• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಯಾಟಲೈಟ್ ಚಿತ್ರಗಳು: ದಕ್ಷಿಣ ಆಫ್ರಿಕಾದಲ್ಲಿ ಜುಮಾ ಗಲಭೆ, ಲೂಟಿ, ಬೆಂಕಿ, ಹತ್ಯೆ

|
Google Oneindia Kannada News

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷನ ಬಂಧನನದ ಬಳಿಕ ಶುರುವಾದ ಹಿಂಸಾಚಾರ 8ನೇ ದಿನಕ್ಕೆ ತಿರುಗಿದ್ದು, ಸುಮಾರು 300ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ. ಅದರಲ್ಲಿ ಸುಮಾರು 70 ಮಂದಿ ಭಾರತೀಯರು ಸೇರಿರುವುದು ಆತಂಕ ಮೂಡಿಸಿದೆ. ಮ್ಯಾಕ್ಸರ್ ಟೆಕ್ನಾಲಜೀಸ್ ಸ್ಯಾಟಲೈಟ್ ಮೂಲಕ ಗಲಭೆಯನ್ನು ಸೆರೆಹಿಡಿದಿದೆ.

   ದಕ್ಷಿಣ ಆಫ್ರಿಕಾ ಮಾಜಿ ಪ್ರಧಾನಿ ಜುಮಾ ಬಂಧನದ ನಂತರ ಹಿಂಸಾಚಾರ | Oneindia Kannada

   ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೋಕೋಬ್ ಜೂಮಾ ಅವರು ನ್ಯಾಯಾಂಗ ನಿಂದನೆ ಮಾಡಿದ್ದ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಆದೇಶದಂತೆ ಪೊಲೀಸರು ಬಂಸಿದ್ದಾರೆ. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಶುರುವಾದ ಹಿಂಸಾಚಾರ ದಕ್ಷಿಣ ಆಫ್ರಿಕಾವನ್ನೇ ತಲ್ಲಣಗೊಳಿಸಿದೆ.

   ಸುಮಾರು 200 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾಕ್ಕೆ ಬಂದಿದ್ದ ಭಾರತೀಯರು ಡರ್ಬನ್‍ನಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದು, ಅಲ್ಲಿಯೇ ವ್ಯಾಪಾರ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಸ್ಥಳೀಯ ಪ್ರಜೆಗಳಾಗಿ ಪರಿವರ್ತನೆಯಾಗಿರುವ ಅವರುಗಳ ಮೇಲಿನ ಹಿಂಸಾಚಾರ ಮುಗಿಲು ಮುಟ್ಟಿದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ವೈದ್ಯರಾದ ಶ್ರೀನಿ ಆತಂಕ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ಜೈಲು ಸೇರಿದ ಬಳಿಕ ಗಲಭೆ, 70ಕ್ಕೂ ಹೆಚ್ಚು ಮಂದಿ ಸಾವು ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ಜೈಲು ಸೇರಿದ ಬಳಿಕ ಗಲಭೆ, 70ಕ್ಕೂ ಹೆಚ್ಚು ಮಂದಿ ಸಾವು

   ಡರ್ಬನ್, ಜೋಹಾನ್ಸ್‍ಬರ್ಗ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಕಂಡುಬರುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ ಎಂದು ತಿಳಿದುಬಂದಿದೆ.

   ಸೂಪರ್ ಮಾರ್ಕೆಟ್‍ಗಳು, ಔಷ ಮಳಿಗೆಗಳು, ಪೆಟ್ರೋಲ್ ಬಂಕ್‍ಗಳು ಒತ್ತಿ ಉರಿದಿವೆ. ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಡರ್ಬನ್‍ನಲ್ಲಿರುವ ಕಾವಾಜೂಲಾ ನತಾಲ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕಾಕಾರಿ ಸ್ವಾಸ್ತಿ ಮೋನಿಸಿಂಗ್ ಅವರು ಹೇಳಿದ್ದಾರೆ.

    ಮನೆಯಿಂದ ಹೊರಬರಲಾರದ ಸ್ಥಿತಿ

   ಮನೆಯಿಂದ ಹೊರಬರಲಾರದ ಸ್ಥಿತಿ

   ಇಡೀ ದೇಶಾದ್ಯಂತ ಮನೆಯಿಂದ ಹೊರಬರಲಾರದಂತಹ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಜನ ಊಟ-ತಿಂಡಿಯಿಲ್ಲದೆ ಕಂಗಾಲಾಗಿದ್ದಾರೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲೇ ಹಿಂಸಾಚಾರ ಮುಗಿಲು ಮುಟ್ಟಿರುವುದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಂತೆ ಮಾಡಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿದೆ.

