ ತಪ್ಪು ಕಲ್ಪನೆ ಇದೆ. ಹೀಗಾಗಿ "ನಮ್ಮ ಧರ್ಮದ ಬಗ್ಗೆ ಏನು ತಿಳಿಯದ ಎಲ್ಲರಿಗೂ ನಾವು ವಿವರಿಸಲು ಬಯಸುತ್ತೇವೆ. ಇಸ್ಲಾಂ ಶಾಂತಿಯ ಧರ್ಮವಾಗಿದೆ" ಎಂದು ಸಂಘಟಕರು ತಿಳಿಸಿದ್ದಾರೆ. ಶಾಂತಿಯ ಸಂಕೇತವಾಗಿದೆ ಎಂದು ಸೂಚಿಸಲು ಮುಸಲ್ಮಾನರು ನ್ಯೂಯಾರ್ಕ್ ನಗರದ ಹೃದಯಭಾಗದಲ್ಲಿರುವ ಈ ಸಾಂಕೇತಿಕ ಸ್ಥಳದಲ್ಲಿ ರಂಜಾನ್ ಆಚರಿಸಲು ಬಯಸುತ್ತಾರೆ. ಹೀಗಾಗಿ ಈ ಸಾಂಪ್ರದಾಯಿಕ ಸ್ಥಳದಲ್ಲಿ ತರಾವೀಹ್ ಪ್ರಾರ್ಥನೆ ಮಾಡಲಾಯಿತು.

For the first time Muslims Perform Taraweeh Prayer at Times Square in US

ಮುಸ್ಲಿಂ ಪವಿತ್ರ ಹಬ್ಬ ರಂಜಾನ್ ಉಪವಾಸ ಆರಂಭಗೊಂಡಿದೆ. ಕಳೆದ ಶನಿವಾರ ಸೂರ್ಯೋದಯದಿಂದ (ಏಪ್ರಿಲ್ 2) ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸವನ್ನು ಮುಸ್ಲಿಂಮರು ಮಾಡುತ್ತಾರೆ. ನಂತರ ಮೇ 2ರಂದು ಚಂದ್ರನನ್ನು ನೋಡಿದ ಮುರುದಿನ ಹಬ್ಬವನ್ನು ಆಚರಿಸಲಾಗುತ್ತದೆ. ಚಂದ್ರ ನೋಡಿದ ನಂತರ ರಂಜಾನ್ ಆಚರಣೆ ಮಾಡುವುದರಿಂದ ವಿವಿಧ ದೇಶಗಳು ರಂಜಾನ್ ಆರಂಭವನ್ನು ಒಂದು ದಿನ ಅಥವಾ ಎರಡು ದಿನಗಳ ಅಂತರದಲ್ಲಿ ಆಚರಣೆ ಮಾಡುತ್ತವೆ.

For the first time Muslims Perform Taraweeh Prayer at Times Square in US

ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ಎನ್ನುವ ಭೇದಭಾವದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಿಜಾಬ್, ಹಲಾಲ್ ಕಟ್-ಜಟ್ಕಾ ಕಟ್, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ನಿಷೇಧ, ಮಸೀದ್‌ಗಳಲ್ಲಿನ ಧ್ವನಿವರ್ಧಕಗಳ ನಿಷೇಧ ಹೀಗೆ ಧಾರ್ಮಿಕ ವಿಭಜನೆ ಬಿಕ್ಕಟ್ಟು ಹೆಚ್ಚಾಗುತ್ತಲೇ ಇದೆ. ಈ ನಡುವೆ ಮಸ್ಲಿಮರ ಪವಿತ್ರ ಹಬ್ಬ ರಂಜಾನ್ ಉಪವಾಸ ಆರಂಭವಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಮುಸ್ಲಿಮರು ಯುನೈಟೆಡ್ ಸ್ಟೇಟ್ಸ್‌ ಈ ಸಾಂಪ್ರದಾಯಿಕ ಸ್ಥಳದಲ್ಲಿ ತರಾವೀಹ್ ಪ್ರಾರ್ಥನೆಯನ್ನು ಮಾಡಿದ್ದಾರೆ.

English summary
For the first time, hundreds of Muslims gathered and prayed Taraweeh at Times Square in New York to mark the start of the holy month of Ramadan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X