ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಕಾಣಿಸಿಕೊಂಡ ಹಂದಿ ಜ್ವರ : ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ

|
Google Oneindia Kannada News

ವಾಷಿಂಗ್ಟನ್, ಜುಲೈ 2: ಚೀನಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಹಂದಿ ಜ್ವರ ಹೊಸತಲ್ಲ, ಅದರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ಹೊಸ ರೋಗವಲ್ಲ ಎಂದು ಜನರಿಗೆ ಧೈರ್ಯ ತುಂಬುವುದು ಅತಿ ಮುಖ್ಯ ಎಂದು ಸಭೆಯೊಂದರಲ್ಲಿ ಮೈಕೆಲ್ ರಯಾನ್ ಉಲ್ಲೇಖಿಸಿದ್ದಾರೆ.

ಹೊಸದಾಗಿ ಹುಟ್ಟಿಕೊಂಡಿರುವ ಈ ವೈರಸ್ ಮೂರು ವಂಶಾವಳಿಗಳ ವಿಶಿಷ್ಟ ಮಿಶ್ರಣವಾಗಿದೆ. ಯುರೋಪಿಯನ್ ಮತ್ತು ಏಷ್ಯನ್ ಪಕ್ಷಿಗಳಲ್ಲಿ ಕಂಡುಬರುವ ತಳಿಗಳಿಗೆ ಹೋಲುತ್ತದೆ. 2009 ರ ಸಾಂಕ್ರಾಮಿಕ ರೋಗಕ್ಕೆ ಕಾರಣವಾದ H1N1 ತಳಿ ಮತ್ತು ಏವಿಯನ್, ಮಾನವ ಮತ್ತು ಹಂದಿ ಇನ್ಫ್ಲುಯೆನ್ಸ ವೈರಸ್‌ಗಳಿಂದ ಜೀನ್‌ಗಳನ್ನು ಹೊಂದಿರುವ ಉತ್ತರ ಅಮೆರಿಕಾದ H1N1 ಆಗಿದೆ.

ಕೊರೊನಾ ಕಥೆಯೇ ಮುಗಿದಿಲ್ಲ, ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಪತ್ತೆಕೊರೊನಾ ಕಥೆಯೇ ಮುಗಿದಿಲ್ಲ, ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಪತ್ತೆ

ಈ ಹಂದಿ ಜ್ವರ ಅನೇಕ ವರ್ಷಗಳಿಂದ ಕಾಣಿಸಿಕೊಳ್ಳುತ್ತಿರುವ ರೋಗವಾಗಿದೆ.2011ರಿಂದಲೂ ಈ ರೋಗದ ಮೇಲೆ ಕಣ್ಗಾವಲಿರಿಸಲಾಗಿದೆ. ಚೀನಾದ ಸಂಶೋಧಕರು 2011 ರಿಂದ 2018ರವರೆಗೆ ಹಂದಿಗಳಲ್ಲಿ ಕಂಡುಬರುವ ಇನ್‌ಫ್ಲುನ್ಜಾ ವೈರಸ್‌ಗಳನ್ನು ಪರೀಕ್ಷಿಸಿ , ನಾಲ್ಕು ಯುರೇಷಿಯನ್ ಏವಿಯನ್ ತರಹದ ಎಚ್‌1ಎನ್‌1 ವೈರಸ್(ಜಿ4ಇಎಎಚ್‌ 1ಎನ್‌1) ಎಂಬ ಜೀನೋಟೈಪ್ ಅನ್ನು ಕಂಡುಹಿಡಿದಿದೆ.

Flu Virus With Pandemic Potential Found In China

ಈ ಜಿ4 ಜಿನೋಟೈಪ್ ಬಗ್ಗೆ ಎಚ್ಚರವಹಿಸಬೇಕಿದೆ. ಮುಂದಿನ ಒಂದು ತಿಂಗಳು ಈ ಜ್ವರ ಮುಂದುವರೆಯುತ್ತದೆ ಎಂದು ರಯಾನ್ ಹೇಳಿದ್ದಾರೆ. ಚೀನಾದಲ್ಲಿ ಈಗಾಗಲೇ ಕೊರೊನಾ ವೈರಸ್ ಜನರನ್ನು ಆತಂಕಕ್ಕೀಡು ಮಾಡಿದೆ, ಇದರ ಮಧ್ಯೆಯೇ ಹಂದಿ ಜ್ವರ ಕಾಣಿಸಿಕೊಂಡ ಪರಿಣಾಮ, ಮತ್ತಷ್ಟು ಸಂಕಷ್ಟ ಎದುರಾಗಿದೆ.

English summary
A World Health Organization (WHO) expert said that the recently publicized swine flu in China was not new and that it's under close surveillance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X