ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳು

By Prasad
|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 15 : ಬುಧವಾರ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿರುವ, 17 ಜನರನ್ನು ಬಲಿ ತೆಗೆದುಕೊಂಡಿರುವ ಭೀಕರ ಹತ್ಯಾಕಾಂಡ ಮೈನಡುಗಿಸುವಂತಿದ್ದರೆ. ಅದಕ್ಕಿಂತಲೂ ಬೆಚ್ಚಿಬೀಳಿಸುವಂಥ ಸಂಗತಿಗಳು ಇಲ್ಲಿವೆ ನೋಡಿ.

ಅದೇನೆಂದರೆ, ಅಮೆರಿಕಾದಲ್ಲಿ 2018ನೇ ವರ್ಷದಲ್ಲಿಯೇ ಶಾಲೆಗಳಲ್ಲಿ ಅಥವಾ ಯುನಿವರ್ಸಿಟಿಗಳಲ್ಲಿ ನಡೆದಿರುವ 18ನೇ ಶೂಟೌಟ್ ಇದು. ಶಾಲೆಗಳಲ್ಲಿ ಈ ಪರಿ ಗುಂಡುಗಳ ಸಿಡಿತ ನಡೆಯುತ್ತಿದ್ದರೆ ಮಕ್ಕಳ ಗತಿ ಏನು ಎಂಬ ಚಿಂತೆ ಇಡೀ ಅಮೆರಿಕವನ್ನು ಆವರಿಸಿಕೊಂಡಿದೆ. ಬಂದೂಕಿನ ಹಸಿವಿಗೆ ಇನ್ನೆಷ್ಟು ಬಲಿಯಾಗಬೇಕು?

ಪ್ಲೀಸ್, ಡೋಂಟ್ ಶೂಟ್..! ಫ್ಲೋರಿಡಾ ಶೂಟೌಟ್ ನ ಮನಕಲಕುವ ವಿಡಿಯೋಪ್ಲೀಸ್, ಡೋಂಟ್ ಶೂಟ್..! ಫ್ಲೋರಿಡಾ ಶೂಟೌಟ್ ನ ಮನಕಲಕುವ ವಿಡಿಯೋ

ಇಡೀ ಜಗತ್ತಿಗೆ ದೊಡ್ಡಣ್ಣನಂತೆ ಆಡುತ್ತಿರುವ, ಬೇರೆ ದುಷ್ಟ ದೇಶಗಳ ಮೇಲೆ ದಂಡೆತ್ತಿ ಹೋಗುವ ಅಮೆರಿಕಾಕ್ಕೆ, ತನ್ನ ಒಡಲಲ್ಲಿಯೇ ನಡೆಯುತ್ತಿರುವ ಭೀಕರ ಹತ್ಯಾಕಾಂಡಗಳನ್ನು ನಿಯಂತ್ರಿಸಲು ಆಗುತ್ತಿಲ್ಲ. ಕೆಲವೆಡೆ ಯಾವುದೇ ಹತ್ಯೆಗಳು ನಡೆಯದಿದ್ದರೂ, ಈ ಹತ್ಯಾಕಾಂಡಗಳು ಚಿಂತೆಯ ಮಡಿಲಲ್ಲಿ ಮುಳುಗಿಸಿವೆ.

ಅಮೆರಿಕದಲ್ಲಿ ಗನ್ ಶೂಟೌಟ್ ಗಳು ಎಷ್ಟು ಮಟ್ಟಿಗೆ ನಿರಂತರವಾಗಿವೆಯೆಂದರೆ, ಪ್ರತಿ ಶಾಲೆಯಲ್ಲಿ ಈಬಗೆಯ ಶೂಟೌಟ್ ಗಳು ನಡೆದರೆ, ವಿದ್ಯಾರ್ಥಿಗಳು ಹೇಗೆ ವರ್ತಿಸಬೇಕು, ಯಾವ ರೀತಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಡ್ರಿಲ್ ಗಳು ನಡೆಯುತ್ತಲೇ ಇರುತ್ತವೆ. ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ ತಲೆಕೆಟ್ಟ ಮಕ್ಕಳ ಕೈಯಲ್ಲಿ ಬಂದೂಕು ಸಿಕ್ಕರೆ ಇನ್ನೇನಾದೀತು?

