ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಶಿಂಗ್ ಟಾಯ್ಲೆಟ್ ಮೂಲಕವೂ ಕೊರೊನಾ ಸೋಂಕು ಹರಡಬಹುದು

|
Google Oneindia Kannada News

ಬೀಜಿಂಗ್, ಜೂನ್ 18: ಫ್ಲಶಿಂಗ್ ಟಾಯ್ಲೆಟ್ ಮೂಲಕವೂ ಕೊರೊನಾ ಸೋಂಕು ಹರಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

Recommended Video

Corona takes more than 2000 lives in a single day in India | Oneindia Kannada

ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡುವ ಮುನ್ನ ಕಮೋಡ್‌ನ ಬಾಗಿಲು ಮುಚ್ಚಿ, ವೈರಸ್ ಮಾನವನ ಜೀರ್ಣಾಂಗವ್ಯೂಹದಲ್ಲಿ ಬದುಕಬಲ್ಲದು ಮತ್ತು ಸೋಂಕಿತರ ಮಲದಿಂದ ಅದು ಬೇರೆಯವರಿಗೆ ಹರಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಒಂದೇ ದಿನ 12,881 ಕೊರೊನಾ ಕೇಸ್, 334 ಮಂದಿ ಸಾವುಭಾರತದಲ್ಲಿ ಒಂದೇ ದಿನ 12,881 ಕೊರೊನಾ ಕೇಸ್, 334 ಮಂದಿ ಸಾವು

ಫಿಸಿಕ್ಸ್ ಆಫ್ ಫ್ಯುಯೆಡ್ಸ ಎನ್ನುವ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಫ್ಲಶಿಂಗ್ ಟಾಯ್ಲೆಟ್‌ನಲ್ಲಿ ನೀರಿನ ಹರಿವು ಮತ್ತು ಗಾಳಿಯ ಕುರಿತು ಅಧ್ಯಯನ ಕುರಿತಾದ ಮಾಹಿತಿ ಇದೆ ಅದನ್ನು 'ಟಾಯ್ಲೆಟ್ ಪ್ಲೂಮ್ ಏರೋಸಲ್' ಎಂದು ಕರೆದಿದ್ದಾರೆ.

 Flushing Toilets Can Spread Coronavirus

ಫ್ಲಶಿಂಗ್ ದೊಡ್ಡ ಪ್ರಕ್ಷುಬ್ಧತೆಯನ್ನು ಉಂಟು ಮಾಡುತ್ತದೆ. ಮಲದಿಂದ ಸಣ್ಣ ಪ್ರಮಾಣದ ಕಣ ಕೋಣೆಯನ್ನು ಸೇರಿಕೊಳ್ಳುತ್ತದೆ ಅದು ಬರಿಗಣ್ಣಿಗೆ ಕಾಣಿಸುವುದಿಲ್ಲ. ಅದು ಅಲ್ಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ನೆಲೆಸಿರುತ್ತದೆ. ಶೌಚಾಲಯಕ್ಕೆ ಬಂದ ಬೇರೊಬ್ಬರಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಮಲವಿಸರ್ಜನೆ ಮಾಡಿದ ಬಳಿಕ ಕಮೋಡ್‌ನ ಬಾಗಿಲು ಮುಚ್ಚಿ ಬಳಿಕ ಫ್ಲಶ್ ಮಾಡಿ ಎಂದು ಸಲಹೆ ನೀಡಲಾಗಿದೆ.ಪದೇ ಪದೇ ಶೌಚಾಲಯ ಬಳಕೆ ಮಾಡುವುದರಿಂದ ಶೌಚಾಲಯದಲ್ಲೇ ವೈರಸ್ ಇರುತ್ತದೆ. ಹಾಗೆಯೇ ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದನ್ನು ಕಡಿಮೆ ಮಾಡಿ ಎಂದಿದ್ದಾರೆ.

ಸಾರ್ವಜನಿಕ ಶೌಚಾಲಯಗಳಿಂದ ವೈರಸ್ ಹರಡುತ್ತದೆ ಎಂದು ತಿಳಿದುಬಂದಿದೆ ಆದರೆ ಅದರಿಂದ ಕೊರೊನಾ ವೈರಸ್ ಕೂಡ ಹರಡಬಲ್ಲದೆ ಎನ್ನುವ ಕುರಿತು ಖಚಿತ ಮಾಹಿತಿ ಇಲ್ಲ.

English summary
The next time you flush your toilet, close the lid. A recent study by researchers at Yangzhou University in China claims the novel coronavirus can survive in the human digestive tract and appear in faeces of the infected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X