ಫ್ಲೋರಿಡಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ 'ಇರ್ಮಾ'

Posted By:
Subscribe to Oneindia Kannada

ಮಿಯಾಮಿ, ಸೆಪ್ಟೆಂಬರ್ 11: ವೆನೆಜುವೆಲಾ, ಫ್ರಾನ್ಸ್, ಅಮೆರಿಕ ಸೇರಿದಂತೆ ಸುಮಾರು 5 ದೇಶಗಳಲ್ಲಿ ತನ್ನ ಆರ್ಭಟ ಮುಂದುವರಿಸಿರುವ ಇರ್ಮಾ ಚಂಡ ಮಾರುತವು, ಅಮೆರಿಕದ ಫ್ಲೋರಿಡಾದಲ್ಲಿ ಜನಜೀವನವನ್ನು ಭಾರೀ ಮಟ್ಟದಲ್ಲಿ ಅಲ್ಲೋಲ ಕಲ್ಲೋಲಗಳಿಸಿದೆ.

ಫ್ಲೋರಿಡಾದ 'ಕೀ' ದ್ವೀಪದ ಮೇಲೆ ಹರಿಕೇನ್ - 4ನೇ ಮಟ್ಟದಲ್ಲಿ ಭೀಕರ ಅವಗಢ ಸೃಷ್ಟಿಸಿರುವ ಇರ್ಮಾ ಭಾರತೀಯ ಕಾಲಮಾನ ಸೋಮವಾರ ಮಧ್ಯಾಹ್ನದ ಹೊತ್ತಿಗೆ, 'ಕೀ' ಪಶ್ಚಿಮ ದಿಕ್ಕಿನೆಡೆಗೆ ಇರುವ ಟಂಪಾಗೆ ಕಾಲಿಟ್ಟಿದೆ. ಇರ್ಮಾದ ಆರ್ಭಟಕ್ಕೆ ಫ್ಲೋರಿಡಾದಲ್ಲಿ ಎರಡು ಕಡೆಗೆ ಭೂಕುಸಿತ ಸಂಭವ.

Florida Battered As Hurricane Irma cause 2 landfalls

ತೀವ್ರ ಮಳೆಯಿಂದಾಗಿ, ಕೆಲವು ಎತ್ತರದ ಪ್ರದೇಶಗಳು ದ್ವೀಪಗಳಂತಾಗಿವೆ. ಇದರಿಂದಾಗಿ, ಈ ಪ್ರದೇಶಗಳಲ್ಲಿರುವ ಜನರು ತಮ್ಮ ಮನೆಗಳಿಂದ ಹೊರಬರಲು ಆಗದೆ ನರಳಾಡುವಂಥ ಪರಿಸ್ಥಿತಿ ಉದ್ಭವವಾಗಿದೆ.

ಎಷ್ಟೋ ಮನೆಗಳಲ್ಲಿ ಅವರ ಆಹಾರ ಸಂಗ್ರಹಣೆಯು ಕ್ಷೀಣಿಸುತ್ತಿದ್ದು, ಇದರಿಂದ ಜನರು ಆತಂಕಗೊಂಡಿದ್ದಾರೆ. ಅಲ್ಲದೆ, ಅವರಿಗೆ ವಿದ್ಯುತ್ ಸೌಕರ್ಯವಿಲ್ಲದಂತಾಗಿದೆ. ಮೊಬೈಲ್, ಇಂಟರ್ನೆಂಟ್ ಸಂಪರ್ಕ ಸಂಪೂರ್ಣವಾಗಿ ನಿಂತು ಹೋಗಿರುವುದರಿಂದಾಗಿ ಅವರು ಯಾರನ್ನೂ ಸಂಪರ್ಕಿಸಿ ಸಹಾಯ ಕೋರದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.

ಮನೆಯಿಂದ ಹೊರಗೆ ದೃಷ್ಟಿ ಹಾಯಿಸಿದರೆ, ದೃಷ್ಟಿ ಹರಿಯುವವರೆಗೂ ನೀರು.. ನೀರು... ನೀರು. ಅದು ಬಿಟ್ಟರೆ ಮುರಿದುಬಿದ್ದ, ಉರುಳಿಬಿದ್ದ ಕಟ್ಟಡಗಳ ಅವಶೇಷಗಳು ಕಾಣ ಸಿಗುತ್ತಿವೆ.

ಇದಲ್ಲದೆ, ಮನೆಯ ಮುಂದೆ ನಿಂತ ನೀರಿನಲ್ಲಿ ಹಾವು ಮುಂತಾದ ಪ್ರಾಣಿಗಳನ್ನು ಕಂಡು ಬಾಗಿಲು ತೆರೆಯಲೂ ಹೆದರಿ ಕೂತಿದ್ದಾರೆ ಇಲ್ಲಿನ ಜನ.

ಈಗಾಗಲೇ ಇರ್ಮಾ ಚಂಡ ಮಾರುತವು ಫ್ಲೋರಿಡಾಕ್ಕೆ ಸೇರಿದ ಕೀ ದ್ವೀಪದಲ್ಲಿ ಹಲವಾರು ರಾದ್ಧಾಂತವನ್ನು ಸೃಷ್ಟಿಸಿದೆ. ಗಂಟೆಗೆ 130 ಮೇಲುಗಳ ವೇಗದಲ್ಲಿ ಸಾಗಿ ಬಂದ ಬಿರುಗಾಳಿ, ಚಂಡಮಾರುತವು ಇಲ್ಲಿನ ನಿವಾಸಿಗಳಿಗೆ ಅಪಾರ ಸಂಖ್ಯೆಯಲ್ಲಿ ಹಾನಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hurricane Irma brought ripping winds, tornadoes and storm-surge flooding to much of Florida's lower half on Sunday, as its slow-moving core battered the state's west coast from Key West to Tampa.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