ಫ್ಲಾರಿಡಾದಲ್ಲಿ 2018ರ ಅತ್ಯಂತ ಭೀಕರ ಹತ್ಯಾಕಾಂಡ

ಫ್ಲಾರಿಡಾದಲ್ಲಿ 2018ರ ಅತ್ಯಂತ ಭೀಕರ ಹತ್ಯಾಕಾಂಡ

ಉತ್ತರ ಮಿಯಾಮಿಯಿಂದ 80 ಕಿ.ಮೀ. ದೂದದಲ್ಲಿರುವ ಫ್ಲೋರಿಡಾದ ಪಾರ್ಕ್ ಲ್ಯಾಂಡ್ ನಲ್ಲಿರುವ ಮರ್ಜರಿ ಸ್ಟೋನ್‌ಮನ್ ಡಗ್ಲಾಸ್ ಹೈಸ್ಕೂಲ್ ನಲ್ಲಿ, ಬುಧವಾರ ಫೆಬ್ರವರಿ 14ರಂದು ನಡೆದಿರುವ ಈ ಶೂಟೌಟ್ ಎಲ್ಲಾ ಹತ್ಯಾಕಾಂಡಗಳಿಗಿಂತ ಭೀಕರವಾದದ್ದು. ಹಳೆಯ ವಿದ್ಯಾರ್ಥಿಯೇ ಹಾರಿಸಿದ ಗುಂಡಿಗೆ ಕನಿಷ್ಠಪಕ್ಷ 17 ಜನರು ಹತ್ಯೆಗೀಡಾಗಿದ್ದಾರೆ.

ಕೆಂಟಕಿ ಹೈಸ್ಕೂಲಲ್ಲಿ ರಕ್ತದೋಕುಳಿ

ಕೆಂಟಕಿ ಹೈಸ್ಕೂಲಲ್ಲಿ ರಕ್ತದೋಕುಳಿ

ಜನವರಿ 23ರಂದು ಕೇವಲ 15 ವರ್ಷದ ಬಾಲಕನೊಬ್ಬ ಹ್ಯಾಂಡ್ ಗನ್ ನಿಂದ ಬೇಕಾಬಿಟ್ಟಿ ಫೈರಿಂಗ್ ಮಾಡಿ ಇಬ್ಬರು ವಿದ್ಯಾರ್ಥಿಗಳನ್ನು ಕೊಂದು ಹಾಕಿದ್ದ. ಇದು ಕೆಂಟಕಿ ಹೈ ಸ್ಕೂಲ್ ನ ಶಾಲಾ ದಿನದಂದು ನಡೆದಿತ್ತು. ಈ ರಕ್ತದೋಕುಳಿಯಲ್ಲಿ ಇಬ್ಬರು ಸತ್ತಿದ್ದಲ್ಲದೆ ಹಲವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು.

ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ಮೊರೆತ

ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ಮೊರೆತ

ಇದರ ಮುನ್ನಾದಿನ, ಅಂದರೆ ಜನವರಿ 22ರಂದು, ಟೆಕ್ಸಾಸ್ ನ ಶಾಲೆಯೊಂದರ ಕ್ಯಾಫಿಟೇರಿಯಾದಲ್ಲಿ ನಡೆದ ಗುಂಡಿನ ಮೊರೆತದಲ್ಲಿ ಯುವ ವಿದ್ಯಾರ್ಥಿನಿಯೊಬ್ಬಳು ಗಾಯಗೊಂಡಿದ್ದಳು. ಅದೇ ದಿನ, ನ್ಯೂ ಆರ್ಲೀನ್ಸ್ ಹೈಸ್ಕೂಲ್ ನಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಗೆ 14 ವರ್ಷದ ವಿದ್ಯಾರ್ಥಿ ಗಾಯಗೊಂಡಿದ್ದ.