    ಸ್ವಯಂ ನಾಗರಿಕ ಪಡೆ ರಚನೆ

   ಸ್ವಯಂ ನಾಗರಿಕ ಪಡೆ ರಚನೆ

   ಸ್ಥಳೀಯರು ಸ್ವಯಂ ರಕ್ಷಣೆಗಾಗಿ ನಾಗರಿಕ ಪಡೆಗಳನ್ನು ರಚಿಸಿಕೊಂಡು ಕಾವಲಿಗೆ ನಿಂತಿದ್ದಾರೆ. ಆದರೆ, ಏಕಾಏಕಿ 500 ರಿಂದ 600 ಮಂದಿಯ ಗುಂಪು ದಾಳಿ ನಡೆಸುತ್ತಿರುವುದರಿಂದ ಪರಿಸ್ಥಿತಿ ನಿಯಂತ್ರಣ ಕಷ್ಟಸಾಧ್ಯವಾಗುತ್ತಿದೆ. ಪೆಟ್ರೋಲ್ ಬಾಂಬ್‍ಗಳನ್ನು ಎಸೆಯುವುದು, ಗುಂಡು ಹಾರಿಸುವುದು, ಮಾರಕಾಯುಧಗಳಿಂದ ಕಗ್ಗೊಲೆ ಮಾಡುವುದು, ಏಕಾಏಕಿ ನುಗ್ಗಿ ಲೂಟಿ ಮಾಡುವುದು ಸಾಮಾನ್ಯವಾಗಿದೆ. ಅರಾಜಕತೆಯ ವಾತಾವರಣದಲ್ಲಿ ರಕ್ಷಣೆ ಮರೀಚಿಕೆಯಾಗಿದ್ದು, ಭಾರತೀಯ ಮೂಲದವರು ಕಂಗಾಲಾಗಿದ್ದಾರೆ ಎಂದು ಶ್ರೀನಿ ತಿಳಿಸಿದ್ದಾರೆ.

    ಆಹಾರ ತಲುಪಿಸುವುದೂ ಕಷ್ಟ

   ಆಹಾರ ತಲುಪಿಸುವುದೂ ಕಷ್ಟ

   ಸಂಕಷ್ಟದಲ್ಲಿರುವವರಿಗೆ ಆಹಾರ ತಲುಪಿಸಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಎಲ್ಲ ರಸ್ತೆಗಳನ್ನೂ ಬಂದ್ ಮಾಡಲಾಗಿದೆ. ಕಷ್ಟ ಪಟ್ಟು ಮುಂದೆ ಹೋದರೂ ಹಲ್ಲೆ, ಕಗ್ಗೊಲೆಗಳು ನಡೆಯುತ್ತಿವೆ. ಮಕ್ಕಳಿಗೆ ಹಾಲು, ಆಹಾರ ಸಿಗದೆ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದ್ದಾರೆ.

   ದಿನಕಳೆದಂತೆ ಪರಿಸ್ಥಿತಿ ಉದ್ರಿಕ್ತಗೊಳ್ಳುತ್ತಿದ್ದು, ಸರ್ಕಾರ ಹಿಂಸಾಚಾರವನ್ನು ತಡೆಯಲು ಹರಸಾಹಸ ಪಡುತ್ತಿದೆ. ಬಂದೂಕು ಸೇರಿದಂತೆ ಕೆಲವು ಶಸ್ತ್ರಾಸ್ತ್ರಗಳನ್ನು ಕೈಯಲ್ಲಿಡಿದು ರಸ್ತೆಯಲ್ಲೇ ಓಡಾಡುತ್ತಿರುವ ಕೆಲವು ದುಷ್ಕರ್ಮಿಗಳು ಸಿಕ್ಕವರ ಮೇಲೆಲ್ಲ ಗುಂಡು ಹಾರಿಸಿ ಕೊಲ್ಲುತ್ತಿದ್ದಾರೆ.
    ಸೂಪರ್‌ ಮಾರ್ಕೆಟ್‌ಗಳು ನಾಶ

   ಸೂಪರ್‌ ಮಾರ್ಕೆಟ್‌ಗಳು ನಾಶ

   ಕಳೆದ 8 ದಿನಗಳಿಂದ ಸುಮಾರು 78 ಔಷಧ ಅಂಗಡಿಗಳು, ಸುಮಾರು 300ಕ್ಕೂ ಹೆಚ್ಚು ಸೂಪರ್ ಮಾರುಕಟ್ಟೆಗಳನ್ನು ನಾಶಪಡಿಸಲಾಗಿದೆ. ರಾಜಕೀಯ ಪ್ರಚೋದನೆಗೆ ಒಳಗಾದ ಗುಂಪು ಮಾರಕಾಸ್ತ್ರಗಳನ್ನಿಡಿದು ರಸ್ತೆಗಳಲ್ಲಿ ಅಡ್ಡಾಡುತ್ತಿದ್ದು, ಕೈಗೆ ಸಿಕ್ಕವರನ್ನು ಕಗ್ಗೊಲೆ ಮಾಡುತ್ತಿದೆ.

   ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಪ್ರದೇಶದಲ್ಲಿ ರಕ್ಷಣಾ ಪಡೆಗಳ ಸಂಖ್ಯೆ ಸಾಲದಾದ್ದರಿಂದ ಇಂದು ಹೊಸದಾಗಿ 25 ಸಾವಿರ ಯೋಧರನ್ನು ನಿಯೋಜಿಸುವುದಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಂಪೋ ಸಾ ಘೋಷಿಸಿದ್ದಾರೆ. ಹಾಲಿ ಮತ್ತು ಮಾಜಿ ಅಧ್ಯಕ್ಷರು ಆಫ್ರಿಕಾ ನ್ಯಾಷನಲ್ ಕಾಂಗ್ರೆಸ್ ಪಕ್ಷದವರಾಗಿದ್ದು, ಇಬ್ಬರ ಪ್ರತಿಷ್ಠೆಯಿಂದಾಗಿ ರಾಜಕೀಯ ಸಂಘರ್ಷಗಳು ತೀವ್ರವಾಗಿವೆ.

   English summary
   Maxar Technologies has been collecting new satellite imagery of South Africa that shows the scale and intensity of the recent violence and looting that occurred in multiple cities, including Durban and Pietermaritzburg.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X