ಅಯೋವಾ, ವಾಷಿಂಗ್ಟನ್ ಡಿಸಿ, ಕ್ಯಾಲಿಫೋರ್ನಿಯಾ

ಅಯೋವಾ, ವಾಷಿಂಗ್ಟನ್ ಡಿಸಿ, ಕ್ಯಾಲಿಫೋರ್ನಿಯಾ

ಇದಕ್ಕೂ ಮೊದಲು ಅಯೋವಾ, ವಾಷಿಂಗ್ಟನ್ ಡಿಸಿ ಮತ್ತು ಕ್ಯಾಲಿಫೋರ್ನಿಯಾದ ಹಲವಾರು ಶಾಲೆಗಳಲ್ಲಿಯೂ ಶೂಟೌಟ್ ಗಳು ನಡೆದಿವೆ. ಅಮೆರಿಕಾದ ಶಾಲೆಗಳಲ್ಲಿ ಗುಂಡಿನ ಮೊರೆತಗಳು ಸಾಮಾನ್ಯ ಅನ್ನಿಸುವಷ್ಟು ನಡೆಯುತ್ತಲೇ ಇರುತ್ತವೆ. ಮಕ್ಕಳನ್ನು ಶಾಲೆಗಳಿಗೆ ಕಳಿಸುವುದೋ ಬೇಡವೋ ಎನ್ನುವಷ್ಟರ ಮಟ್ಟಿಗೆ ಇವು ಸಹಜವಾಗಿವೆ.

ಫ್ಲೋರಿಡಾಗಿಂತಲೂ ಭೀಕರವಾದ ಶೂಟೌಟ್

ಫ್ಲೋರಿಡಾಗಿಂತಲೂ ಭೀಕರವಾದ ಶೂಟೌಟ್

ಫೆಬ್ರವರಿ 14ರಂದು ನಡೆದ ಶೂಟೌಟ್ ಗಿಂತಲೂ ಭೀಕರವಾದದ್ದು, 2012ರ ಡಿಸೆಂಬರ್ 14ರಂದು ಕನೆಕ್ಟಿಕಟ್ ನ ನ್ಯೂಟೌನ್ ನಲ್ಲಿರುವ ಸ್ಯಾಂಡಿ ಹುಕ್ ಎಲಿಮೆಂಟರಿ ಶಾಲೆಯಲ್ಲಿ ಆಡಂ ಲಾಂಜಾ ಎಂಬ 20 ವರ್ಷದ ಯುವಕ 20 ವಿದ್ಯಾರ್ಥಿಗಳು ಮತ್ತು 6 ಶಿಕ್ಷಕರನ್ನು ಗುಂಡಿಟ್ಟು ಸುಟ್ಟು ಬಿಸಾಕಿದ್ದ.

ಕೊಲೆಗಡುಕರ ಗನ್ ದಾಹಕ್ಕೆ ಇನ್ನೆಷ್ಟು ಬಲಿ?

ಕೊಲೆಗಡುಕರ ಗನ್ ದಾಹಕ್ಕೆ ಇನ್ನೆಷ್ಟು ಬಲಿ?

ಮತ್ತಷ್ಟು ಅಂಕಿಅಂಶಗಳತ್ತ ಗಮನ ಹರಿಸಿದರೆ, ಬಂದೂಕು ನಿಯಂತ್ರಣಕ್ಕಾಗಿ ಹೋರಾಟ ನಡೆಸಿರುವ ಎವೆರಿಟೌನ್ ಪ್ರಕಾರ, 2013ರಿಂದೀಚೆಗೆ ಕನಿಷ್ಠಪಕ್ಷ 291 ಶಾಲೆಗಳಲ್ಲಿ ಶೂಟೌಟ್ ಗಳು ಅಮೆರಿಕಾದಲ್ಲಿ ನಡೆದಿವೆ. ಬಂದೂಕು ಮಾರಾಟವನ್ನು ಕಡಿವಾಣ ಹಾಕಬೇಕೆಂದು, ಲೈಸೆನ್ಸ್ ಬಿಗಿ ಮಾಡಬೇಕು ಎಂದು ಎಷ್ಟೇ ಹೋರಾಟ ನಡೆಸುತ್ತಿದ್ದರೂ ಕಡೆಗೆ ಗೆಲ್ಲುವುದು ಗನ್ ಬೇಕೆಂಬುವವರೇ.

English summary
The deadly gun rampage at a Florida high school on 14th February, that took lives of 17 people, is the 18th of such incident in American schools. Before this shootouts have happened in Texas, Washington, Califormia etc. Who will bell these deadly cats?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X